News

Old Pension ಹಳೇಪಿಂಚಣಿ ವ್ಯವಸ್ಥೆ ಜಾರಿ: ಆರ್‌ಬಿಐ ಎಚ್ಚರಿಕೆ!

20 September, 2023 2:29 PM IST By: Hitesh
Implementation of Pension Scheme: RBI Article Warning!

Pension Scheme ದೇಶದಲ್ಲಿ ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ (RBI)ನ ಪರೋಕ್ಷವಾಗಿ ( ಲೇಖನ) ಇದೀಗ ಎಚ್ಚರಿಕೆ ನೀಡಿದೆ.

ಭಾರತದ ಕೆಲವು ರಾಜ್ಯಗಳು ಈಗಾಗಲೇ ಹಳೇಯ (Old Pension System) ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಕ್ಕೆ

ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ದೇಶದಲ್ಲಿ ಕೆಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ (OPS) ಜಾರಿ ಮಾಡುತ್ತಿರುವುದಕ್ಕೆ ಮುಂದಾಗಿವೆ.

ಈ ಹಿನ್ನೆಲೆಯಲ್ಲಿ ಆರ್‌ಬಿಐ ಒಂದು ನಿರ್ದೇಶನವನ್ನು ತನ್ನ ಲೇಖನದಲ್ಲಿ ಉಲ್ಲೇಖ ಮಾಡಿದ್ದು,

ಹಳೆಯ (Pension Scheme) ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಕ್ಕೆ ಮುಂದಾಗಲು ಇಚ್ಛಿಸುವ ರಾಜ್ಯಗಳನ್ನು

ಚಿಂತನೆಗೆ ದೂಡುವಂತೆ ಮಾಡಿದೆ. 

ರಾಜ್ಯಗಳ ಹಣಕಾಸಿನ ಒತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಆರ್‌ಬಿಐ ತನ್ನ ಲೇಖನವೊಂದರಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಹಳೇ (Pension Scheme)  ಪಿಚಂಣಿ ವ್ಯವಸ್ಥೆ ಜಾರಿ ಮಾಡುವುದರಿಂದಾಗಿ ಮಧ್ಯಮ ಅವಧಿಯಲ್ಲಿ

ಇಲ್ಲವೇ  ಅಥವಾ ದೀರ್ಘಾಕಾಲದಲ್ಲಿ ನಿರ್ವಹಣೆ ಮಾಡುವುದು ಸವಾಲಾಗಿ ಪರಿಣಮಿಸಲಿದೆ.  

ಈ ಬೆಳವಣಿಗೆ ಹಿಮ್ಮುಖ ಚಲನೆ: ಆರ್‌ಬಿಐ

ದೇಶದಲ್ಲಿ ಕೆಲವು ರಾಜ್ಯಗಳು ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿವೆ.

ಈ ಬೆಳವಣಿಗೆ ಅಂದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದು ಹಿಮ್ಮುಖ ಚಲನೆ

ಎಂದು ಆರ್‌ಬಿಐ ಲೇಖನವೊಂದರಲ್ಲಿ ಉಲ್ಲೇಖ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.  

ಪಿಂಚಣಿ  (Pension Scheme) ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಉದ್ದೇಶದಿಂದಾಗಿ ಎನ್‌ಪಿಎಸ್‌ ಜಾರಿಗೆ ತರಲಾಗಿತ್ತು.

ಆದರೆ, ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, OPS ಜಾರಿಯಿಂದ ಆಗುವ ಹಣಕಾಸಿನ ಒಟ್ಟು ಹೊರೆಯು,

ಎನ್‌ಪಿಎಸ್‌ನಿಂದ ಆಗಬಲ್ಲ ಹೊರೆಗಿಂತ ನಾಲ್ಕೂವರೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಎಚ್ಚರಿಸಲಾಗಿದೆ.

ಆದರೆ, ಈ ಲೇಖನದ ಅಭಿಪ್ರಾಯವು ಅರ್‌ಬಿಐನ ಅಭಿಪ್ರಾಯ ಅಲ್ಲ ಎಂದೂ ಹೇಳಲಾಗಿದೆ.

ಇನ್ನು ದೇಶದ  ಚತ್ತೀಸಗಢ, ಜಾರ್ಖಂಡ, ರಾಜಸ್ಥಾನ, ಪಂಜಾಬ್ ಹಾಗೂ ಹಿಮಾಚಲಪ್ರದೇಶ ಸೇರಿದಂತೆ

ವಿವಿಧ ರಾಜ್ಯಗಳು OPS  ಜಾರಿಯನ್ನು ಆಯಾ ರಾಜ್ಯಗಳಲ್ಲಿ ಮಾಡುವುದಾಗಿ ಭರವಸೆ ನೀಡಿವೆ.

ದೀರ್ಘಾವಧಿಯಲ್ಲಿ ಸಮಸ್ಯೆ

ಅಲ್ಪಾವಧಿಯಲ್ಲಿ ಹಳೇಪಿಂಚಣಿ (Pension Scheme)  ವ್ಯವಸ್ಥೆ ಜಾರಿ ಮಾಡುವುದು ಸಮಸ್ಯೆ ಆಗದಿದ್ದರೂ,

ದೀರ್ಘಾವಧಿಯಲ್ಲಿ ಇದು ಸಮಸ್ಯೆ ಆಗುವ ಎಲ್ಲ ಸಾಧ್ಯತೆಗಳೂ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನು ಕರ್ನಾಟಕದಲ್ಲಿಯೂ (Old Pension Scheme)  ಹಳೇಯ ಪಿಂಚಣಿ ವ್ಯವಸ್ಥೆಯನ್ನು

ಜಾರಿ ಮಾಡಬೇಕು ಎಂದು ಹಲವು ಸಂಘಟನೆಗಳು ಆಗ್ರಹಿಸಿವೆ.