News

ರೈತರ ಕಣ್ಣೀರು ಒರೆಸುವ ಟೊಮ್ಯಾಟೊ ಕ್ರಷಿಂಗ್ ' ತಂತ್ರಜ್ಞಾನ

18 January, 2021 4:43 PM IST By:
Tamato

ಟೊಮ್ಯಾಟೋ ಬೆಲೆ ಕೆಲವು ಸಲ ದಿಢೀರನೆ ಕುಸಿಯುತ್ತದೆ ಇದರಿಂದಾಗಿ ರೈತರಿಗೆ ಅಪಾರ ಹಾನಿಯಾಗುತ್ತದೆ. ಟೊಮ್ಯಾಟೋ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗದೆ ರೈತರು ಕೆಲವು ಸಹ ಆಕ್ರೋಷಿತರಾಗಿ ರಸ್ತೆಯಲ್ಲಿ ಸುರಿಯುತ್ತಾರೆ. ಇಂತಹ ರೈತರ ಸಂಕಷ್ಟವನ್ನು ಅರಿತು ತೋಟಗಾರಿಕಾ ಸಂಶೋಧನಾ ಸಂಸ್ಥೆ ( ಐಐಎಚ್ಆರ್) ಹೊಸ ತಂತ್ರಜ್ಞಾನವನ್ನು ಹೊರತಂದಿದೆ.

ಹೌದು ಇತ್ತೀಚೆಗೆ   ರೈತರ ಅನುಕೂಲಕ್ಕಾಗಿ ಈ ಟೊಮೆಟೊ  'ಕ್ರಷಿಂಗ್ ತಂತ್ರಜ್ಞಾನ ' ವನ್ನು ಹೊರತರಲಾಗಿದೆ. ಇದು ನಿಜವಾಗಿಯೂ ನೆರವಾಗಲಿದೆ.   ಈ ಕ್ರಷಿಂಗ್ ತಂತ್ರಜ್ಞಾನದಿಂದ ಟೊಮೆಟೊಗಳನ್ನು ಮಿಶ್ರಣವನ್ನ ಆಗಿ ಪರಿವರ್ತಿಸಬಹುದು. ಮತ್ತು ಅದನ್ನು ಬಹುದಿನಗಳ ಕಾಲ ಅಂದರೆ ಸುಮಾರು ನಾಲ್ಕು ತಿಂಗಳಿನಿಂದ ಒಂದು ವರ್ಷದವರೆಗೂ ಕೆಡದಂತೆ ರೆಫ್ರಿಜಿರೇಟರ್ ಗಳಲ್ಲಿ ಇಡಬಹುದು.. ತಯಾರಿಸಿದ ಮಿಶ್ರಣವನ್ನು ನಾವು ಮನೆಗಳ ಅಡುಗೆಗಳಲ್ಲಿ ಅಥವಾ ಹೋಟೆಲ್ಗಳಲ್ಲಿ ಬಳಸಬಹುದು.

 ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೊರತಂದ ತಂತ್ರಜ್ಞಾನ  ಘಟಕವನ್ನು ತಯಾರಿಸಬೇಕಾದರೆ ಸುಮಾರು ಒಂದು ಲಕ್ಷದವರೆಗೂ ಖರ್ಚಾಗಬಹುದು. ಆದರೆ ಆಧುನಿಕ ದಿನಗಳಲ್ಲಿ ಟೊಮ್ಯಾಟೊ ದರ ನೋಡಿದರೆ. ಮತ್ತು ರಸ್ತೆ ಪಕ್ಕದಲ್ಲಿ ಚೆಲ್ಲುವುದು ನೋಡಿದರೆ. ಈ ರೀತಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು. ಒಂದು ಘಟಕವನ್ನು ನಿರ್ಮಿಸಿ ಹಲವಾರು ಸುತ್ತಮುತ್ತಲಿರುವ ರೈತರುಗಳು ತಮ್ಮ ಹೊಲದಲ್ಲಿ ಬೆಳೆದಿರುವ ಟೊಮ್ಯಾಟೊಗಳನ್ನು ಆ  ಘಟಕಕ್ಕೆ ನೀಡಬಹುದು ಇದರಿಂದ ಮಾರುಕಟ್ಟೆ ಗಳಿಗಿಂತ ಯೋಗ್ಯ ಬೆಲೆಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಘಟಕ ಸ್ಥಾಪನೆ ಮಾಡುವವರು  ಈ ಕೆಳಗೆ ನೀಡಲಾದ ವೆಬ್ ಲಿಂಕನ್ನು ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು director@iihr.res.in ಅಥವಾ 080-23086100 ಸಂಖ್ಯೆಗೆ ಸಂಪರ್ಕಿಸಬಹುದು ' ಎಂದು ಐಐಎಚ್‌ಆರ್‌ ತಿಳಿಸಿದೆ.

ಲೇಖನ: ಮುತ್ತಣ್ಣ ಬ್ಯಾಗೆಳ್ಳಿ