News

IFFCO-MC Crop Science ವತಿಯಿಂದ 'ಕಿಸಾನ್ ಸುರಕ್ಷಾ ಬಿಮಾ ಯೋಜನೆ' ಅಡಿಯಲ್ಲಿ ರೈತರಿಗೆ ಉಚಿತ ಅಪಘಾತ ವಿಮೆ

15 October, 2022 5:36 PM IST By: Maltesh
IFFCO-MC Crop Science Providing Accidental Insurance To Farmers Under KSBY

ಯುದ್ಧಭೂಮಿಯಲ್ಲಿ ಯುದ್ಧ ಮಾಡಲು ಯೋಧನಿಗೆ ಆಯುಧಗಳು ಹೇಗೆ ಬೇಕಾಗುತ್ತವೆಯೋ, ಹಾಗೆಯೇ ರೈತರಿಗೆ ಕೃಷಿ ಮಾಡಲು ಸರಿಯಾದ ಉತ್ಪನ್ನಗಳು, ಸಲಕರಣೆಗಳು ಮತ್ತು ರಸಗೊಬ್ಬರಗಳು ಬೇಕಾಗುತ್ತವೆ. ಇಂದು ನಾವು ರೈತರಿಗೆ  ಗುಣಮಟ್ಟದ ಉತ್ಪನ್ನಗಳು ಮತ್ತು ಸಲಕರಣೆಗಳನ್ನು ಒದಗಿಸುವ ಅನೇಕ ಕಂಪನಿಗಳನ್ನು ಕಾಣುತ್ತೇವೆ, ಹಾಗೆಯೇ ಅವುಗಳಲ್ಲಿ ಇಫ್ಕೋ-ಎಂಸಿ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕೂಡ ಒಂದಾಗಿದೆ. 

ಇಫ್ಕೋ-ಎಂಸಿ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ (IFFCO-MC)  ಅನ್ನು ಆಗಸ್ಟ್ 28, 2015 ರಂದು ಭಾರತೀಯ ರೈತರ ರಸಗೊಬ್ಬರ ಸಹಕಾರಿ ಲಿಮಿಟೆಡ್ (ಇಫ್ಕೋ) ಮತ್ತು ಜಪಾನ್ ನ ಮಿತ್ಸುಬಿಷಿ ಕಾರ್ಪೊರೇಷನ್ ನಡುವೆ ಜಂಟಿ ಉದ್ಯಮವಾಗಿ ಸ್ಥಾಪಿಸಲಾಯಿತು.

ಮೊದಲಿನಿಂದಲೂ ಕಂಪನಿಯು ರೈತ ಸಮುದಾಯದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಅವರಿಗೆ ಸಮಂಜಸವಾದ ಬೆಲೆಗಳಲ್ಲಿ ಉತ್ತಮ ಉತ್ಪನ್ನಗಳನ್ನು   ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

IFFCO-MC ಬೆಳೆಗಾರರಿಗೆ ಅವರ ಬೆಳೆ ಸಂರಕ್ಷಣಾ ಅಗತ್ಯಗಳಿಗಾಗಿ ಸಂಪೂರ್ಣ ಪರಿಹಾರವನ್ನು ಒದಗಿಸುವ ರೀತಿಯಲ್ಲಿ ಉತ್ಪನ್ನ ಪೋರ್ಟ್ ಫೋಲಿಯೊವನ್ನು ರಚಿಸಲಾಗಿದೆ. ಗುಣಮಟ್ಟದ ಉತ್ತಮ ಭರವಸೆಯನ್ನು ಒದಗಿಸಲು ಮತ್ತು ರೈತರಿಗೆ ಆತ್ಮವಿಶ್ವಾಸವನ್ನು ನೀಡಲು, ಇದು  ಸಮರ್ಪಿತ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದೆ.

IFFCO-MC ಬೆಳೆ ವಿಮೆ ಒದಗಿಸುತ್ತದೆ

ಅಕಾಲಿಕ ಮಳೆ ಬೀಳುವಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ, ಪ್ರತಿ ವರ್ಷ ಸಾವಿರಾರು ರೈತರು ಬೆಳೆ ಹಾನಿಯಿಂದ ಬಳಲುತ್ತಿದ್ದಾರೆ. ಇದಲ್ಲದೆ, ಕಳೆದ ತಿಂಗಳು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಬಿಹಾರ ಮುಂತಾದೆಡೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ , ಇಫ್ಕೋ-ಎಂಸಿ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್  'ಕಿಸಾನ್ ಸುರಕ್ಷಾ ಬಿಮಾ ಯೋಜನೆ'ಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಉತ್ಪನ್ನಗಳೊಂದಿಗೆ ರೈತರಿಗೆ ಬೆಳೆ ವಿಮೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಅನಿಶ್ಚಿತತೆಯಿಂದಾಗಿ ಉಂಟಾಗುವ ಆರ್ಥಿಕ ನಷ್ಟದಿಂದ ಬೆಳೆಯನ್ನು ಅನ್ನು ರಕ್ಷಿಸುವುದರಿಂದ ರೈತರಿಗೆ ಬೆಳೆ ವಿಮೆಯು ಮುಖ್ಯವಾಗಿದೆ.

IFFCO-MC Crop Science Providing Accidental Insurance To Farmers Under KSBY

ವಿಷನ್ & ಮಿಷನ್

ಗುಣಮಟ್ಟದ ಬೆಳೆ ಸಂರಕ್ಷಣಾ ಉತ್ಪನ್ನಗಳನ್ನು ಸಮಂಜಸವಾದ ಬೆಲೆಗಳಲ್ಲಿ ಒದಗಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು.

ಸುರಕ್ಷತೆ ಮತ್ತು   ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಿ ರೈತರಿಗೆ ನೈಜ ಉತ್ಪನ್ನಗಳು ಮತ್ತು ಜ್ಞಾನವನ್ನು ಪ್ರವೇಶಿಸಲು ಒಂದು ಮಾರ್ಗವನ್ನು ರಚಿಸುವುದು.

ಹೊಸ ತಲೆಮಾರಿನ ಬೆಳೆ ಸಂರಕ್ಷಣಾ ಉತ್ಪನ್ನಗಳನ್ನು ಗುರುತಿಸುವುದು ಮತ್ತು ಒದಗಿಸುವುದು.