News

ಅತೀವೃಷ್ಟಿಗೆ ಹಾಳಾಯಿತು ಈರುಳ್ಳಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಯಿತು ರೈತರ ಪರಿಸ್ಥಿತಿ

16 November, 2020 2:16 PM IST By:

ಉತ್ತರ ಕರ್ನಾಟಕದ ಜಿಲ್ಲೆಗಳಾದ ಗದಗ್, ಕೊಪ್ಪಳ, ಧಾರವಾಡ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಬೆಳೆದಂತಹ ಈರುಳ್ಳಿ ಬೆಳೆಯು ಅತಿಯಾದ ಮಳೆಗೆ ಸಿಲುಕಿ ಸುಳಿ ರೋಗ ಹಾಗೂ ಬೇರು ಕೊಳೆರೋಗಕ್ಕೆ ತುತ್ತಾಗಿ ಕೊಳೆತು ಕೈಗೆ ಬಂದ ತುತ್ತು ಬಾಯಿಗೆ ಬರಲಾರದ ಹಾಗೆ ಆಗಿದೆ.

ಈ ಬಾರಿ ಈರುಳ್ಳಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಮ್ಮೆ ಮೋಸವಾಗಿದೆ. ಈರುಳ್ಳಿ  ಬೆಲೆ ಗಗನಕ್ಕೇರಲಿದೆ ಎಂಬ ಮಾಹಿತಿಯ ಮೇರೆಗೆ ರೈತರು ಹಲವಾರು ಔಷಧಿಗಳನ್ನು ಸಿಂಪಡಿಸಿ ಎಕರೆಗೆ ಏನಿಲ್ಲವೆಂದರೂ 5 ಸಾವಿರ ರೂಪಾಯಿ ಔಷಧಿಗಳನ್ನು ಸಿಂಪಡಿಸಿದ್ದಾರೆ.

ಒಟ್ಟಿನಲ್ಲಿ ಒಂದು ಎಕರೆಗೆ ಬೀಜಕ್ಕೆ ಸಾವಿರ ರೂಪಾಯಿ, ಬಿತ್ತಲಿಕೆ  ಸಾವಿರ ರೂಪಾಯಿ, ಕಳೆ ನಿರ್ವಹಣೆಗೆ 2000 ಔಷಧ ಸಿಂಪಡಣೆ 5000 ಹೀಗೆ ಎಕರೆಗೆ 9 ರಿಂದ 10 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.  ಇದೀಗ ಈರುಳ್ಳಿ ಬೆಲೆ ಮತ್ತೊಮ್ಮೆ ಕುಸಿದಿದ್ದು, ಇದಕ್ಕೆ ಮುಖ್ಯ ಕಾರಣವೇನದರೆ ಸರ್ಕಾರ ರಿಲೀಸ್ ಮಾಡಿದಂತಹ ಬಫರ್ ಸ್ಟಾಕ್ ಹಾಗೂ ವಿದೇಶದಿಂದ ರಫ್ತುವಿನಲ್ಲಿ ಸಡಿಲಿಕೆಯಂದಾಗಿ ಈರುಳ್ಳಿ ಬೆಳೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದೀಗ ತಾವು ಖರ್ಚು ಮಾಡಿದಂತಹ ಹಣ ಬಂದರೆ ಸಾಕು ಎಂಬ ನಿರೀಕ್ಷೆಯಲ್ಲಿದ್ದಾರೆ ರೈತರು.