ರೈತರಿಗೆ ಒಳ್ಳೆಯದಾಗುವುದಾದರೆ ನಾನು ಗಲ್ಲಿಗೇರಲು ಊಡ ತಯಾರಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಆಲಮಟ್ಟಿ ಜಲಾಶಯವನ್ನು 524 ಮೀರ್ ಎತ್ತರಿಸಲು ಕಾನೂನಾತ್ಮಕ ಹೋರಾಟ ನಡೆಸಿದ್ದೇವೆ. ಇನ್ನೂ ಕೆಲವೇ ದಿನಗಳಲ್ಲಿ ಹೋರಾಟ ಮುಗಿಸಿ ಗೆಲುವು ಕಾಣುವ ವಿಶ್ವಾಸವಿದೆ ಎಂದರು.
ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆ ಹಾಗೂ ಪೈಪ್ ವಿತರಣಾ ಜಾಲ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ಇದನ್ನೂ ಓದಿರಿ:
ಕೆರೂರು ಏತ ನೀರಾವರಿ ಯೋಜನೆಗೆ CM ಬೊಮ್ಮಾಯಿ ಶಂಕುಸ್ಥಾಪನೆ!
“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್
ಆಲಮಟ್ಟಿ ಜಲಾಶಯವನ್ನು 524 ಮೀಟರ್ಗೆ ಎತ್ತರಿಸಿದರೆ ನಮ್ಮ ಪಾಲಿನ 130 ಟಿಎಂಸಿ ನೀರು ಸಿಗಲಿದೆ. ಸದ್ಯ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ 50 ಸಾವಿರ ಕೋಟಿ ರೂ. ಹಣದ ಅವಶ್ಯಕತೆ ಇದೆ. ನ್ಯಾಯಾಲಯದ ಆದೇಶ ಬಂದ ಮೇಲೆ ತಕ್ಷಣ ಎಷ್ಟು ಹಣಬೇಕೋ ಅಷ್ಟು ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪಕ್ಷಗಳು ರೈತರಿಗೆ ಸೇರಿದ್ದು':
ನೀರಾವರಿ ಯೋಜನೆಗೆ ರೈತರು ತಮ್ಮ ಫಲವತ್ತಾದ ಜಮೀನು ಕಳೆದುಕೊಂಡಿದ್ದಾರೆ. ಅವರ ತ್ಯಾಗದಿಂದ ಉತ್ತರ ಕರ್ನಾಟಕ ನೀರಾವರಿಗೆ ಒಳಪಟ್ಟಿದೆ. ನಾನು ನೀರಾವರಿ ಸಚಿವನಾಗಿದ್ದ ವೇಳೆ ನ್ಯಾಯಾಧೀಕರಣದಿಂದ ಕೈ ಕಟ್ಟಿ ಹಾಕಲಾಗಿತ್ತು. ಅದರೊಳಗೆ ಚಿಮ್ಮಲಗಿ, ಗುತ್ತಿ ಬಸವಣ್ಣ, ಮುಳವಾಡ ಏತ ನೀರಾವರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೆ. ಈ ಆಲಮಟ್ಟಿ ಜಲಾಶಯ ಎತ್ತರವಾದರೆ ಈ ಯೋಜನೆಗಳಿಗೆ ನೀರು ಹರಿಸಬಹುದು ಎಂದರು.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
ಕರ್ನಾಟಕದಲ್ಲಿ ಕೇಜ್ರಿವಾಲ್ ಅಲೆ! ಇಲ್ಲೂ ಸೃಷ್ಟಿಸಲಿದ್ದಾರಾ ಆಮ್ ಆದ್ಮಿ ಪಾರ್ಟಿಯ ನೆಲೆ ?
ಸಿಎಂಗೆ ಜೋಡೆತ್ತು, ಹಸು ದಾನ ನೀಡಿದ ರೈತರು: ಪೀರಾಪುರ-ಬೂದಿಹಾಳ ನೀರಾವರಿ ಯೋಜನೆ ಶಂಕುಸ್ಥಾಪನೆಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರಿಗೆ ತಾಳಿಕೋಟೆ ತಾಲೂಕಿನ ಭಂಟನೂರ ರೈತರು ಜೋಡೆತ್ತು ಹಾಗೂ ಒಂದು ಹಸುವನ್ನು ದಾನವಾಗಿ ನೀಡಿದರು. ಈ ವೇಳೆ ಎತ್ತುಗಳಿಗೆ ಗೋ ಪೂಜೆ ನೆರವೇರಿಸಿದರು.
ಏಪ್ರಿಲ್ 25-30 ರವರೆಗೆ 'ಆಜಾದಿ ಕಾ ಅಮೃತ್ ಮಹೋತ್ಸವ'; 'ಕಿಸಾನ್ ಭಾಗಿದರಿ, ಪ್ರಾಥಮಿಕ ಹಮಾರಿ' ಅಭಿಯಾನ!
NITI ಆಯೋಗ್: ಏಪ್ರಿಲ್ 25 ರಂದು 'ನವೀನ ಕೃಷಿ' ಕುರಿತು ಕಾರ್ಯಾಗಾರ!