News

LPG ಸಿಲಿಂಡರ್‌ ಬೆಲೆಯಲ್ಲಿ ಭರ್ಜರಿ ಇಳಿಕೆ

01 May, 2023 9:45 AM IST By: Maltesh
LPG Cylinder Rate

ಮೇ ತಿಂಗಳ ಮೊದಲನೇ ದಿನವೇ ಸರ್ಕಾರ ಗ್ರಾಹಕರಿಗೆ ತುಸು ನೆಮ್ಮದಿ ನೀಡುವ ಸುದ್ದಿಯನ್ನು ನೀಡಿದೆ. ಹೌದು ಸತತ ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ಜನಸಾಮಾನ್ಯರ ಜೇಬಿಗೆ ಎಲ್‌ಪಿಜಿ ಸಿಲಿಂಡರ್‌ ದರ ಸಾಕಷ್ಟು ಹೊರೆಯಾಗಿ ಪರಿಣಮಿಸಿತ್ತು.

ಇದೀಗ ಅದರ ಬೆಲೆಯಲ್ಲಿ ಇಳಿಕೆ ಮಾಡಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಈ ದರಗಳು ಇಂದಿನಿಂದ ಅಂದರೆ ಮೇ 1 ರಿಂದ ಜಾರಿಗೆ ಬರಲಿವೆ. ಸದ್ಯ LPG ಸಿಲಿಂಡರ್‌ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದನ್ನು ಮುಂದೆ ನೋಡೋಣ.

ಈ ಬಾರಿ ಬರೋಬ್ಬರಿ 171 ರೂಪಾಯಿ ಗ್ಯಾಸ್‌ ದರದಲ್ಲಿ ಇಳಿಕೆಯಾಗಿದೆ. ಹೌದು ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 171 ರೂಪಾಯಿ ಇಳಿಕೆಯಾಗಿದೆ. ಅದು ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ನಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.  ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1982 ರೂಪಾಯಿಯ ಆಸುಪಾಸಿನಲ್ಲಿದೆ. ಇತ್ತ ಮುಂಬೈನಲ್ಲಿ 1960, ಚೆನ್ನೈನಲ್ಲಿ 2021 ರೂಪಾಯಿ ನಿಗದಿಪಡಿಸಲಾಗಿದೆ.

ಇತ್ತ ಕಳೆದ ತಿಂಗಾಳದ ಮಾರ್ಚ್‌ನಲ್ಲಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯಲ್ಲಿ 350ರೂಪಾಯಿಗಿಂತ ಹೆಚ್ಚಾಗಿತ್ತು. ಸದ್ಯ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಡಂರ್‌ಬೆಲೆಯಲ್ಲಿ ಹಾಗೂ ಕೈಗಾರಿಕಾ ಸಿಲಿಂಡರ್‌ನ ಬೆಲೆಯಲ್ಲಿ ಹೋಲಿಸಿ ನೋಡಿದಾಗ  ಎರಡು ಸಿಲಿಂಡರ್‌ಗಳ ದರದಲ್ಲಿ ಬರೋಬ್ಬರಿ 171 ರೂಪಾಯಿ ಇಳಿಕೆ ಕಂಡಿರುವುದನ್ನು ಕಾಣಬಹುದಾಗಿದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲ್ಪಡುವ ಗ್ಯಾಸ್‌ಸಿಲಿಂಡರ್‌ಬೆಲೆಯಲ್ಲಿ 1960 ರೂ ಗೆ ಇಳಿಮುಖವಾಗಿದೆ. ಸದ್ಯ ಈ ಹೊಸ ದರಗಳು ಕೂಡ ಮೇ 1 ರಿಂದ ಜಾರಿಗೆ ಬರಲಿವೆ.