News

ಗುಡ್‌ನ್ಯೂಸ್‌: ಚುನಾವಣೆಗೂ ಮುನ್ನವೇ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರೀ ಇಳಿಕೆ

05 May, 2023 10:48 AM IST By: Maltesh
Huge reduction in Edible oil prices

Edible Oil Price : ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಇತ್ತೀಚಿಗೆ ಸರ್ಕಾರ ಜಾಗತಿಕ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರವನ್ನು ನಿಗದಿ ಪಡಿಸುವಂತೆ ಮಾರ್ಗದರ್ಶನವನ್ನು ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಕೆಲವು ಪ್ರಮುಖ ಖಾದ್ಯ ತೈಲ ಕಂಪನಿಗಳು ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಮಾಡಿವೆ. ಇದರಿಂದ ಜನಸಾಮಾನ್ಯರು ಸೇರಿದಂತೆ ಹಲವರಿಗೆ ನೆಮ್ಮದಿ ಸಿಗಲಿದೆ. 

ಅಡುಗೆ ಎಣ್ಣೆ ಬೆಲೆ ಇಳಿಕೆಯಾದರೆ ಹಲವರಿಗೆ ಅನುಕೂಲವಾಗಲಿದೆ. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಇವುಗಳಿಗೆ ಅನುಗುಣವಾಗಿ ದೇಶೀಯವಾಗಿಯೂ ಬೆಲೆ ಇಳಿಕೆ ಮಾಡುವಂತೆ ಅಡುಗೆ ಎಣ್ಣೆ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳೂ ಜನರ ಪಾಲಿಗೆ ಸಕಾರಾತ್ಮಕ ನಿರ್ಧಾರ ಕೈಗೊಂಡಿವೆ. ಅಡುಗೆ ಎಣ್ಣೆಯ ಬೆಲೆಯನ್ನು ಗರಿಷ್ಠ ಶೇ.6ರಷ್ಟು ಕಡಿಮೆ ಮಾಡಲು ಕೆಲವು ಕಂಪನಿಗಳು ಮುಂದಾಗಿವೆ ಎಂದು ವರದಿಗಳಾಗಿವೆ.

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಸದ್ಯ ಮದರ್‌ಡೈರಿ ತುಸು ನಿರಾಳವಾಗುವ ಸುದ್ದಿಯನ್ನು ತನ್ನ ಗ್ರಾಹಕರಿಗೆ ನೀಡಿದೆ, ಹೌದು ಸಾಕಷ್ಟು ತಿಂಗಳುಗಳ ನಂತರ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಪ್ರತಿಷ್ಠಿತ ಮದರ್‌ಡೈರಿಯು ತನ್ನ ಧಾರಾ ಬ್ರ್ಯಾಂಡ್‌ಅಡಿಯಲ್ಲಿ ಮಾರುಕಟ್ಟೆಯಲ್ಲಿ ಪರಿಚಿತವಿರುವ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 10 ರಿಂದ 18 ರೂಪಾಯಿಗಳವರೆಗೆ ಇಳಿಕೆ ಮಾಡಿ ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರುವಂತೆ ತಿಳಿಸಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕೂಡ ಪರಿಣಾಮ ಬೀರಿದ್ದು ಬೆಲೆಯನ್ನು ಇಳಿಕೆ ಮಾಡಲಾಗಿದೆ. ಹೊಸ ಬೆಲೆಯಲ್ಲಿ ಉತ್ಪನ್ನಗಳು ಮುಂದಿನ ವಾರ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಹೇಳಲಾಗುತ್ತಿದೆ.  ಅದಾನಿ ಒಡೆತನಕ್ಕೆ ಸೇರಿದ ಅದಾನಿ ವಿಲ್ಮಾರ್‌ ಗ್ರೂಪ್‌ನ  Fortune ಖಾದ್ಯ ತೈಲದ ಬೆಲೆಯು ಪ್ರತಿ ಲೀಟರ್‌ಗೆ 6 ರೂಪಾಯಿ ಹಾಗೂ Gemini ಬ್ಯ್ರಾಂಡ್‌ನ ಅಡುಗೆ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 8 ರೂಪಾಯಿ ವರೆಗೆ ಇಳಿಕೆಯಾಗುವ ಸಾಧ್ಯತೆಗಳಿದ್ದು ಕಂಪನಿಗಳು ಕೂಡ ಈ ವಿಚಾರಕ್ಕೆ ಸಕಾರಾತ್ಮವಾಗಿ ಸ್ಪಂದಿಸಿವೆ ಎಂದು ಹೇಳಲಾಗುತ್ತಿದೆ.