ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರೀ ಮೊತ್ತದಲ್ಲಿ ಹೆಚ್ಚಳವಾಗಿದ್ದು ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ.
ಕಳೆದ ಕೆಲವು ದಿನಗಳಿಂದ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿರಲಿಲ್ಲ. ಇದೀಗ ತೈಲ ಮಾರುಕಟ್ಟೆಯ ಸಂಸ್ಥೆಗಳು ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವನ್ನು ಮಾಡಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಅಕ್ಟೋಬರ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 209 ರೂಪಾಯಿ ಮೊತ್ತಕ್ಕೆ ಹೆಚ್ಚಳ ಮಾಡಲಾಗಿದೆ.
ಹೀಗಾಗಿ ದೆಹಲಿಯ ಮಾರುಕಟ್ಟೆಯಲ್ಲಿ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,731 ರೂಪಾಯಿ ಆಗಿದೆ.
14.2 ಕೆ.ಜಿಯ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಬೆಲೆ ಪರಿಷ್ಕರಣೆ ಆಗಿಲ್ಲ.
ಸತತ ನಾಲ್ಕು ತಿಂಗಳು ಪರಿಷ್ಕರಣೆ
ಅಕ್ಟೋಬರ್ 1ಕ್ಕೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಕಳೆದ ನಾಲ್ಕು ತಿಂಗಳು ಗಳಿಂದಲೂ
ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದಂತಾಗಿದೆ. ಜುಲೈನಿಂದ ನಿರಂತರವಾಗಿ ನಾಲ್ಕು ತಿಂಗಳಿನಿಂದಲೂ ಸಿಲಿಂಡರ್‌ನ ಬೆಲೆ ಏರಿಕೆ ಮಾಡಲಾಗುತ್ತಿದೆ.
ತೈಲ ನಿಗಮಗಳು ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಮಾನದಂಡಕ್ಕೆ ಅನುಸಾರವಾಗಿ ಬೆಲೆ ಏರಿಕೆ ಮಾಡುತ್ತಿರುವುದಾಗಿ ಹೇಳಿವೆ.
ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬರದಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ದವಸ ಧಾನ್ಯಗಳ ಬೆಲೆ ಹೆಚ್ಚಳವಾಗುವ ಆತಂವೂ ಇದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸಿಲಿಂಡರ್ ಬೆಲೆಯಲ್ಲಿ ಒಮ್ಮೆಗೇ 209 ಹೆಚ್ಚಳವಾಗಿದೆ.
ಹೋಟೆಲ್ ಊಟ ದುಬಾರಿ ?
ನಿರಂತರವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಹೆಚ್ಚಳವಾಗುತ್ತಿರುವುದರಿಂದ ಮತ್ತೆ ಹೋಟೆಲ್ ಊಟದ ದರಗಳು ಹೆಚ್ಚಳವಾಗುವ ಸಾಧ್ಯತೆ ಇದೆ.