News

ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್‌: ಕರ್ತವ್ಯದ ವೇಳೆ ನಿಧನರಾಗುವ ಈ ಉದ್ಯೋಗಿಗಳ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ!

16 August, 2022 10:20 AM IST By: Kalmesh T
Huge gift from the state government: ₹25 lakh compensation announcement,

ಭಾರತದ ಸ್ವಾತಂತ್ರೋತ್ಸವದ ನಿಮಿತ್ತ ಕರ್ನಾಟಕ ರಾಜ್ಯ ಸರ್ಕಾರದಿಂದ ಭರ್ಜರಿ ಯೋಜನೆಗಳ, ಪರಿಹಾರ ಘೋಷಣೆಗಳನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಘೋಷಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ..

ಇದನ್ನೂ ಓದಿರಿ: Postal Jobs: ಯುವಜನತೆಗೆ ಭರ್ಜರಿ ಸುದ್ದಿ: ಅಂಚೆ ಇಲಾಖೆಯಲ್ಲಿದೆ 1 ಲಕ್ಷ ಖಾಲಿ ಹುದ್ದೆ!

Independence Day-2022: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಸ್ವಾತಂತ್ರ್ಯ ದಿನದಂದು ಜನತೆಗೆ ಉಡುಗೊರೆಯನ್ನ ನೀಡಿದ್ದಾರೆ. ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸೇರಿ ಹಲವು ಘೋಷಣೆಗಳನ್ನು ಅವರು ಮಾಡಿದ್ದಾರೆ.

ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗುವ ರಾಜ್ಯದ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವುದಾಗಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದು, 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.

PMEGP: ಯುವಜನತೆಗೆ ಉದ್ಯೋಗ ಮಾಡಲು ಇಲ್ಲಿದೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ 25 ಲಕ್ಷ ಸಾಲ..ಅರ್ಜಿ ಸಲ್ಲಿಸುವುದು ಹೇಗೆ?

ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗುವ ರಾಜ್ಯದ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿರುವ ಬಸವರಾಜ ಬೊಮ್ಮಾಯಿ, ಯಾವುದೇ ವಿಳಂಬ ಮಾಡದೇ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರವನ್ನೂ ನೋಡುವುದಾಗಿ ಘೋಷಿಸಿದ್ದಾರೆ ( CM Announcement ).

ಈ ಏಕತೆಯನ್ನು ಸಾರಲು ನಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಸ್ಪಂದಿಸಿ, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ 'ಹರ್ ಘರ್ ತಿರಂಗ' (HarGharThiranga) ಅಭಿಯಾನವು ಅಭೂತಪೂರ್ವ ಯಶಸ್ಸು ಕಂಡಿದೆ.

ಇದಕ್ಕಾಗಿ ನಾಡ ಬಾಂಧವರಿಗೆ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ನಮ್ಮ ಅಮೃತ ಮಹೋತ್ಸವ ಸಂಭ್ರಮಕ್ಕೆ ಹೆಚ್ಚಿನ ಮೆರುಗು ನೀಡಿದೆ ಎಂದು ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಟೊಮ್ಯಾಟೊ ಕೃಷಿಕರಿಗೆ ದೊರೆಯಲಿದೆ ₹37,500 ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಹರು? ಇಲ್ಲಿದೆ ಮಾಹಿತಿ..

1 ಟ್ರಿಲಿಯನ್‌ ಡಾಲರ್‌ ಕೊಡುಗೆಯ ಮಹತ್ವಾಕಾಂಕ್ಷೆ

ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಸಮೃದ್ಧ ಕರ್ನಾಟಕ ನಿರ್ಮಾಣದ ಗುರಿ ಹಾಕಿಕೊಂಡಿದ್ದೇವೆ ಎಂದಿರುವ ಸಿಎಂ, ಪ್ರಧಾನಿಗಳ ಕನಸಾದ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗೆ ಕನಿಷ್ಠ 1 ಟ್ರಿಲಿಯನ್‌ ಡಾಲರ್‌ಗಳ ಕೊಡುಗೆಯನ್ನು ಕರ್ನಾಟಕ ನೀಡಬೇಕು ಎಂಬ ಮಹತ್ವಾಕಾಂಕ್ಷೆ ಗುರಿ ಹಾಕಿಕೊಂಡಿದ್ದು, ಪಣತೊಟ್ಟು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಕನ್ನಡ ನಾಡಿನಲ್ಲಿ ಕಿತ್ತೂರು ವೀರರಾಣಿ ಚೆನ್ನಮ್ಮ, ವೀರಸಂಗೊಳ್ಳಿ ರಾಯಣ್ಣ ಮೊದಲಾದವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಸಾಮ್ರಾಜ್ಯಶಾಹಿ ಬ್ರಿಟೀಷರ ವಿರುದ್ಧ ನಡೆಸಿದ ಹೋರಾಟ ಮೈ ನವಿರೇಳಿಸುತ್ತದೆ.

ಇವರೆಲ್ಲರ ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ್ಯದ ಸವಿಯುಣ್ಣುವ ಜೊತೆಗೆ ದೇಶದ ಉನ್ನತಿಗಾಗಿ ನಮ್ಮ ಕರ್ತವ್ಯವನ್ನು ಅರಿತು ನಿರ್ವಹಿಸುವುದೇ ಆ ಮಹನೀಯರ ತ್ಯಾಗಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.