ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಣಾಮ ಭತ್ತದ ಉತ್ಪಾದನೆಯಲ್ಲಿ ಭಾರೀ ವ್ಯತ್ಯಾಸವಾಗಿದ್ದು ರಾಜ್ಯದಲ್ಲಿ ಶೀಘ್ರವೇ ಅಕ್ಕಿಯ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ.
ರಾಜ್ಯದಲ್ಲಿ ಭತ್ತದ ಬಿತ್ತನೆ ಪ್ರದೇಶವು ನಿಗದಿತ ಗುರಿಗಿಂತ ಶೇ40 ರಷ್ಟು ಕಡಿಮೆಯಾಗಿದ್ದು ಉತ್ಪಾದನೆಯು ಕಡಿಮೆಯಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಗಟು ಅಕ್ಕಿಯ ಬೆಲೆಯಲ್ಲಿ ಶೇ10 ರಿಂದ 15 ರಷ್ಟು ಬೆಲೆ ಹೆಚ್ಚಳವಾಗಲಿವೆ. ಅಷ್ಟೇ ಅಲ್ಲದೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೂ ಅಕ್ಕಿಯ ಎಫೆಕ್ಟ್ ತಟ್ಟುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
7 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ!
ಅಕ್ಕಿ ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣವನ್ನು ನೋಡುವುದಾದದರೆ ಬಿತ್ತನೆ ಪ್ರದೇಶದ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ. ಹೌದು ಕಳೆದ ವರ್ಷದಲ್ಲಿ ಬಿತ್ತನೆ ಪ್ರದೇಶ 10 ಲಕ್ಷ ಹೆಕ್ಟೇರ್‌ಗೂ ಅಧಿಕವಾಗಿತ್ತು. ಆದರೆ ಈ ಬಾರಿ ಕೇವಲ 6 ರಿಂದ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಹೇಳಲಾಗುತ್ತಿದೆ ಹೀಗಾಗಿ ಅಕ್ಕಿಯ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಮೂಲ ಕಾರಣ ಮಳೆಯ ಕೊರತೆಯಾಗಿದೆ ಸಕಾಲಕ್ಕೆ ಮಳೆ ಬಾರದ ಕಾರಣ ರೈತರು ಭತ್ತದ ಬಿತ್ತನೆಗೆ ಮುಂದಾಗಿಲ್ಲ.
ಶೇ 54 ರಷ್ಟು ಇಳಿಕೆ ಕಂಡ ಕಳೆ ಸುಡುವಿಕೆ.
ದೆಹಲಿ ವಾಯುಮಾಲಿನ್ಯಕ್ಕೆ ಬಹುತೇಕ ಕೊಡುಗೆಯನ್ನು ನೀಡುವ ಪಂಜಾಬ್ ಹರಿಯಾಣ ಭಾಗದಲ್ಲಿನ ಕಳೆ ಸುಡುವಿಕೆ ಈ ಬಾರಿ ಶೇ 54 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಲೋಕಸಭೆಗೆ ತಿಳಿಸಿದರು.ಸಚಿವರು ಲೋಕಸಭೆಯಲ್ಲಿ ಒದಗಿಸಿದ ಅಂಕಿಅಂಶಗಳ ಪ್ರಕಾರ, ಪ್ರಮುಖ ಭತ್ತ ಉತ್ಪಾದಿಸುವ ರಾಜ್ಯಗಳಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಕಟಾವಿನ ನಂತರದ 45 ದಿನಗಳ ಅವಧಿಯಲ್ಲಿ ಕಳೆ ಸುಡುವಿಕೆ 54.2 ಪ್ರತಿಶತ ಕಡಿಮೆಯಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 29 ರ ಅವಧಿಯಲ್ಲಿ