News

ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ....

03 February, 2021 8:48 PM IST By:
Ration card

ಆಧಾರ್ ಮತ್ತು ಪ್ಯಾನ್ ಕಾರ್ಡಿನಂತೆ ರೇಷನ್ ಕಾರ್ಡ್ ಸಹ ದೇಶದ ನಾಗರಿಕರಿಗೆ ಒಂದು ಪ್ರಮುಖ ಗುರುತಿನ ಚೀಟಿಯಾಗಿದೆ.  ಈ ಕಾರ್ಡ್ ಸಹಾಯದಿಂದ ಸಾರ್ವಜನಿಕರಿಗೆ ಪಡಿತರ ಸಿಗುತ್ತದೆ. ಮತ್ತೊಂದೆಡೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅನ್ನು ಐಡಿ ಪುರಾವೆಯಾಗಿ ನೀಡಬಹುದು.

ಸರ್ಕಾರವು ಒನ್ ನೇಷನ್ ಒನ್ ರೇಷನ್ ಸಹ ಘೋಷಣೆ ಮಾಡಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಹ ಅಲ್ಲೇ ನಾವು ರೇಷನ್ ಪಡೆಯುವ ಅವಕಾಶವಿದ್ದರಿಂದ ರೇಷನ್ ಕಾರ್ಡ್ ಮಾಡಿಸದೆ ಇದ್ದವರು, ಅಥವಾ ಹೆಸರು, ವಿಳಾಸ ತಪ್ಪಾಗಿದ್ದರೆ ನೀವು ಈಗ ಯಾವ ಕಚೇರಿಗಳಿಗೂ ಅಲೆದಾಡುವ ಅವಶ್ಯಕತೆಯಲ್ಲ. ಉದ್ದ ಸರದಿಯಲ್ಲೂ ನಿಲ್ಲಬೇಕಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ನಿಮ್ಮ ಪಡಿತರ ಚೀಟಿಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

 ನೀವು ಇನ್ನೂ ಪಡಿತರ ಚೀಟಿ ಮಾಡಿಸದಿದ್ದರೆ, ಈಗಲೇ ರೇಷನ್ ಕಾರ್ಡ್ ಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇದಕ್ಕಾಗಿ ಅತೀ ಸರಳ ವಿಧಾನ ಇಲ್ಲಿ ತಿಳಿಸಲಾಗಿದೆ.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ https://ahara.kar.nic.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಅಂದುಕೊಂಡಿದ್ದೀರಾ. ಈ ಕೆಳಗೆ ನೀಡಿದ ಮಾಹಿತಿಯ ಪ್ರಕಾರ ಒಂದೊಂದಾಗಿ ಆನ್ ಲೈನ್ ನಲ್ಲಿ ಅರ್ಜಿ ತುಂಬಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

 ಮೊದಲ ಹಂತದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ಸೈಟ್  https://ahara.kar.nic.in ಪುಟ ತೆರೆಯಬೇಕು. ಇಲ್ಲಿ ಇ-ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇ ಪಡಿತರ ಚೀಟಿ, ಇ-ಸ್ಥಿತಿ, ಇ- ನ್ಯಾಯಬೆಲೆ ಅಂಗಡಿ ಈ ರೀತಿ ಬೇರೆ ಬೇರೆ ಮಾಹಿತಿ ಕಾಣುತ್ತದೆ. ಅಲ್ಲಿ ನಿಮಗೆ ಬೇಕಾಗಿರುವ ಇ-ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಪಡಿತರ ಚೀಟಿ  ಮೇಲೆ ಕ್ಲಿಕ್ ಮಾಡಿದ ನಂತರ ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಹೊಸ ಪಡಿತರ ಚೀಟಿ, ಉಳಿಸಲಾದ ಅರ್ಜಿ ಮತ್ತು ಅರ್ಜಿ ಹಿಂಪಡೆಯಲು ಎಂಬ ಮೂರು ಆಯ್ಕೆಗಳಿರುತ್ತವೆ. ಇಲ್ಲಿ ಹೊಸ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ಇಲ್ಲಿ ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳು ನಿಮಗೆ ಕಾಣಲಿವೆ.

ಇದರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಅವುಗಳ ಮೇಲೆ ಕ್ಲಿಕ್ ಮಾಡಿ ಮುಂದುವರೆಯೇಕು. ನಂತರ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನೋಂದಾಯಿಸಬೇಕು. ಓಟಿಪಿಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ನಮೂದಿಸಿದ ನಂತರ ನಿಮ್ಮ ಕುಟುಂಬದ ವಿವರ ಭರ್ತಿ ಮಾಡಬೇಕು.  ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ತುಂಬಿದ ನಂತರ ರೇಷನ್ ಕಾರ್ಡ್ ಮುಂದಿನ ಹಂತದಲ್ಲಿ ನಿಮಗೆ ಕಾಣುತ್ತದೆ. ಅಲ್ಲಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು.