News

ಗೂಗಲ್ ನಲ್ಲಿ ಫೋಟೊ ಡೌನ್ಲೋಡ್ ಮಾಡಿಕೊಳ್ಳವಾಗ ಎಚ್ಚರವಿರಲಿ- ಎಲ್ಲಾ ಫೋಟೊಗಳು ಉಚಿತವಿರುವುದಿಲ್ಲ

14 September, 2020 9:31 AM IST By:

ಗೂಗಲ್ ನಲ್ಲಿ ದೊರೆಯುವ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಇಷ್ಟಕ್ಕೆ ಬಂದಂತೆ ಬಳಕೆ ಮಾಡಿಕೊಳ್ಳುವಾಗ ಎಚ್ಚರವಿರಲಿ. ಎಲ್ಲಾ ಫೊಟೋಗಳು ಉಚಿತವಾಗಿರುವುದಿಲ್ಲ. ಸಿಕ್ಕ ಸಿಕ್ಕ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ತೊಂದರೆ ಎದುರಿಸಬೇಕಾಗಿದೆ.

 ತಮಗೆ ಬೇಕಾದ ಸುದ್ದಿಗೆ, ಅಥವಾ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಹಲವು ಬಾರಿ ಫೊಟೋಗಳನ್ನು ಸರ್ಚ್ ಮಾಡುತ್ತಾರೆ. ಆದರೆ ಬಹುತೇಕ ಜನರಿಗೆ ಫೊಟೊಗಳು ಕಾಪಿರೈಟ್ ಆಗುತ್ತದೆಂಬ ವಿಷಯವೇ ಗೊತ್ತಿರುವುದಿಲ್ಲ. ತಮಗರಿವಿಲ್ಲದೆ ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ.ಫೊಟೊಗಳಲ್ಲಿ ವಾಟರ್ ಮಾರ್ಕ್ ಇರುತ್ತದೆ. ಅದು ಕೆಲವು ಸಲ ಗೊತ್ತೇ ಆಗುವುದಿಲ್ಲ. ಝೂಮ್ ಮಾಡಿದರೆ ಮಾತ್ರ ಗೋಚರಿಸುತ್ತದೆ.

ಗೂಗಲ್ ನಲ್ಲಿ ಸಿಗುವ ಎಲ್ಲಾ ಫೊಟೊಗಳು ಉಚಿತವಾಗಿರುವುದಿಲ್ಲ. ಲೈಸನ್ಸ್ ಹೊಂದಿರದ ಚಿತ್ರಗಳೂ ಇರುತ್ತವೆ. ಹಕ್ಕು ಸ್ವಾಮ್ಯದ ಕಾಯ್ದೆಯ ಉಲ್ಲಂಘನೆಯಾಗದಂತೆ ಗೂಗಲ್ ಹೊಸ ಫೀಚರ್ ಜಾರಿಗೆ ತಂದಿದೆ.

ಗೂಗಲ್ ಹೊಸ ಫೀಚರ್, ಇನ್ನು ಮುಂದೆ ಯಾವೆಲ್ಲಾ ಚಿತ್ರಗಳು ಕಾಫಿರೈಟ್ ಹೊಂದಿದೆ. ಯಾವುದು ಉಚಿತವಾಗಿದೆ ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಈ ಮೂಲಕ ಗೂಗಲ್ ಫೋಟೋಗಳ ಬಳಕೆಯನ್ನು ಇನ್ನಷ್ಟು ಸುಗಮವಾಗಿಸಿದೆ.

ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಗೂಗಲ್ ನಿಂದ ಫೋಟೊಗಳನ್ನು ಕಾಪಿರೈಟ್ ಇಲ್ಲದೆ ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಉಚಿತ ಫೊಟೊಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಕುರಿತು ಮಾಹಿತಿ ಇಲ್ಲಿದೆ.....

ಗ್ರೂಗಲ್ ನ ಸರ್ಚ್ ಬಾಕ್ಸ್ ನಲ್ಲಿ  ನಿಮಗೆ ಬೇಕಾದ ಪಿಕ್ಚರ್  ಅಥವಾ ಫೊಟೋ ಟೈಪ್ ಮಾಡಿ.

ರೈಟ್ ಸೈಡ್ ಇರುವ ಬೇಕಾದ ಫೊಟೋ ಮೇಲೆ ಕ್ಲಿಕ್ ಮಾಡಿ

ಪಕ್ಕದಲ್ಲಿ ಫೀಲ್ಟರ್ ಮೆನುವಿನಲ್ಲಿರುವ Tools ಆಯ್ಕೆಯನ್ನು ಕ್ಲಿಕ್ ಮಾಡಿ.

ಕೆಳಗೆ ಸೈಜ್, ಕಲರ್,ಟೈಪ್, ಟೈಮ್ ಯುಸೇಜ್ ರೈಟ್ option ಇರುತ್ತವೆ.

Usage Rights ಎಂಬುದರ ಮೇಲೆ ಕ್ಲಿಕ್ ಮಾಡಿ

ಇಲ್ಲಿ 2 ಆಯ್ಕೆಗಳಿವೆ, ಕ್ರಿಯೆಟಿವ್ ಕಾಮನ್ ಲೈಸನ್ಸ್ ಹಾಗೂ ಕಮರ್ಷಿಯಲ್ ಮತ್ತು ಇತರೆ ಲೈಸನ್ಸ್.

ಕ್ರಿಯೆಟಿವ್ ಕಾಮನ್ ಲೈಸನ್ಸ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಉಚಿತ ಪೋಟೋಗಳು ಕಾಣಸಿಗುತ್ತದೆ.

ಈಗ ನೀವು ನಿಮಗೆ ಬೇಕಾದ ಚಿತ್ರಗಳನ್ನು (ಫೊಟೊಗಳನ್ನು) ಡೌನ್ ಲೋಡ್ ಮಾಡಿ ಕಾಪಿರೈಟ್ copyright ದಿಂದ ಪಾರಾಗಿ. ನಿರಾತಂಕವಾಗಿ ಫೊಟೊಗಳನ್ನು ನೀವು ಬಳಸಬಹುದು.