ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನದಿಂದ ಈಡೀ ಚಿತ್ರರಂಗವೇ ಶಾಕ್‌ಗೆ ಒಳಗಾಗಿತ್ತು. ಯಾಕಂದ್ರೆ ಒಬ್ಬ ಫಿಟ್ ಆಗಿದ್ದ ನಟ ಕಾರ್ಡಿಯಾಕ್ ಅರೆಸ್ಟ್‌ಗೆ ಒಳಗಾಗುತ್ತಾನೆ ಎಂಬುದನ್ನು ಯಾರೂ ಕೂಡ ಊಹಿಸಲು ಸಾದ್ಯವಿರಲಿಲ್ಲ.
ಇನ್ನು ಈ ಬೆಳವಣಿಗೆ ನಡೆದ ಮೇಲೆ ಯುವ ಜನರು ತಮ್ಮ ದಿನ ನಿತ್ಯದ ವರ್ಕೌಟ್ ಮೇಲೆ ಸಾಕಷ್ಟು ನಿಗಾ ವಹಿಸಿಕೊಂಡಿದ್ದಾರೆ.
ಹೌದು ಮೀತಿ ಮೀರಿದ ವ್ಯಾಯಾಮ ದೇಹಕ್ಕೆ ಅಪಾಯಕಾರಿ, ಉತ್ತಮ ಎಂಬ ಅಂತೆ ಕಂತೆಗಳು ಇನ್ನು ಸಮಾಜದಲ್ಲಿ ಚಲಿಸುತ್ತಲೇ ಇವೆ. ಯಾಕಂದ್ರೆ ತಜ್ಞ ವೈದ್ಯರು ಹೇಳುವ ಪ್ರಕಾರ ನಿಯಮಿತ ವ್ಯಾಯಾಮ ಮಾಡುವುದು ದೇಹಕ್ಕೆ ಉತ್ತಮದಾದದು ಎಂದು. ಒಬ್ಬ ಮನುಷ್ಯ ತನ್ನ ಭಾರಕ್ಕೆ ಸಮನಾಗಿ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕೆ ವಿನಃ ಹೆಚ್ಚಿನ ವರ್ಕೌಟ್ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ ಎನ್ನಲಾಗಿದೆ.
ಆಹಾರ ಕ್ರಮ ಸರಿಯಾಗಿರಬೇಕು
ನೀವು ದೇಹದ ತೂಕ ಇಳಿಸಲು ನಿರ್ಧರಿಸಿದ ಮೇಲೆ ನಿರ್ಧಿಷ್ಟವಾದ ಆಹಾರ ಕ್ರಮವನ್ನು ಅನುಸರಿಸಬೇಕು. ತೂಕ ಇಳಿಯಲು ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ವ್ಯಾಯಾಮ ಅತಿ ಮುಖ್ಯವಾಗುತ್ತದೆ.
ನೀವು ನಿಮ್ಮ ದೇಹಕ್ಕೆ ಮತ್ತು ನೀವು ಮಾಡುವ ವ್ಯಾಯಾಮಕ್ಕೆ ತಕ್ಕಂತೆ ಪೋಷಕಾಂಶವಿರುವ ಆಹಾರ ಸೇವನೆ ಮಾಡಲೇಬೇಕು. ಆದರೆ ನಿಮ್ಮ ಆಹಾರ ಅಗತ್ಯಕ್ಕಿಂತ ಹೆಚ್ಚಿರಬಾರದು.. ನಿಮಗೆ ತಿಳಿಯದೇ ಈ ತಪ್ಪು ಮಾಡುತ್ತಿರಬಹುದು. ಸಾಕಷ್ಟು ಪೌಷ್ಟಿಕ ಅಹಾರ ಸೇವಿಸುವುದು ಮತ್ತು ಅನಗತ್ಯವಾದ, ಕ್ಯಾಲೋರಿ ಮತ್ತು ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ತ್ಯಜಿಸುವುದು ಬಹಳ ಮುಖ್ಯ.
ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಹೆಪ್ಪುಗಟ್ಟುವಿಕೆಯನ್ನು ಸೂಚಿಸುತ್ತದೆ, ಇದು ಹೃದಯಕ್ಕೆ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ.
ಹೀಗೆ ರಕ್ತದ ಹರಿವು ಇದ್ದಕ್ಕಿದ್ದಂತೆ ನಿರ್ಬಂಧಿಸಲ್ಪಟ್ಟಾಗ, ಕೊಲೆಸ್ಟ್ರಾಲ್ ಸೇರಿದಂತೆ ಕೊಬ್ಬಿನ ನಿಕ್ಷೇಪಗಳಿಂದ ಪರಿಧಮನಿಯ ಅಪಧಮನಿಗಳು ಕಿರಿದಾಗಬಹುದು, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಕೆಲವೊಂದು ಕ್ರಮಗಳನ್ನು ಅಲವಡಿಸಿಕೊಳ್ಳುವದರಿಂದ ಹೃದಯಾಘಾತದಿಂದ ದೂರವಾಗಿರಬಹುದು.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
1) ಕುಟುಂಬದಲ್ಲಿ ಬೇರೆ ಸದಸ್ಯರಿಗೆ ಹೃದಯ ಕಾಯಿಲೆಯ ಸಮಸ್ಯೆಯಿದ್ದರೆ ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
3) ಹೆಚ್ಚುವರಿ ಸಕ್ಕರೆ ಸೇವನೆ ಮತ್ತು ಕೊಬ್ಬಿನ ಸೇವನೆಯನ್ನು ನಿಯಂತ್ರಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು.
4) ಜೀವನಶೈಲಿಯನ್ನು ಬದಲಾಯಿಸಿ