News

ನಿಮ್ಮ ಬೆಳೆ ಸಾಲಮನ್ನಾ ಆಗಿದೆಯೋ? ಇಲ್ಲವೋ ಎಂಬುದನ್ನು ನೋಡಲು ಇಲ್ಲಿದೆ ಮಾಹಿತಿ...

12 October, 2020 6:40 AM IST By:

ನಿಮ್ಮ ಬೆಳೆ ಸಾಲಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಇನ್ನೂ ಮುಂದೆ ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.....

2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು   ಸಾಲ ಮನ್ನಾ ಯೋಜನೆ ಘೋಷಿಸಿದ್ದರು. ಸಾಲಮನ್ನಾ ಘೋಷಣೆ ಮಾಡಿ ಎರಡು ವರ್ಷ ಕಳೆದರೂ ಇನ್ನೂ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಸುಮಾರು 1.67 ಲಕ್ಷ ರೈತರು ಸಾಲಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಕೆಲವು ರೈತರದ್ದು ಸಾಲಮನ್ನಾ ಹಣ ಬ್ಯಾಂಕಿಗೆ ಜಮೆಯಾಗಿ ವಾಪಸ್ಸು ಹೋಗಿದೆ. ಇನ್ನೂ ಕೆಲವು ರೈತರದ್ದು ಬ್ಯಾಂಕಿಗೆ ಜಮೆಯಾಗಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೆಲವು ಬ್ಯಾಂಕುಗಳಿಂದ ಇದುವರೆಗೆ ಬಹಳಷ್ಟು ರೈತರಿಗೆ ಯಾವುದೇ ಋಣುಮುಕ್ತ ಪತ್ರ ಸಿಕ್ಕಿಲ್ಲ. ರೈತರ ಸಾಲ ಮನ್ನಾ ವಿಷಯವಾಗಿ ಸರ್ಕಾರ ಎಲ್ಲರಿಗೂ ತಿಳಿಸಲು ರೈತರ ಬೆಳೆ ಸಾಲ ಮನ್ನಾ ನೋಡಲು ಒಂದು ವೆಬ್ ಸೈಟ್ ಆರಂಭಿಸಿದೆ. ಇಲ್ಲಿ ಎಲ್ಲಾ ಮಾಹಿತಿ ಗೊತ್ತಾಗುತ್ತದೆ. ಆದರೆ ಸರ್ಕಾರದ ಈ ವೆಬ್ಸೈಸೈಟ್ ನಲ್ಲಿಯೂ ಸಹ ತಾಂತ್ರಿಕ ತೊಂದರೆಯಿಂದ ಸಾಲಮನ್ನಾ ಕುರಿತಂತೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಬಹಳಷ್ಟು ರೈತರ ಅಪವಾದ.. ಕೆಲವು ರೈತರ ಸಾಲಮನ್ನಾ ಆಗಿದ್ದರೂ ಇನ್ನೂ ಬಾಕಿಯಿದೆ ಎಂಬ ಮಾಹಿತಿ ವೆಬಸೈಟ್ ನಲ್ಲಿ ಕಾಣುತ್ತಿರುವುದರಿಂದ ಬಹಳಷ್ಟು ರೈತರು ಸಾಲಮನ್ನಾ ಕುರಿತಂತೆ ಗೊಂದಲದಲ್ಲಿದ್ದಾರೆ. ಏನೇ ಆದರೂ ಸಾಲಮನ್ನಾ ಸ್ಟೇಟಸ್ ಅಂತು ತಿಳಿದುಕೊಳ್ಳಬಹುದು. ನಿಮ್ಮ ಸಾಲಮನ್ನಾ ಹಣ ಜಮೆಯಾಗಿದೆಯೋ ಅಥವಾ ಇಲ್ಲವೋ, ಎಷ್ಟು ಕಂತು ಜಮೆಯಾಗಿದೆ, ಸಾಲಮನ್ನಾ ಸ್ಟೇಟಸ್ ಸೇರಿದಂತೆ ಇತರ ಮಾಹಿತಿ ತಿಳಿದುಕೊಳ್ಳಬಹುದು.

ರೈತರ ಬೆಳೆ ಸಾಲ ಮನ್ನಾ ಚೆಕ್ ಮಾಡೋದು ಹೇಗೆ?

ಆರಂಭದಲ್ಲಿ ಗೂಗಲ್ ನಲ್ಲಿ salamanna status ಅಂತ ಟೈಪ್ ಮಾಡಬೇಕು. ನಂತರ https://clws.karnataka.gov.in/clws/pacs/citizenreport/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಎರಡರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಬೇಕು. ಆಧಾರ್ ನಂಬರ್ ಸೆಲೆಕ್ಟ್ ಮಾಡಿದ್ದರೆ ಬಾಕ್ಸ್ ನಲ್ಲಿ ಆಧಾರ್ ನಂಬರ್ ಟೈಪ್ ಮಾಡಿ ಒಂದು ವೇಳೆ ರೇಷನ್ ಕಾರ್ಡ್ ಸೆಲೆಕ್ಟ್ ಮಾಡಿದ್ದರೆ ರೇಷನ್ ಕಾರ್ಡ್ ನಂಬರ್ ಹಾಕಿ ನಂತರ Fetch Report ಕ್ಲಿಕ್ ಮಾಡಿದರೆ ಸಾಕು.

ಗೂಗಲ್ ನಲ್ಲಿ ಸಾಲಮನ್ನಾ ಸ್ಟೇಟಸ್ ಹಾಗೂ ಲಿಂಕ್ ಓಪನ್ ಮಾಡಲು ತೊಂದರೆಯಾಗುತ್ತಿದ್ದರೆ ಈ ಲಿಂಕ್ https://clws.karnataka.gov.in/clws/pacs/citizenreport/ ಮೇಲೆ ಕ್ಲಿಕ್ ಮಾಡಿ ಡೈರೆಕ್ಟಾ ನಿಮ್ಮ ಆಧಾರ್ ಅಥವಾ ರೇಷನ್ ಕಾರ್ಡ್ ಯಾವುದರೊಂದು ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ನಿಮ್ಮ ಜಿಲ್ಲೆ, ತಾಲೂಕು, ಬ್ಯಾಂಕಿನ ಹೆಸರು, ಬ್ರ್ಯಾಂಚ್, ಹೆಸರು, ಅಕೌಂಟ್ ನಂಬರ್, ಎಷ್ಟು ಹಣ ಸಾಲಮನ್ನಾ ಆಗಿದೆ. ಸ್ಟೇಟಸ್ ಏನಿದೆ ಎಲ್ಲಾ ಮಾಹಿತಿ ಕಾಣುತ್ತದೆ.