News

ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಎಲ್ಪಿಜಿ ಸಿಲಿಂಡರ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ

10 September, 2021 2:24 PM IST By:

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಎಲ್ಪಿಜಿ ಕನೆಕ್ಷನ್ ಕಲ್ಪಿಸಲು ಕೇಂದ್ರ ಸರ್ಕಾರವು ಉಜ್ವಲ 2.0 ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಏನಿದು ಪ್ರಧಾನಮಂತ್ರಿ ಉಜ್ವಲ ಯೋಜನೆ?

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ) ಕುಟುಂಬಗಳಿಗೆ  ಎಲ್ಪಿಜಿ ಸಂಪರ್ಕ ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರವು ಆರಂಭಿಸಿದ ಯೋಜನೆಯೇ ಉಜ್ವಲ ಪ್ರಧಾನಮಂತ್ರಿ ಉಜ್ವಲ ಯೋಜನೆ. ಈ  ಯೋಜನೆಯಡಿ 2018 ರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದಗ ವರ್ಗಗಳ ಸೇರಿದಂತೆ ಒಟ್ಟು ಏಳು ವರ್ಗಗಳ ಮಹಿಳಾ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಲು ಅನುಮತಿಸಲಾಯಿತು.

ನಿಮ್ಮ ಸ್ವಂತ ಮನೆಯಿಲ್ಲದೆ ಎಲ್ಲೋ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ಶಾಶ್ವತ ನಿವಾಸ ಪ್ರಮಾಣ ಪತ್ರ ಅಂದರೆ ವಿಳಾ ಪುರಾವೆ ಇಲ್ಲದಿದ್ದರೂ ಸಹ ಉಜ್ವಲ ಯೋಜನೆ 2.0 ಅಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಬಹುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಉಜ್ವಲ ಯೋಜನೆ ಲಾಭ ಪಡೆದುಕೊಳ್ಳಲು ಅಧಿಕೃತ ವೆಬ್ಸೈಟ್ ಆಗಿರುವ ಈ https://www.pmuy.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಸರ್ಕಾರದ ಉಜ್ವಲ ಯೋಜನೆಯ ಪೇಜ್ ಓಪನ್ ಆಗುತ್ತದೆ.  ಈ ಪುಟದಲ್ಲಿ  ಇಂಡೇನ್, ಭಾರತ್ ಗ್ಯಾಸ್, ಹಾಗೂ ಹೆಚ್.ಪಿ  ವಿತರಕರ ಆಯ್ಕೆ ಬರುತ್ತದೆ. ಮೂರರಲ್ಲಿ ಯಾವುದಾದರೊಂದನ್ನು ನಿಮಗೆ ಹತ್ತಿರವಾಗುವ ವಿತರಕರ ಆಯ್ಕೆ ಮಾಡಿಕೊಂಡು click here to apply ಮೇಲೆ ಕ್ಲಿಕ್ ಮಾಡಬೇಕು. ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ಆಫ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರ್ಮ್ ನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅದನ್ನು ಹತ್ತಿರದ ಗ್ಯಾಸ್ ಏಜೆನ್ಸಿ ಡೀಲರ್ ಗೆ ಸಲ್ಲಿಸಬಹುದು.ಡಾಕುಮೆಂಟ್ ಪರಿಶೀಲನೆಯ ನಂತರ ಸರ್ಕಾರದಿಂದ ಎಲ್.ಪಿ.ಜಿ ಗ್ಯಾಸ್ ಸಂಪರ್ಕ ನೀಡಲಾಗುವುದು.

ಅರ್ಹತೆಗಳು

ಉಜ್ವಲ ಯೋಜನೆಯ ಲಾಭವನ್ನು ಕೇವಲ ಮಹಿಳೆಯರ ಪಡೆದುಕೊಳ್ಳಬಹುದು. ಬಡತನ ಕುಟುಂಬದ  ಅಂದರೆ ಬಿಪಿಎಲ್ ಕಾರ್ಡ್ ನಲ್ಲಿ ಹೆಸರಿರಬೇಕು. ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿಬೇಕು. ಅಂದರೆ 18 ವರ್ಷ ಪೂರ್ಣಗೊಂಡಿರಬೇಕು.ಒಂದೇ ಮನೆಯಲ್ಲ ಈ ಯೋಜನೆಯ ಅಡಿ ಇತರ ಬಿಪಿಎಲ್ ಕಾರ್ಡ್ ನಲ್ಲಿರುವ ಇತರ ಸದಸ್ಯರು ಎಲ್ಪಿಜಿ ಕನೆಕ್ಷನ್ ಪಡೆದಿರಬಾರದು.

ಏನನು ಸಿಗಲಿದೆ?

ಉಜ್ವಲ ಯೋಜನೆ 2.0 ಅಡಿಯಲ್ಲಿ ಫಲಾನುಭವಿಗಳಿಗೆ ಮೊದಲ 14.2 ಕೆಜಿಯ ಸಿಲಿಂಡರ್ ನ್ನು ಉಚಿತವಾಗಿ ನೀಡುವುದರೊಂದಿಗೆ ಸ್ಟವ್ ಸಹ ಉಚಿತವಾಗಿ ನೀಡಿ ಕನೆಕ್ಷನ್ ನೀಡಲಾಗುವುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಉಜ್ವಲ 2.0 ಸಂಪರ್ಕ ಪಡೆಯಲು ಇಕೆವೈಸಿ ಅರ್ಜಿ,  ಆಧಾರ್ ಕಾರ್ಡ್ ಹೊಂದಿರಬೇಕು  ಬಿಪಿಎಲ್ ಕಾರ್ಡ್ ಹೊಂದಿರಬೇಕು. ಬ್ಯಂಕ್ ಅಕೌಂಟ್ ನಂಬರ್ ಹಾಗೂ ಐಎಫ್ಎಸ್ ಸಿ ಕೋಡ್ ಬೇಕು.