News

ರಾಜ್ಯದಲ್ಲಿ ಹೇಗಿದೆ ಭಾನುವಾರದ ಹವಾಮಾನ ?

13 August, 2023 10:47 AM IST By: Hitesh
How is the weather in the state on Sunday?

ರಾಜ್ಯದ ವಿವಿಧ ಭಾಗದಲ್ಲಿ ಸಾಧಾರಣ ಮಳೆ ಮುಂದುವರಿದಿದೆ.

ನೈರುತ್ಯ ಮುಂಗಾರು ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ದುರ್ಬಲವಾಗಿತ್ತು.

ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.

ಮಳೆ ಮಳೆ ಪ್ರಮಾಣ ಸೆಂ.ಮೀಗಳಲ್ಲಿ: ಬಸವನ ಬಾಗೇವಾಡಿ (ವಿಜಯಪುರ ಜಿಲ್ಲೆ) 5 ಸೆಂ.ಮೀ, ಪೊನ್ನೆಂಪೇಟೆ

ಪಿ.ಡಬ್ಲೂ.ಡಿ (ಕೊಡಗು ಜಿಲ್ಲೆ) 4 ಸೆಂ.ಮೀ, ಗಬ್ಬುರು (ರಾಯಚೂರು ಜಿಲ್ಲೆ) 3 ಸೆಂ.ಮೀ, ಸುತ್ತೂರು

ಎ.ಡಬ್ಲೂ ಎಸ್‌. (ಮೈಸೂರು ಜಿಲ್ಲೆ), ಹರದನಹಳ್ಳಿ ಕೆವಿಕೆ (ಚಾಮರಾಜನಗರ) ತಲಾ 2 ಸೆಂ.ಮೀ ,

ಕ್ಯಾಸಲ್‌ ರಾಕ್‌ (ಉತ್ತರ ಕನ್ನಡ ಜಿಲ್ಲೆ) ದೇವದುರ್ಗ (ರಾಯಚೂರು ಜಿಲ್ಲೆ) ಕಕ್ಕೆರಿ (ಯಾದಗಿರಿ ಜಿಲ್ಲೆ),

ವಿಜಯಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವುದು ವರದಿ ಆಗಿದೆ.

ಮುಂದಿನ 24 ಗಂಟೆಗಳು: ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಬಹಳಷ್ಟಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು ಮುನ್ನೆಚ್ಚರಿಕೆ

ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ರಾಜ್ಯದ ಕರಾವಳಿ ಭಾಗದ ವಾತಾವರಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆ

ಇಲ್ಲದೆ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ.

ಮುಂದಿನ 24 ಗಂಟೆಯ ಅವಧಿ: ಮುಂದಿನ 24 ಗಂಟೆಯ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಯಾವುದೇ ದೊಡ್ಡ

ಮಟ್ಟದ ಗಮನಾರ್ಹ ಬದಲಾವಣೆಗಳು ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಹವಾಮಾನ: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.

ಅಲ್ಲದೇ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ

ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.