News

ಅತೀ ಹೆಚ್ಚು ಖಾರವಿರುವ ಮೆಣಸಿನಕಾಯಿಗಳ ಮಾಹಿತಿ ಇಲ್ಲಿದೆ

23 April, 2021 8:44 AM IST By:
chilli

ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರು ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಖುಷ್ಕಿ ಹಾಗೂ ನೀರಾವರಿ ಎರಡರಲ್ಲೂ ಬೆಳೆಯಲಾಗುತ್ತದೆ. ನೀರು ಬಸಿದು ಹೋಗುವಂತಹ ಫಲವತ್ತಾದ ಗೋಡುಮಣ್ಣು ಈ ಬೆಳೆಗ ಉತ್ತಮ, ಮರಳು, ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಸಬಹುದು.

ಕೆಲವು ಅತೀ ಹೆಚ್ಚು ಖಾರ, ಕೆಲವು ಕಡಿಮೆ ತೀಕ್ಷ್ಣ ಮತ್ತು ಅವುಗಳ ರುಚಿ ಇನ್ನೂ ಕೆಲವು ಬಣ್ಣಕ್ಕೆ ಹೆಚ್ಚು ಜನಪ್ರಿಯವಾಗಿವೆ. ಅತೀ ಹೆಚ್ಚು ಖಾರವಿರುವ ಮೆಣಿಸಿನ ಕಾಯಿಯ ತಳಿಗಳ ಮಾಹಿತಿ ಇಲ್ಲಿದೆ.

  1. ಭುತ್ ಜೊಲೊಕಿಯಾ (Bhut Jolokia)

ಭುತ್ ಜೊಲೊಕಿಯಾವನ್ನು 'ಘೋಸ್ಟ್ ಪೆಪ್ಪರ್' ಎಂದೂ ಕರೆಯಲಾಗುತ್ತದೆ. 2007 ರಲ್ಲಿ ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಈ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ನಾವು ತಿನ್ನುವ ಮಾಮೂಲಿ ಮೆಣಸಿನ ಕಾಯಿಗಿಂದ  400 ಪಟ್ಟು ಹೆಚ್ಚು ಖಾರವಾಗಿ ಇರುತ್ತವೆ ಇದು

  1. ಗುಂಟೂರು ಮೆಣಸಿನಕಾಯಿ (Guntoor Chilli)

 ಗುಂಟೂರು ಶ್ರೀಲಂಕಾ, ಬಾಂಗ್ಲಾದೇಶ, ಮಧ್ಯಪ್ರಾಚ್ಯ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ ಡಮ್, ಯುಎಸ್ಎ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹೆಚ್ಚು ಬೆಳೆಸಲಾಗುತ್ತದೆ. ಈ ತಳಿಯು  ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ವಿಶೇಷವಾಗಿ ಇದನ್ನು ಹೆಚ್ಚಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಬೆಳೆಸಲಾಗುತ್ತದೆ.

  1. ಕಾಶ್ಮೀರಿ ಮೆಣಸಿನಕಾಯಿ (Kashmiri Chili)

ಈ ಮೆಣಸಿನಕಾಯಿಯು ಭಾರತದಲ್ಲಿ ಕೆಂಪು ಮೆಣಸಿನಕಾಯಿ ಎಂದೇ ಹೆಸರಾಗಿದೆ. . ಕಾಶ್ಮೀರಿ ಮಿರ್ಚ್ ಪೌಡರ್ ಇಲ್ಲದ ಭಾರತೀಯ ಅಡುಗೆ ಅಪೂರ್ಣವಾಗಿದೆ, ಇದು ಪ್ರತಿಯೊಬ್ಬ ಮನೆಯ ಅಡುಗೆಯವರ ಬಾಯಲ್ಲಿ ನೀರೂರಿಸುವ ಅಡಿಗೆಯಲ್ಲಿ ಬಣ್ಣವನ್ನು ತರುತ್ತದೆ. ಭಾರತದಲ್ಲಿ ಕಂಡುಬರುವ ಇತರ ರೂಪಾಂತರಗಳಿಗೆ ವ್ಯತಿರಿಕ್ತವಾಗಿ, ಇದು ಕಡಿಮೆ ಖಾರವಿರುತ್ತದೆ.

  1. ಬ್ಯಾಡಗಿ ಮೆಣಸಿನಕಾಯಿ (Byadagi Chili)

 ಇದು ಪ್ರಸಿದ್ಧ ಮೆಣಸಿನಕಾಯಿ ಪ್ರಭೇದವಾಗಿದ್ದು, ಹೆಚ್ಚಾಗಿ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ.  ಬ್ಯಾಡಗಿ ಮೆಣಸಿನ ಕಾಯಿಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆಸಲಾಗುತ್ತದೆ. ಹಾಗಾಗಿ ಇದನ್ನು ಬ್ಯಾಡಗಿ ಎಂದು ಕರೆಯಲಾಗುತ್ತದೆ. ಇದು ಗಾಢವಾದ ಕೆಂಪುಬಣ್ಣಹೊಂದಿದೆ.   

5. ಇಂಡೋ-5 ಮೆಣಸಿನಕಾಯಿ (Indo-5)

 ಇದು ಭಾರತದ ಅತ್ಯಂತ ಪ್ರಸಿದ್ಧ ಕೆಂಪು ಮೆಣಸಿನಕಾಯಿಗಳಲ್ಲಿ ಒಂದಾಗಿದೆ, ಇದನ್ನು ಇಂಡೋಮ್-5, ಯುಎಸ್-5 ಮತ್ತು ಎಂಡೋ-5 ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ರವಾನಿಸಲಾಗುತ್ತದೆ. ಭಾರತದಲ್ಲಿ ಇಂಡೋ 5 ಕೆಂಪು ಮೆಣಸಿನಕಾಯಿಯನ್ನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.

6. ವಾರಂಗಲ್ ಚಪ್ಪಟಾ (Varangal)

ಸಣ್ಣ ಮತ್ತು ಆಳವಾದ ಕೆಂಪು ಬಣ್ಣ, ಕಡಿಮೆ ನಯವಾದ ಮತ್ತು ಮಧ್ಯಮ ರುಚಿ, ಚಿಲ್ಲಿ ಟೊಮೆಟೊ ಅಥವಾ ಚಪ್ಪಟಾ ವಾರಂಗಲ್ ತುಂಬಾ ಬಣ್ಣ ಮತ್ತು ಕಡಿಮೆ ಖಾರ ಹೊಂದಿದೆ, ಇದನ್ನು ಸಾಮಾನ್ಯವಾಗಿ ಬಣ್ಣ ಹೊರತೆಗೆಯುವಲ್ಲಿ ಬಳಸಲಾಗುತ್ತದೆ.