News

ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗಾಗಿ ರೈತರಿಂದ ಅರ್ಜಿ ಆಹ್ವಾನ

07 August, 2020 9:29 AM IST By:

ಜಿಲ್ಲಾ ಪಂಚಾಯ್ತಿ ಮತ್ತು ಕೇಂದ್ರ ಪುರಸ್ಕೃತ ‘ಕೃಷಿ ಸಿಂಚಾಯಿ (krishi sinchayi) ಯೋಜನೆಯಡಿ ತೋಟಗಾರಿಕೆ (Horticulture crops) ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿದ ರೈತರಿಗೆ ಎರಡು ಹೆಕ್ಟೇರ್‌ಗೆ ಶೇ 90ರಷ್ಟು ಸಹಾಯಧನ ಸೇರಿದಂತೆ ತೋಟಗಾರಿಕೆ ಇಲಾಖೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ ಅರ್ಹ ರೈತರಿಂದ (Farmer) ಅರ್ಜಿ ಆಹ್ವಾನಿಸಲಾಗಿದೆ.‌

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹಣ್ಣಿನ ಮತ್ತು ಹೂವಿನ ಬೆಳೆಗಳ ಪ್ರದೇಶ ವಿಸ್ತರಣೆ, ನೆರಳು ಪರದೆ, ಕೃಷಿ ಹೊಂಡ, ಮಿನಿ ಟ್ರಾಕ್ಟರ್ ಹಾಗೂ ಸಮಗ್ರ ರೋಗ ಮತ್ತು ಕೀಟಗಳ ನಿಯಂತ್ರಣ ಘಟಕಗಳಿಗೆ ಸಹಾಯಧನ ಸೌಲಭ್ಯವಿರುತ್ತದೆ.

ಅರ್ಜಿಯೊಂದಿಗೆ ಅಗತ್ಯ ದಾಖಲೆ ಲಗತ್ತಿಸಿ ಆಗಸ್ಟ್‌ 10ರೊಳಗಾಗಿ ಸಲ್ಲಿಸಬೇಕು ಎಂದು ಸವಣೂರು  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.