News

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ(N.H.M) ರೈತರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

18 July, 2020 9:39 AM IST By:

ತೋಟಗಾರಿಕೆ ಇಲಾಖೆಯಿಂದ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ (N.H.M.) ಯೋಜನೆಗಳಡಿ ಅರ್ಹ ರೈತರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು (farmers) ಬಾಳೆ ಮತ್ತು ತರಕಾರಿ ಪ್ರದೇಶ ವಿಸ್ತರಣೆ, ವೈಯಕ್ತಿಕ ಕೃಷಿ ಹೊಂಡ (krishi Honda), ಸಾಮೂಹಿಕ ಕೃಷಿ ಹೊಂಡ, ಯಾಂತ್ರೀಕರಣ, ಪ್ಯಾಕ್‍ಹೌಸ್, ಒಣದ್ರಾಕ್ಷಿ ಘಟಕ (dry grapes storage unit), ತಳ್ಳುವ ಗಾಡಿ, ಈರುಳ್ಳಿ ಶೇಖರಣಾ ಘಟಕ (onion storage Unit) ಹಾಗೂ ಅರಿಶಿಣ ಸಂಸ್ಕರಣಾ ಘಟಕಗಳಿಗೆ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಹ ರೈತರು ಭರ್ತಿ ಮಾಡಿದ ಅರ್ಜಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದ (Raita samparka Kendra) ಸಹಾಯಕ ತೋಟಗಾರಿಕೆ ಅಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ 2020 ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಸದರಿ ಕಚೇರಿಯನ್ನು ಸಂಪರ್ಕಿಸಬಹುದು.