News

ನ. 17 ರೊಳಗಾಗಿ ಹುರುಳಿ, ಮುಸುಕಿನ ಜೋಳ ಬೆಳೆಗೆ ನೋಂದಣಿ ಮಾಡಿಸಿ ವಿಮೆ ಸೌಲಭ್ಯ ಪಡೆಯಿರಿ

08 November, 2020 9:30 AM IST By:

ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ರಾಮನಗರ ಜಿಲ್ಲೆಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾಲ್ಲೂಕಿನ ಕಸಬಾ, ಕೂಟಗಲ್ ಮತ್ತು ಕೈಲಾಂಚ ಹೋಬಳಿಗೆ ಹುರುಳಿ (ಮಳೆಯಾಶ್ರಿತ) ಬೆಳೆ ಮತ್ತು ಬಿಡದಿ ಹೋಬಳಿಗೆ ಹುರಳಿ (ಮಳೆಯಾಶ್ರಿತ) ಬೆಳೆ ಮತ್ತು ಮುಸುಕಿನ ಜೋಳ (ನೀರಾವರಿ) ಬೆಳೆಯನ್ನು ಅಧಿಸೂಚಿಸಲಾಗಿದೆ. ರೈತರು ಹುರುಳಿ (ಮಳೆಯಾಶ್ರಿತ) ಬೆಳೆಗೆ ಪ್ರತಿ ಪ್ರತಿ ಎಕರೆಗೆ 108 ಪಾವತಿಸಿ ಇದೇ 17ರ ಒಳಗೆ ನೋಂದಾಯಿಸಬಹುದು. ಮುಸುಕಿನ ಜೋಳ (ನೀರಾವರಿ) ಬೆಳೆಗೆ ಪ್ರತಿ ಪ್ರತಿ ಎಕರೆಗೆ 354 ಪಾವತಿಸಿ ಇದೇ 30ರ ಒಳಗೆ ಹೆಸರು ನೋಂದಾಯಿಸಬಹುದು.

ಆಸಕ್ತ ರೈತರು ಪಹಣಿ, ಬ್ಯಾಂಕ್ ಪಾಸ್ ಪುಸ್ತಕ/ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ವಿವರದೊಂದಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರು ಅಥವಾ ವಿಮೆ ಪ್ರತಿನಿಧಿಗಳಾದ ಯಶ್‌ವಂತ್-900 8637907 ಅವರನ್ನು ಸಂಪರ್ಕಿಸಬಹುದು.

ಹುರುಳಿ ಬೆಳೆಗೆ ವಿಮಾ ಸೌಲಭ್ಯ:

 ಪ್ರಸಕ್ತ ಸಾಲಿನ ಹಿಂಗಾರು ಮಳೆಯಾಶ್ರಿತ ಹುರುಳಿ ಬೆಳೆಗೆ ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ ವಿಮಾ ಮೊತ್ತ  18 ಸಾವಿರ ಇದ್ದು, ರೈತರು ಪ್ರತಿ ಹೆಕ್ಟೇರ್‌ ಪ್ರದೇಶಕ್ಕೆ  270, ಪ್ರತಿ ಎಕೆರೆಗೆ  108 ಹಣವನ್ನು ನ.17 ರ ಒಳಗೆ ಪಾವತಿಸಿ ವಿಮೆ ಸೌಲಭ್ಯ ಪಡೆಯಬಹುದು ಎಂದು ಮಾಗಡಿ ಸಹಾಯಕ ಕೃಷಿ ನಿರ್ದೇಶಕ ಸುಂದರೇಶ್‌.ಆರ್‌.ತಿಳಿಸಿದ್ದಾರೆ. ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಪಸಲ್‌ ಬಿಮಾ ಯೋಜನಾ(ವಿಮೆ) ಅನುಷ್ಠಾನಗೊಳಿಸಲು ಸರ್ಕಾರ ಆದೇಶ ನೀಡಿದೆ. ಆಸಕ್ತರು ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು ಎಂದು ಕೋರಿದ್ದಾರೆ.