News

ಅ.17 ರಂದು ಜೈನು ಕೃಷಿ ಕಾರ್ಯಾಗಾರ, ಅ 11 ರಂದು ಅಡಿಕೆಗೆ ಶಿಲೀಂದ್ರ ಬಾಧೆ ಬಗ್ಗೆ ವಿಚಾರ ಸಂಕೀರಣ

10 October, 2020 9:32 AM IST By:

ಉತ್ತರ ಕನ್ನಡ ಜಿಲ್ಲೆ ಶಿರಸಿ ಕದಂಬ ಮಾರ್ಕೆಟಿಂಗ್ ಆವಾರದಲ್ಲಿ ಅ.17 ರಂದು ಯುವ ರೈತರಿಗಾಗಿ ಜೇನು ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಆರ್ಗ್ಯಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್ ಶಿರಸಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಮೊದಲು ಹೆಸರು ನೊಂದಾಯಿಸಿದ 35 ವರ್ಷದೊಳಗಿನ 25 ಯುವಕ, ಯುವತಿಯರಿಗಾಗಿ ಅವಕಾಶ ನೀಡಲಾಗುವುದು. ಆಸಕ್ತ ಕೃಷಿಕರು ಉತ್ಪಾದಿಸುವ ಜೇನುತುಪ್ಪಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಮಂಜು ಎಂ. ಜೆ.(9448156904) ಅಥವಾ ಮಂಜುನಾಥ ಹೆಗಡೆ(7892957523) ಅವರನ್ನು ಸಂಪರ್ಕಿಸಬಹುದು ಎಂದು ಕದಂಬ ಮಾರ್ಕೆಟಿಂಗ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಡಿಕೆಗೆ ಶಿಲೀಂಧ್ರ ರೋಗ ಬಾಧೆ: 11 ರಂದು ಕಳಸದಲ್ಲಿ ವಿಚಾರಸಂಕಿರಣ

ಚಿಕ್ಕಮಗಳೂರು  ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ, ಮರಸಣಿಗೆ ಗ್ರಾಮಗಳಲ್ಲಿ ಅಡಿಕೆ ಮರಗಳಿಗೆ ತಗುಲಿರುವ ಶಿಲೀಂಧ್ರ ಬಾಧೆ ಬಗ್ಗೆ ಇದೇ 11ರಂದು ಪಟ್ಟಣದಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದೆ.

ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘ ಮತ್ತು ತೋಟ ಗಾರಿಕಾ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಿರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತರಿಗೆ ಅಗತ್ಯ ಸಲಹೆ ನೀಡಲಿದ್ದಾರೆ. ರೋಗವು ಆಸುಪಾಸಿನ ಪ್ರದೇಶಕ್ಕೂ ಹರಡದಂತೆ ಸಮಗ್ರ ಹತೋಟಿ ಮಾಡುವ ಬಗ್ಗೆ ವಿಜ್ಞಾನಿಗಳು ಸಲಹೆ ನೀಡಲಿದ್ದಾರೆ ಎಂದು ತೋಟಗಾರಿಕಾ ಸಹಾಯಕ ಅಧಿಕಾರಿ ಚಂದ್ರಪ್ಪ ತಿಳಿಸಿದ್ದಾರೆ.