News

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!

28 April, 2022 11:18 AM IST By: Kalmesh T
Hindi is not the language of the nation- Kuch Sudeep. Counter to Ajay Devagan

ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟರ್ನಲ್ಲಿ ಹೇಳಿದ್ದ ಹಿಂದಿ ರಾಷ್ಟ್ರ ಭಾಷೆ ಮತ್ತು ನಮ್ಮ ಮಾತೃ  ಭಾಷೆಯಾಗಿದೆ. ನೀವು ಏಕೆ ಹಿಂದಿಯಲ್ಲಿ ಕನ್ನಡ ಸಿನಿಮಾಗಳನ್ನು ಡಬ್ ಮಾಡುತ್ತೀರಿ ಎಂದು ಕೆಣಕಿದ್ದರು. ಇದಕ್ಕೆ ಸರಿಯಾಗಿ ಉತ್ತರಿಸಿದ್ದಾರೆ ಸ್ಯಾಂಡಲ್ವುಡ್ ಹ್ಯಾಂಡ್ಸಮ್ ಕಿಚ್ಚ ಸುದೀಪ್.

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರ 'ಹಿಂದಿ ಇನ್ನು ರಾಷ್ಟ್ರ ಭಾಷೆಯಲ್ಲ' ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ. ಪ್ಯಾನ್-ಇಂಡಿಯನ್ ಚಿತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, 'ಯಾರೋ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಕೇಳಿದ್ದರು.

ಇದನ್ನೂ ಓದಿರಿ

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

-ನಾನು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಬಾಲಿವುಡ್ನವರು ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ ಹೆಣಗಾಡುತ್ತಿದ್ದಾರೆ ಆದರೆ ಅವು ಯಶಸ್ಸು ಆಗುತ್ತಿಲ್ಲ. ಇಂದು ನಾವು ಎಲ್ಲರನ್ನೂ ಮುಟ್ಟುವಂತ ಚಲನಚಿತ್ರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿಯಲ್ಲಿ ಟ್ವೀಟ್ ಮಾಡುತ್ತಾ ಹಾಗಿದ್ದರೆ ನಿಮ್ಮ ಸಿನಿಮಾಗಳನ್ನು ಹಿಂದಿ ಭಾಷೆಗೆ ಏಕೆ ಡಬ್ ಮಾಡುತ್ತೀರಿ. ಹಿಂದಿ ನಿಮ್ಮ ರಾಷ್ಟ್ರ ಭಾಷೆಯಲ್ಲದಿದ್ದರೆ, ನಿಮ್ಮ ಮಾತೃಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಿ ಅದನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ ಎಂದು ಅಜಯ್ ಬರೆದಿದ್ದಾರೆ.

ವ್ಯಾಪಾರಿಗಳಿಗೆ ಗುಡ್‌ನ್ಯೂಸ್‌: Paytm ನೀಡ್ತಿದೆ 5 ಲಕ್ಷ ರೂ ಸಾಲ..! ಅರ್ಜಿ ಸಲ್ಲಿಕೆ ಹೇಗೆ

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ “ಅಜೇಯ್ ದೇವಗನ್ ಸರ್, ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ನಾನು ಕನ್ನಡದಲ್ಲಿ ಟೈಪ್ ಮಾಡಿದರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೇನೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಪ್ರತ್ಯುತ್ತರ ಕೊಟ್ಟ ಕನ್ನಡಿಗರು ದಂಡು!

ಬಾಲಿವುಡ್ ನಟ ಅಜಯ್ ದೇವಗನ್ ಅವರ ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ಕನ್ನಡದ ಬಹುತೇಕ ನಟ-ನಟಿಯರು, ಪತ್ರಕರ್ತರು, ರಾಜಕಾರಣಿಗಳು, ಜನ ಸಾಮಾನ್ಯರು ಟ್ವೀಟರ್, ಫೇಸಬುಕ್, ಸೋಷಿಯಲ್ ಮಿಡಿಯಾಗಳ ಮೂಲಕ ಪ್ರತ್ಯುತ್ತರ ನೀಡುವ ಮೂಲಕ ಕಿಚ್ಚ ಸುದೀಪ್ ಅವರಿಗೆ ಬೆಂಬಲ ನೀಡಿವೆ ಮತ್ತು ಕನ್ನಡಿಗರ ಸ್ವಾಭಿಮಾನದ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

#Recruitment-ಕೃಷಿ ಸಚಿವಾಲಯ ನೇಮಕಾತಿ; 68,000 ಸಂಬಳ!

ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮೂಲ್‌ನಲ್ಲಿ ಭಾರೀ ನೇಮಕಾತಿ..ಪದವಿ ಹೊಂದಿದವರಿಗೆ ಭರ್ಜರಿ ಅವಕಾಶ