ಹೌದು ಕೈತೋಟ ಮತ್ತು ತಾರಸಿ ತೋಟದ ಮೂಲಕ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು.
ಅಲ್ಲದೇ ಇದರಿಂದ ಮನೆಗೆ ಬೇಕಾದ ತರಕಾರಿಗಳನ್ನು ಹಾಗೂ ಸುತ್ತಮುತ್ತಲಿನವರಿಗೂ ನೀವು ನೀಡಬಹುದು.
ಆದರೆ, ಇದನ್ನು ಕಲಿಯುವುದು ಮತ್ತು ಅದನ್ನು ಕರಗತ ಮಾಡಿಕೊಳ್ಳುವುದೇ ಸವಾಲು ಅದಕ್ಕೂ ಇದೀಗ ಮಹತ್ವದ ಅವಕಾಶ ಸಿಕ್ಕಿದೆ.
ಕೈತೋಟ ಮತ್ತು ತಾರಸಿ ತೋಟ ತರಬೇತಿ ನೀಡಲು ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರ, ಹುಳಿಮಾವು, ಬೆಂಗಳೂರಿನಲ್ಲಿ ನವೆಂಬರ್ 18 ರಂದು ಕೈತೋಟ ಮತ್ತು ತಾರಸಿ ತೋಟದ
(Kitchen and Terrace Gardening) ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರವಾಸಿಗಳು, ರೈತರು, ಸಾರ್ವಜನಿಕರು, ಹಾಗೂ ವಿದ್ಯಾರ್ಥಿಗಳು ಕೈತೋಟ ಮತ್ತು ತಾರಸಿ ತೋಟ ತರಬೇತಿಯಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ತರಬೇತಿ ದಿನದಂದು ರೂ. 250/- ಗಳನ್ನು ಜೈವಿಕ ಕೇಂದ್ರ, ಹುಳಿಮಾವು,
ಬೆಂಗಳೂರು ಕಛೇರಿಯಲ್ಲಿ ಪಾವತಿಸಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449833153, 9066764248, 9399813893 ಅಥವಾ sadh.co23@gmail.com
jaivikakendra.hulimavu@gmail.com ಭೇಟಿ ನೀಡಬಹುದು
ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.