News

ಮುಖದಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌!

21 October, 2022 4:12 PM IST By: KJ Staff
ಮುಖದಕಾಂತಿ

ಮುಖದಕಾಂತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಸಿಂಪಲ್‌ ಟಿಪ್ಸ್‌ಗಳು (simple tips)…..

ಇದನ್ನೂ ಓದಿರಿ: Sitrang Cyclone Effect: ಮುಂದಿನ 5 ದಿನ ರಾಜ್ಯದಲ್ಲಿ ಧಾರಾಕಾರ ಗಾಳಿ-ಮಳೆ! ಯೆಲ್ಲೊ ಅಲರ್ಟ್‌ ಘೋಷಣೆ

 

face growth tips: ಹವಾಮಾನ ಬದಲಾದಂತೆಲ್ಲ ಮುಖದಕಾಂತಿ ಕಡಿಮೆ ಆಗುವ ಸಾಧ್ಯತೆ ಇದೆ. ಅಲ್ಲದೇ ಕೂದಲು ಉದುರುವುದು ಸೇರಿದಂತೆ ಹಲವು ಸಮಸ್ಯೆಗಳು ಸೃಷ್ಟಿ ಆಗುವುದೂ ಇದೆ.

ಸೌಂದರ್ಯವೃದ್ಧಿಗೆ ಬಳಸುವ ವಸ್ತುಗಳಲ್ಲಿ ತೆಂಗಿನ ಎಣ್ಣೆಗೆ ಅಗ್ರವಾದ ಸ್ಥಾನವಿದೆ.

ಚರ್ಮದ ಸಮಸ್ಯೆ ಮತ್ತು ಕೂದಲುದುರುವಿಕೆ ಎರಡಕ್ಕೂ ತು೦ಬಾ ಸಹಕಾರಿಯಾಗಿದೆ. 

ಇದನ್ನೂ ಓದಿರಿ: Farmers Helpline: ರೈತರ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭ!

ತೆಂಗಿನ ಎಣ್ಣೆಗೆ ತ್ವಚೆಯ ಸೌಂದರ್ಯ ಕಾಪಾಡೋ ಗುಣ, ರಕ್ಷಣೆ ಹಾಗೂ ರೋಗನಿರೋಧ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.  

ಒಣ ತ್ವಚೆ ಇರುವವರು ವಾರಕ್ಕೆರಡು ಅಥವಾ ಮೂರು ಬಾರಿ ಸ್ವಲ್ಪ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ 5 ನಿಮಿಷ ಬಿಡುವುದರಿಂದಾಗಿ ಚರ್ಮದಕಾಂತಿ ಹೆಚ್ಚಾಗುತ್ತದೆ.

ಇದನ್ನೂ ಓದಿರಿ: Farmers Helpline: ರೈತರ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭ!

ಅಲ್ಲದೇ ಮುಖ್ಯವಾಗಿ ಮುಖದಲ್ಲಿ ಮೊಡವೆ ಸಮಸ್ಯೆ ಇರುವವರು ಇದನ್ನು ಬಳಸುವುದರಿಂದಾಗಿ ಮುಖದ ಮೊಡವೆಗಳು ಕ್ರಮೇಣ ಕಡಿಮೆ ಆಗುವ ಸಾಧ್ಯತೆ ಇದೆ. 

ಕೂದಲು ಉದುರುವಿಕೆಗೂ ತೆಂಗಿನ ಎಣ್ಣೆಯನ್ನು ಬಳಸಬಹುದಾಗಿದೆ. ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹತ್ತಿಯ ಸಹಾಯದಿಂದ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಸದೃಢವಾಗಲಿದೆ. 

ಇನ್ನು ಅರಿಶಿಣಕ್ಕೆ ಐದಾರು ಹನಿ ಕೊಬ್ಬರಿ ಎಣ್ಣೆ  ಬೆರಸಿ ಪ್ರತಿದಿನ ಹಚ್ಚುವುದರಿಂದ ಒಂದೇ ವಾರದಲ್ಲಿ ಫಲಿತಾಂಶ ಬರಲಿದೆ.

ಇದನ್ನು ನಿರಂತರವಾಗಿ ಬಳಸುವುದರಿಂದ ಚರ್ಮವನ್ನು ತಿಳಿಯಾಗಿಸಿ, ಮುಖದಲ್ಲಿನ ಕಪ್ಪು ಕಲೆಗಳನ್ನು ತೆಗೆದು ಹಾಕಲು ಸಹಕಾರಿ ಆಗುತ್ತದೆ.

ಇದನ್ನೂ ಓದಿರಿ: Sitrang Cyclone Effect: ಮುಂದಿನ 5 ದಿನ ರಾಜ್ಯದಲ್ಲಿ ಧಾರಾಕಾರ ಗಾಳಿ-ಮಳೆ! ಯೆಲ್ಲೊ ಅಲರ್ಟ್‌ ಘೋಷಣೆ

ಅರಿಶಿಣದಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ಮುಖದಲ್ಲಿ ಮೊಡವೆಗಳು ಕಡಿಮೆ ಆಗಲು ಸಹಕಾರಿ ಆಗಲಿದೆ. ಅಲ್ಲದೇ ಮುಖದಕಾಂತಿಯೂ ಹೆಚ್ಚಾಗುತ್ತದೆ. 

ಅಲೋವೆರ ಅಥವಾ ಲೋಳೆಸರ  ಇದು ಆಯುರ್ವೇದದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಬಹುಮುಖ್ಯ ಸಸ್ಯವಾಗಿದೆ.

ಇದರ ಬಳಕೆಯಿಂದ ಮೃದುವಾದ ಚರ್ಮ ಹಾಗೂ ಚರ್ಮಕ್ಕೆ ಕಾಂತಿ ನೀಡುತ್ತೆ. ಪ್ರತಿನಿತ್ಯ ಅಲೋವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯುವುದರಿಂದ ಮುಖದಕಾಂತಿಯೂ ಕೆಲವೇ ದಿನಗಳಲ್ಲಿ ಹೆಚ್ಚಾಗುತ್ತದೆ. 

ಕಡಲೇಹಿಟ್ಟು ಬಳಕೆಯಿಂದಲೂ ಸೌಂದರ್ಯ ವೃದ್ಧಿಯಾಗುತ್ತೆ. ಇದು ಮಾರುಕಟ್ಟೆಗಳಲ್ಲಿ ಸಿಗುವ ಕೃತಕ ಕೆಮಿಕಲ್‌ಯುಕ್ತ ಸೌಂದರ್ಯ ವರ್ಧಕಗಳಿಗಿಂತಲೂ ಉತ್ತಮವಾಗಿದೆ.  

ಒಂದು ಚಮಚ ಕಡಲೆ ಹಿಟ್ಟಿಗೆ ಎರಡು ಚಿಟಿಕೆ ಅರಿಶಿಣ, ಒಂದು ಚಮಚ ಮೊಸರು ಸೇರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ, ತ್ವಚೆಯಲ್ಲಿರೋ ಕಪ್ಪು ಕಲೆಗಳು, ಕಪ್ಪು ಕೂದಲುಗಳು ಕಡಿಮೆ ಆಗುತ್ತವೆ.