News

Farmers Helpline: ರೈತರ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭ!

21 October, 2022 11:14 AM IST By: Kalmesh T
Helpline started to respond to farmers' problems!

ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಲು ಸಹಾಯವಾಣಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ತಿಳಿಸಿದರು.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

2022-23ನೇ ಹಂಗಾಮಿಗೆ ಕಬ್ಬು ಬೆಲೆ ನಿಗದಿ ಹಾಗೂ ಇತರೇ ಸಮಸ್ಯೆಗಳ ಕುರಿತು ಚರ್ಚೆಗಾಗಿ ಕಬ್ಬು ನಿಯಂತ್ರಣ ಮಂಡಳಿ ಜೊತೆ ವಿಕಾಸ ಸೌಧದಲ್ಲಿ ಸಭೆ ನಡೆಸಿದರು.

ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಈ ಕಾಲ್ ಸೆಂಟರ್ ಮೂಲಕ ಇಲಾಖೆಗೆ ಹೋಗಿ, 24 ಗಂಟೆಗಳೊಳಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‍ಆರ್‌ಪಿಯಲ್ಲಿ ರಾಜ್ಯ ಸರ್ಕಾರ ಕೂಡ ಒಂದಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸೇರಿಸಿ ನೀಡಬೇಕೆಂಬುದು ರೈತ ಮುಖಂಡರ ಬೇಡಿಕೆಯಾಗಿದೆ.

ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು ಸಭೆಯ ಪ್ರಮುಖ ಅಂಶಗಳೊಂದಿಗೆ ಮುಖ್ಯಮಂತ್ರಿಗಳನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಸಚಿವರು ತಿಳಿಸಿದರು.

ಇನ್ನಷ್ಟು ಓದಿರಿ: ಗುಡ್‌ನ್ಯೂಸ್‌: ಪ್ರಧಾನಿ ಮೋದಿಯಿಂದ ಯುವಕರಿಗೆ ಭರ್ಜರಿ ಉಡುಗೊರೆ, 10 ಲಕ್ಷ ಸಿಬ್ಬಂದಿ ನೇಮಕಾತಿ!

ಸಕ್ಕರೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಮುತುವರ್ಜಿ ವಹಿಸಿ ಶೀಘ್ರದಲ್ಲೇ ನೇಮಕಾತಿ ಆರಂಭ ಮಾಡುವ ಭರವಸೆ ನೀಡಿದರು.

ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 72 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯವನ್ನು ಕೈಗೊಂಡಿರುತ್ತವೆ. ಸದರಿ ಹಂಗಾಮಿಗೆ 622.26 ಲಕ್ಷ ಮೆ.ಟನ್ ಕಬ್ಬನ್ನು ನುರಿಸಿ, 59,78 ಲಕ್ಷ ಮೆ.ಟನ್ ಸಕ್ಕರೆಯನ್ನು ಉತ್ಪಾದಿಸಿ, ಸಕ್ಕರೆ ಕಾರ್ಖಾನೆಗಳು, 19,919.90 ಕೋಟಿ ರೂ. ಪಾವತಿಸಿದೆ.

ಬಾಕಿ ಮೊತ್ತ 2.49 ಕೋಟಿಗಳಷ್ಟು ಇರುತ್ತದೆ. ಈ ತಿಂಗಳ ಅಂತ್ಯಕ್ಕೆ ಒಂದು ಕಾರ್ಖಾನೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಹಣ ಪಾವತಿಸುವುದಾಗಿ ಸರ್ಕಾರಕ್ಕೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಹೊಸ ಹಂಗಾಮು ಪ್ರಾರಂಭವಾಗುವ ಮೊದಲೇ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಶೇ.100ರಷ್ಟು ಹಣ ಪಾವತಿಸಲು ಕ್ರಮವಹಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರ ಮತ್ತು ಸರ್ಕಾರದ ಸಾಧನೆಗೆ ಸಭೆಯಲ್ಲಿದ್ದ ಮಂಡಳಿಯ ಸದಸ್ಯರು ಅಭಿನಂದಿಸಿದರು.

Sitrang Cyclone Effect: ಮುಂದಿನ 5 ದಿನ ರಾಜ್ಯದಲ್ಲಿ ಧಾರಾಕಾರ ಗಾಳಿ-ಮಳೆ! ಯೆಲ್ಲೊ ಅಲರ್ಟ್‌ ಘೋಷಣೆ

ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರಿಗೆ ಸಮನ್ವಯ ಸಾಧಿಸಿ ಕಾರ್ಖಾನೆಗಳು ಜರುಗಿಸುತ್ತಿರುವ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸಮರ್ಥತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಕ್ಕರೆ ಇಲಾಖೆಯಲ್ಲಿ ಮಾಹಿತಿ ಸಂಗ್ರಹಿಸಿ,

ಕ್ರೋಢೀಕರಿಸಿ ರೈತರಿಗೆ ಅನುಗುಣವಾಗುವಂತೆ ಹೊಸ ಆ್ಯಪ್‍ನ್ನು ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಇದೇ ವೇಳೆ ಬಿಡುಗಡೆ ಮಾಡಿದರು

ಸಕ್ಕರೆ ಕಾರ್ಖಾನೆಗಳು ಸತತವಾಗಿ ಪಾವತಿಸುತ್ತಿರುವ ಕಬ್ಬಿನ ಬಿಲ್ಲು, ಸಕ್ಕರೆ ಇಳುವರಿ, ಬಾಕಿ ಇರುವ ಕಬ್ಬಿನ ಬಿಲ್ಲಿನ ಮೊತ್ತ, ಕಬ್ಬು ಪ್ರದೇಶ, ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಹಾಗೂ ಇತರ ಉಪಉತ್ಪನ್ನಗಳಿಂದ ಬರುವ ಆದಾಯ ಹಾಗೂ ಆದಾಯ ಹಂಚಿಕೆ ವಿವರ, ಸಕ್ಕರೆ ಮತ್ತು ಕಾಕಂಬಿ ದಾಸ್ತಾನು ವಿವರಗಳನ್ನು ನಿಖರವಾಗಿ ಮತ್ತು ತ್ವರಿತವಾಗಿ ಪಡೆಯಲು ಆಪ್ ಹಾಗೂ ಸಾಫ್ಟ್‌ವೇರ್ ಬಿಡುಗಡೆ ಮಾಡಲಾಗಿದೆ.