ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಹೋಟೆಲ್ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಗುರುವಾರ ಇಳಿಕೆ ಮಾಡಿದೆ.
ಗುರುವಾವರದ ದರ ಪರಿಷ್ಕರಣೆ (ನವದೆಹಲಿ)ಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ (19 ಕೆಜಿ) ಬೆಲೆಯಲ್ಲಿ0 83.50 ರೂಪಾಯಿ
ಇಳಿಕೆಯಾಗುವ ಮೂಲಕ ಒಂದು ವಾಣಿಜ್ಯ ಸಿಲಿಂಡರ್ ಬೆಲೆಯು 1,773 ರೂ.ಗೆ ಆಗಿದೆ. ಇಲ್ಲಿಯವರೆಗೆ ವಾಣಿಜ್ಯ ಸಿಲಿಂಡರ್ ಬೆಲೆಯು 1,856.50 ರೂ. ಇತ್ತು.
ಗುರುವಾರ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಆಗಿದೆಯಾದರೂ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರ ಯಥಾಸ್ಥಿತಿ ಮುಂದುವರಿದಿದ್ದು,
ಇದರಲ್ಲಿ ಯಾವುದೇ ಬದಲಾವಣೆ ಆಗಿರುವುದು ವರದಿ ಆಗಿಲ್ಲ. ಇನ್ನು ದೇಶದ ಪ್ರಮುಖ ನಗರದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ನೋಡುವುದಾದರೆ,
ಮುಂಬೈನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 1,725, ಕೋಲ್ಕತ್ತಾದಲ್ಲಿ 1875.50, ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವು 1937 ರೂಪಾಯಿ ಇದೆ.
ಇನ್ನು ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವು ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಣೆಗೆ ಒಳಪಡುತ್ತದೆ.
ಇದೀಗ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ ಜೂನ್ 1ರಿಂದ ಹೊಸ ದರಗಳು ಅನ್ವಯವಾಗಲಿದ್ದು, ಗ್ರಾಹಕರಿಗೆ ಹಣ ಉಳಿತಾಯವಾಗಲಿದೆ.
ಇನ್ನು ಈಚೆಗೆ ಅಂದರೆ ಮೇ ತಿಂಗಳಿನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಇಳಿಕೆ ಮಾಡಿದ್ದವು.
ಈ ಹಿಂದೆ ಅಂದರೆ ಕಳೆದ ಮೇ ತಿಂಗಳಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 171.50 ರೂಪಾಯಿ ಇಳಿಕೆ ಮಾಡಲಾಗಿತ್ತು.