ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಮಂಗಳವಾರ ಹಾಗೂ ಬುಧವಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ವಿವಿಧ ಭಾಗದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು,ರಾಜ್ಯದ ವಿವಿಧ ಭಾಗದಲ್ಲಿಯೂ ಮಳೆಯಾಗುತ್ತಿದೆ. ಮಂಗಳವಾರ ಹಾಗೂ
ಬುಧವಾರ ರಾಜ್ಯದಲ್ಲಿ ಮಳೆ ಆಗಲಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉಳಿದ ಭಾಗದಲ್ಲಿ ಒಣಹವೆ
ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇಂದು, ನಾಳೆ ಎಲ್ಲೆಲ್ಲಿ ಮಳೆ ?
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಚಾಮರಾಜನಗರ
ಮೈಸೂರು
ಹಾಗೂ
ರಾಮನಗರ
ಹಗುರ ಪ್ರಮಾಣದಲ್ಲಿ ಮಳೆ
ರಾಜ್ಯದ ಈ ಐದು ಜಿಲ್ಲೆಗಳಲ್ಲಿ 2.5 ಮಿ.ಮೀ.ನಿಂದ 64.5 ಮಿ.ಮೀ. ಪ್ರಮಾಣದ ವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ನವೆಂಬರ್ 22 ಹಾಗೂ ನವೆಂಬರ್ 23ರಂದು ಎಲ್ಲೆಲ್ಲಿ ಮಳೆ
ನವೆಂಬರ್ 22 ಹಾಗೂ ನವೆಂಬರ್ 23ರಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 9 ಒಂಭತ್ತು ಜಿಲ್ಲೆಗಳಲ್ಲಿ ಮಳೆಯಾಗಲಿದೆ
ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅದರಂತೆ
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಚಾಮರಾಜನಗರ
ಮೈಸೂರು
ರಾಮನಗರ
ದಕ್ಷಿಣ ಕನ್ನಡ
ಚಿಕ್ಕಬಳ್ಳಾಪುರ
ಕೋಲಾರ
ಹಾಗೂ
ಮಂಡ್ಯದಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿವೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ
ನವೆಂಬರ್ 23 ಹಾಗೂ ನವೆಂಬರ್ 24ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನವೆಂಬರ್ 23, ನವೆಂಬರ್ 24ರಂದು ಭಾರೀಯಿಂದ ಭಾರೀ ಮಳೆಯಾಗಲಿದೆ.
ಈ ಕಾರಣಕ್ಕಾಗಿ ಈ ಎರಡೂ ಜಿಲ್ಲೆಗಳಲ್ಲೂ ನವೆಂಬರ್ 23 ಹಾಗೂ 24ರಂದು ಹವಾಮಾನ ಇಲಾಖೆಯು ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.