News

ಮುಂಗಾರು ಮತ್ತೆ ಚುರುಕು-ಕರಾವಳಿಯಲ್ಲಿ ಸೆ.4ರಿಂದ 8ರವರೆಗೆ ಭಾರಿ ಮಳೆ ಸಾಧ್ಯತೆ

04 September, 2020 7:40 AM IST By:

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನೈಋುತ್ಯ ಮುಂಗಾರು ಅತಿ ಚುರುಕಾಗಿದ್ದರಿಂದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಬರುವ ಸಾಧ್ಯತೆಯಿದೆ. ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ , ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುದರಿಂದ ಸೆ.4ರಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಳನಾಡಿನ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’
ಘೋಷಿಸಲಾಗಿದೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇದೇ 8ರವರೆಗೆ ಭಾರಿ ಮಳೆಯಾಗಲಿದೆ.

ಮಳೆ-ಎಲ್ಲಿ, ಎಷ್ಟು?: ಉತ್ತರ ಕನ್ನಡ ಜಿಲ್ಲೆಯ ಜಗಲ್‍ಬೆಟ್ ಪ್ರದೇಶದಲ್ಲಿ 14 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕಡೂರು 8, ಸಂಡೂರು 7, ಕೊಪ್ಪ, ಗುಬ್ಬಿ 6, ಹಾವೇರಿ, ಮೊಳಕಾಲ್ಮೂರು, ನೆಲಮಂಗಲ, ಪಾವಗಡ, ತೀರ್ಥಹಳ್ಳಿ 5, ಪುತ್ತೂರು, ಗದಗ, ಕಂಪ್ಲಿ, ಮಾಗಡಿ, ತಿಪಟೂರು, ಹೊಸನಗರ 4, ಶಿರಾ, ಸಾಗರ, ಚನ್ನಪಟ್ಟಣ, ಭಾಗಮಂಡಲ ಹಾಗೂ ರಾಮನಗರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.  ಕುಂದಾಪುರ, ಕನಕಪುರ, ಕೃಷ್ಣರಾಜಪೇಟೆ, ಚಿಂತಾಮಣಿ, ಕೊಳ್ಳೇಗಾಲ, ಹೊಳೆನರಸೀಪುರದಲ್ಲಿ ತಲಾ 2 ಸೆಂ. ಮೀನಷ್ಟು ಮಳೆಯಾಗಿದೆ.