ರಾಷ್ಟ್ರ ರಾಜಧಾನಿ ದೆಹಲಿ (Dehi)ಕೊರೋನಾ ಸೋಂಕಿನಿಂದಾಗಿ ಹೊರಬರಬೇಕು ಎನ್ನುವಷ್ಟರಲ್ಲಿಯೇ ದೆಹಲಿಗೆ ದಿಢೀರನೆ ಶುರುವಾದ ವರುಣನ ಅಬ್ಬರದಿಂದಾಗಿ ತತ್ತರಿಸುವಂತೆ ಮಾಡಿದೆ. ಭಾನುವಾರ ಸುರಿದ ಮಳೆಗೆ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. 10 ಮನೆಗಳು ಕೊಚ್ಚಿಕೊಂಡು ಹೋಗಿವೆ.
ಭಾನುವಾರ ಬೆಳಗ್ಗೆ ಏಕಾಏಕಿ ರಭಸದಿಂದ ಸುರಿದ ಮಳೆಗೆ ರಸ್ತೆಗಳೆಲ್ಲ ನದಿಗಳಂತೆ ಹರಿಯಲಾರಂಭಿಸಿದವು.. ಜನಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತು. ಮಳೆ ನೀರಿನ ರಭಸಕ್ಕೆ ಇಡೀ ದೆಹಲಿ ಕಕ್ಕಾಬಿಕ್ಕಿಯಾಯಿತು. ದಿಕ್ಕುತೋಚದೆ ದಿಗ್ಭ್ರಮೆಗೊಂಡರು. ಕಾಲುವೆ, ಚರಂಡಿಯ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ದೆಹಲಿಯ 10 ಮನೆಗಳು(House collapses) ಕೊಚ್ಚಿಕೊಂಡು ಹೋಗಿವೆ. ಮನೆಗಳು ಬೀಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Social media viral) ಆಗಿವೆ. ಇಲ್ಲಿನ ಮಿಂಟೋ ಬ್ರಿಡ್ಜ್ ಕೆಳಗಿನ ರಸ್ತೆ ಕರೆಯಂತಾಗಿದ್ದು, ಇದೇ ಮಾರ್ಗವಾಗಿ ಸಾಗುತ್ತಿದ್ದ ಬಸ್ ನೀರಿನಲ್ಲಿ ಮುಳುಗಡೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬಸ್ ಒಳಗಿದ್ದ ಪ್ರಯಾಣಿಕರನ್ನು ಹೊರಗೆಳೆದು ರಕ್ಷಣೆ ಮಾಡಿದ್ದಾರೆ.
ನೋಡ ನೋಡುತ್ತಿದ್ತ ಕುಸಿದು ಬಿದ್ದ ಮನೆ: ಮಳೆಯ ಭೀಕರತೆ ಎಷ್ಟಿತ್ತೆಂದರೆ ದೆಹಲಿಯ ಅಣ್ಣಾ ನಗರ ಕೊಳಗೇರಿಯಲ್ಲಿರುವ ರಾಜಕಾಲುವೆ ಉಕ್ಕಿ ಹರಿದ ಪರಿಣಾಮವಾಗಿ ಅದರ ಪಕ್ಕದಲ್ಲೇ ಇದ್ದ ಮನೆಯೊಂದು ಕುಸಿದಿದೆ. ಈ ವೀಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ.