News

ಜಿಟಿ ಜಿಟಿ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ-ಸಂಕಷ್ಟದಲ್ಲಿ ರೈತರು

16 September, 2020 1:38 PM IST By:

ಕಳೆದ ತಿಂಗಳು 15 ದಿನಗಳ ಕಾಲ ಸುರಿದ ನಿರಂತರ ಮಳೆಗೆ ಹೆಸರು ಉದ್ದು, ಶೇಂಗಾ ಬೆಳೆ ಹೊಲದಲ್ಲಿಯೇ ಮೊಳಕೆಯೊಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಯಿತು. ಮೊದಲೇ ಸಂಕಷ್ಟದಲ್ಲಿರುವ ರೈತರು ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತೊಗರಿ, ಹತ್ತಿ, ಮೆಣಸಿನಕಾಯಿ,  ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಈ ಜಿಟಿಜಿಟಿ ಮಳೆ ಮಾರಕವಾಗಲಿದೆ.

ಉತ್ತರ ಕರ್ನಾಟಕದಲ್ಲಿಯೂ ನಿಂತರ ಮಳೆಯಾಗುತ್ತಿದ್ದರಿಂದ ತುಂಗಭದ್ರಾ ನದಿ ಪಾತ್ರದ ಹಾಗೂ ವಿಜಯನಗರ ಕಾಲುವೆ ವ್ಯಾಪ್ತಿಯ ಕಂಪ್ಲಿ, ಬೆಳಗೋಡುಹಾಳ್, ಸಣಾಪುರ, ಇಟಗಿ, ನಂ.2ಮುದ್ದಾಪುರ ಭಾಗಗಳ ಸುಮಾರು 3,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ಕಾಳು ಹಾಲು ತುಂಬಿ ಕೆಂಪಡರಿದ ಹಂತದಲ್ಲಿದ್ದು, ಇನ್ನು 20 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಮಳೆ ಮುಂದುವರೆದಲ್ಲಿ ಭತ್ತದ ಜತೆಗೆ ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಬೆಳೆ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಿರೇಮಲ್ಲನಕೇರಿ ಗ್ರಾಮದಲ್ಲಿ ಜೋಳದ ಬೆಳೆ ನೆಲಕಕ್ಕೆ ಬಿದ್ದು, ಬೆಳೆ ನಾಶವಾಗಿದೆ. ಹೊಳಗುಂದಿ, ಬಾವಿಹಳ್ಳಿ, ಮಾನ್ಯರ ಮಸಲವಾಡ ಗ್ರಾಮಗಳ ರೈತರ ಜಮೀನಿನಲ್ಲಿ ಮಳೆ ನೀರು ನಿಂತು

ಕಲಬುರಗಿ ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣ ಬೆಳೆಹಾನಿಯಾಗಿದೆ. ಕಾಗಿಣಾ ನದಿಯ ನೀರು ಸುತ್ತಲ್ಲಿನ ರೈತರ್ ಹೊಲಗಳಿಗೆ ನುಗ್ಗಿ ಬೆಳೆಗಳು ಜಲಾವೃತವಾಗಿವೆ. ರೈತರ ಬದುಕು ಮೊದಲೇ ಸಾಲ ಸುಲದಲ್ಲಿ ಕಳೆಯುತ್ತಿರುವಾಗ ಹಸಿ ಬರಗಾಲದ ಛಾಯೇ ರೈತನ ಮೇಲೆ ಆವರಿಸಿದೆ. ಈ ವರ್ಷ ವರುಣ ಯಾಕೋ ರೈತನ ಮೇಲೆ ಕರುಣೇ ತೋರುವ ಲಕ್ಷಣ ಕಾಣುತ್ತಿಲ್ಲ. ಮಳೆಯ ಅರ್ಭಟಕ್ಕೆ ಹಾಜೀಪೀರ ದರ್ಗಾದ ಎದುರು ಇರುವ ಕಬ್ಬಿನ ಹೊಲ ಜಲಾವೃತವಾಗಿದೆ.

ಬೀದರ್ ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಮಳೆಯಿಂದ ಹೆಸರು, ಉದ್ದು ಹಾಳಾಗಿದೆ. ಸೋಮವಾರ ರಾತ್ರಿ ಬಿದ್ದ ಮಳೆಯಿಂದ ಸೋಯಾ, ಜೋಳ, ತೊಗರಿ ಬೆಳೆಗಳು ನೀರು ಪಾಲಾಗಿವೆ