News

ಒಂದೆಡೆ ಕೊರೋನಾ ಆತಂಕ, ಇನ್ನೊಂದೆಡೆ ಮಳೆ ಆರ್ಭಟ

07 July, 2020 12:22 PM IST By:

ದೇಶದ ವಾಣಿಜ್ಯ ರಾಜಧಾನಿ ಮುಂಬೈ, ದೆಹಲಿ, ಗುಜರಾತ, ರಾಜಸ್ಥಾನ, ಅಸ್ಸಾಂ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಮಾಡುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಓರಿಸ್ಸಾ ರಾಜ್ಯದಲ್ಲಿಯೂ ಮಳೆಹೆಚ್ಚಾಗಿದೆ. ಗುಜರಾತನ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ದೇವಭೂಮಿ ದ್ವಾರಕಾ ಜಿಲ್ಲೆಯ ಖಂಬಾಲಿಯಾ ತಾಲೂಕಿನಲ್ಲಿ ಒಂದೇ ದಿನ 487 ಮಿ.ಮೀ ಮಳೆಯಾಗಿದೆ.ಜುನಾಗಢ ಜಿಲ್ಲೆಯ ನದಿಯೊಂದಕ್ಕೆ ನಿರ್ಮಿಸಲಾಗಿದ್ದ 30 ವರ್ಷದಷ್ಟು ಹಳೆಯ ಸೇತುವೆ ಸೋಮವಾರ ಮಳೆಗೆ ಕುಸಿದುಬಿದ್ದಿದೆ. ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಪ್ರವಾಹದ ಭೀತಿ ಎದುರಾಗಿದೆ.

ಮುಂಬೈಯಲ್ಲಿ ಮುಂದುವರೆದ ಮಳೆ:

ಮುಂಬೈನ ಉಪನಗರಗಳಲ್ಲಿ 100 ಮಿ.ಮೀಗೂ ಹೆಚ್ಚು ಮಳೆಯಾಗಿದೆ. ಬೇಲಾಪುರ ಕೈಗಾರಿಕಾ ಪ್ರದೇಶದಲ್ಲಿ ಅತೀ ಹೆಚ್ಚು 213.4ಮಿ.ಮೀ ಮಳೆಯಾಗಿದೆ.  ಮಂಗಳವಾರವೂ ಸಹ ಇಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಕರಾವಳಿಯ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಸೋಮವಾರ ಮಧ್ಯಹ್ನ 4.6 ಮೀಟರ್ ಎತ್ತರದ ಅಲೆಗಳಉ ಅಪ್ಪಳಿಸಿವೆ.

ಅಸ್ಸಾನಂಲ್ಲಿ ಚೇತರಿಕೆ:

ಅಸ್ಸಾಂ ನದಿಗಳ ನೀರಿನ ಮಟ್ಟ ಇಳಿಯುತ್ತಿದ್ದು, ಪ್ರವಾಹ ತಗ್ಗಿದೆ. ಶುಕ್ರವಾರ 20 ಜಿಲ್ಲೆಗಳ 13 ಲಕ್ಷ ಜನರು ಸಂತ್ರಸ್ತರಾಗಿದ್ದರು. 18 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟದಲ್ಲಿ ಸಿಲುಕಿದ್ದರು. ಬಹುತೇಕ ಎಲ್ಲಾ ಸಂತ್ರಸ್ತರನ್ನು ಆಶ್ರಯ ನೀಡಲಾಗಿದೆ.