ರಾಜ್ಯದಲ್ಲಿ ನೈಋತ್ಯ ಮುಂಗಾರು ಕೊಂಚ ಬಿರುಸಾಗಿ ಸಾಗುತ್ತಿದೆ. ಹೌದು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಈ ಪ್ರದೇಶಗಳಲ್ಲಿ ಬಹುತೇಕ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಉಡುಪಿ, ದಕ್ಷಿಣ ಕನ್ನಡ,ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಬೀದರ್, ಬೆಳಗಾವಿ, ಕಲಬುರ್ಗಿ, ಹಾಗೂ ಹಾಸನ ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ಬಿರುಸಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೋಮವಾರವೂ ‘ಯೆಲ್ಲೊ ಅಲರ್ಟ್’ ಮುಂದುವರೆಸುವುದಾಗಿ ಇಲಾಖೆ ಮಾಹಿತಿ ನೀಡಿದೆ. ಇನ್ನು ಉಳಿದೆಡೆ ಮಳೆಯ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗುವ ನೀರಿಕ್ಷೆಯಿದೆ ಎಂದು ಅಂದಾಜಿಸಲಾಗಿದೆ
ಇಮ್ನು ಮಂಗಳವಾರದಿಂದ ರಾಜ್ಯದಾದ್ಯಂತ ಮಳೆಯ ಪ್ರಮಾಣದಲ್ಲಿ ಕೂಡ ಸ್ವಲ್ಪ ಕಡಿಮೆ ಮಳೆಯನ್ನು ನೀರಿಕ್ಷಿಸಬಹುದು ಎಂದು ಇಲಾಖೆ ತಿಳಿಸಿದೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40 ಕಿ.ಮೀ. ನಿಂದ 50 ಕಿ.ಮೀ. ಇದೆ. ಈ ವೇಗವು 48 ಗಂಟೆಗಳ ಅವಧಿಯಲ್ಲಿ 60 ಕಿ.ಮೀ. ತಲುಪುವ ಸಾಧ್ಯತೆಯಿದೆ. ಇವೆಲ್ಲ ಕಾರಣಗಳಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿರಿ: Agriculture park: ಭಾರತದಲ್ಲಿ ಬರೋಬ್ಬರಿ 2 ಬಿಲಿಯನ್ ಡಾಲರ್ ಕೃಷಿ ಪಾರ್ಕ್ ಘೋಷಣೆ? ಏನೇನಿರಲಿದೆ ಗೊತ್ತೆ?
ಇನ್ನು ರೈತರು ಮುಂದಿನ ಐದು ದಿನಗಳವರೆಗೆ ಬಿತ್ತನೆ, ಸಿಂಪಡಣೆ, ರಸಗೊಬ್ಬರ ಬಳಕೆ, ಕಟಾವು ಮತ್ತು ಭತ್ತದ ನಾಟಿ ಮುಂತಾದ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮುಂದೂಡಬಹುದು ಎಂದು ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲದೆ ಅಡಿಕೆ ತೋಟಗಳಲ್ಲಿ, ರೈತರು ಕೊಳೆರೋಗವನ್ನು ತಡೆಗಟ್ಟಲು ನೀರನ್ನು ಹೊರಹಾಕಲು ಅಗತ್ಯವಾದ ಒಳಚರಂಡಿ ಸೌಲಭ್ಯಗಳನ್ನು ಈ ಕೂಡಲೇ ಮಾಡಿಕೊಳ್ಳಲು ತಿಳಿಸಲಾಗಿದೆ.
ಶನಿವಾರ ರಾತ್ರಿ 11.30 ರವರೆಗೆ ಕರಾವಳಿ ಕರ್ನಾಟಕದ ಕರಾವಳಿಯುದ್ದಕ್ಕೂ ಮಂಗಳೂರಿನಿಂದ ಕಾರವಾರದವರೆಗೆ 3.5 ಮೀ-4.6 ಮೀ ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳನ್ನು IMD ಮುನ್ಸೂಚನೆ ನೀಡಿದೆ . ಪ್ರಸ್ತುತ ಗಾಳಿಯ ವೇಗವು 49cm/sec-69cm/sec ನಡುವೆ ಬದಲಾಗುತ್ತದೆ. ಚಂಡಮಾರುತದ ವಾತಾವರಣವು ಗಂಟೆಗೆ 40-50 ಕಿಮೀ ವೇಗವನ್ನು ತಲುಪುತ್ತದೆ, ಗಂಟೆಗೆ 60 ಕಿಮೀ ವೇಗದಲ್ಲಿ ಬೀಸುತ್ತದೆ.
ಈ ತಾಲೂಕಿನ ಶಾಲೆಗಳಿಗೆ ರಜೆ!
ಹೊಸದುರ್ಗ ತಾಲೂಕಿನ ವ್ಯಾಪ್ತಿಯಲ್ಲಿಯಲ್ಲಿರುವ ಶಾಲೆಗಳಿಗೆ ಭಾರೀ ಮಳೆ ಕಾರಣ ಮುಂಜಾಗೃತಾ ದೃಷ್ಟಿಯಿಂದಾಗಿ ರಜೆ ನೀಡಲಾಗಿದೆ. ನಿನ್ನೆ ಬೆಳಗಿನಿಂದಲೇ ಈ ಭಾಗದಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಈ ಕ್ರಮವನ್ನು ಕೈಗೊಂಡಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ
ಇಂತಹ ಹೆಚ್ಚಿನ ಕೃಷಿ ಸಂಬಂಧಿತ ಸುದ್ದಿಗಳು ಹಾಗೂ ಮಾಹಿತಿಗಾಗಿ www.kannada.krishijagran.com ಭೇಟಿ ನೀಡಿ.. ನಿರಂತರ ಸಂಪರ್ಕಕ್ಕಾಗಿ ನಮ್ಮ ವೆಬ್‌ಸೈಟ್ ಅನ್ನು ಸಬ್‌ಸ್ಕ್ರೈಬ್ ಮಾಡಿ. ಇನ್ನು ನೀವು ಕೃಷಿ ಸಂಬಧಿತ ಲೇಖನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ kannada@krishijagran.com. ಇಮೇಲ್ ಮಾಡಿ. ನಿಮ್ಮ ಮಾಹಿತಿಯುಕ್ತ ಬರಹಗಳಿಗೆ ನಾವು ವೇದಿಕೆಯೊದಗಿಸುತ್ತೇವೆ.