News

ಮಲೆನಾಡಿನಲ್ಲಿ ಮಳೆ ಜೋರು-ಸಿಡಿಲಿಗೆ ಓರ್ವ ಯುವಕ ಸಾವು

21 July, 2020 10:41 AM IST By:

ರಾಜ್ಯದಲ್ಲಿ ಮುಂಗಾರು ಬಿರುಸು ಪಡೆಯುತ್ತಲೇ ಇದೆ. ಕರಾವಳಿಯಲ್ಲಿ ತಗ್ಗಿರುವ (Rain)ಮಳೆ, ಮಲೆನಾಡಿನಲ್ಲಿ ಗುಡುಗು ಸಹಿತ ರಭಸವಾಗಿ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಕೆಲವೆಡೆ ಬಿರುಸಾಗಿ (Heavy rain) ಸುರಿದಿದೆ. ತುಂಗಾ, ಭದ್ರಾ (Tungabhadra dam) ನದಿಗಳ ಹರಿವಿನ ಪ್ರಮಾಣ ತುಸು ಏರಿಕೆಯಾಗಿದೆ. ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ಸೋಮವಾರ ಕೆಲವೆಡೆ ಜೋರು ಮಳೆಯಾಗಿದೆ.

ಲಿಂಗನಮಕ್ಕಿ ಅಣೆಕಟ್ಟಿಗೆ (Linganmakki dam) 12,159 ಕ್ಯೂಸೆಕ್, ಲಕ್ಕವಳ್ಳಿ ಭದ್ರಾ ಡ್ಯಾಂಗೆ 8,093 ಕ್ಯೂಸೆಕ್, ಗಾಜನೂರು ತುಂಗಾ ಜಲಾಶಯಕ್ 14,030 ಕ್ಯೂಸೆಕ್ ನೀರು  ಬರುತ್ತಿದೆ. ದಾವಣಗೆರೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದದ್, ಹರಪನಹಳ್ಳಿ  ತಾಲೂಕಿನಲ್ಲಿ 50ಕ್ಕೂ ಹೆಚ್ಚು ಎಕರೆ ಬೆಳೆ (crop) ಹಾನಿಯಾಗಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಯಲ್ಲಿ ಸಾಧಾರಣ ಮಳೆ ಆಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಬಿಸಿಲಿನಿಂದ ಕೂಡಿದ್ದ ವಾತಾವರಣ ಕಂಡು ಬಂತು. ತುಮಕೂರು ನಗರ ಸೇರಿದಂತೆ ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆ ಭಾಗದಲ್ಲಿ ಭಾನುವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. ಸಣ್ಣ ಕೆರೆ, ಕಟ್ಟೆಗಳು, ಕೃಷಿ ಹೊಂಡಗಳು ತುಂಬಿವೆ. ಬೆಳಗಾವಿ, ವಿಜಯಪುರ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.  ತುಂಗಭದ್ರಾ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ. ಮೈಸೂರು, ಕೊಡಗು, ಹಾಸನ, ಕಲಬುರಗಿ, ಬೀದರ್‌, ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಜೇವರ್ಗಿಯಲ್ಲಿ ಧಾರಾಕಾರ ಮಳೆ, ಪಟ್ಟಣದ ಬಹುತೇಕ ರಸ್ತೆಗಳು ಜಲಾವೃತ:

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಸಾಯಂಕಾಲ ಸುರಿದು ಏಕಾಏಕಿ ಮಳೆಗೆ ತಾಲೂಕಿನಾದ್ಯಂತ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಜೇವರ್ಗಿ ವ್ಯಾಪ್ತಿಯಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿದೆ. ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ಶಾಸ್ತ್ರಿ ಚೌಕ್, ಬಸವೇಶ್ವರ ನಗರ ಸೇರಿದಂತೆ ಹಲವಾರು  ಬಡಾವಣೆಗಳಲ್ಲಿ  ಮನೆಗಳಿಗೆ  ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತು.

 ಪಟ್ಟಣದ ವಿಜಯಪೂರ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಚರಂಡಿಯಲ್ಲಿ ಹೂಳು ತುಂಬಿದ ಪರಿಣಾಮ ಹೆದ್ದಾರಿ ಮೇಲೆ ಮಳೆ ನೀರು ಹರಿದು ತೊಂದರೆಯುಂಟಾಯಿತು. ಇತ್ತ ಮಿನಿವಿದಾನಸೌಧ, ಶಾಂತನಗರ, ದತ್ತ ನಗರಗಳಲ್ಲಿ ಮಳೆ ನೀರು ರಸ್ತೆಯ ಮೇಲೆ ಹಳ್ಳ ಹರಿದಂತೆ ಹರಿಯಿತು.

ಸಿಡಿಲು ಬಡಿದು ಯುವಕ ಸಾವು: ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ರಾಮಕೃಷ್ಣ ಬಜಮ್ಮನವರ (30) ಯುವಕ ಮೃತಪಟ್ಟಿದ್ದಾನೆ. ಜಮೀನಿನಲ್ಲಿ ಬಿತ್ತನೆ ಮಾಡುತ್ತಿದ್ದಾಗ ಈ ಅವಘಡ ಸಂಭವಸಿದೆ.

ಜುಲೈ 21 ರಂದು ಭಾರಿ ಮಳೆ: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜುಲೈ 21 ರಂದು ದಕ್ಷಿಣ ಹಾಗೂ ಒಳನಾಡಿನಲ್ಲಿ  ವ್ಯಾಪಕ ಮಳೆ(Heavy rain) ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.