ದೇಶದಲ್ಲಿ ಹರಡುತ್ತಿರುವ ಕೊರೋನಾ ಸೋಂಕಿನ ನಡುವೆ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕೊರೋನಾ ನಿಯಂತ್ರಣಕ್ಕೆ ವಿಧಿಸಿದ ಲಾಕ್‌ಡೌನ್‌ನಿಂದ ಎಲ್ಲ ವಲಯಗಳ ಮೇಲೆ ಪರಿಣಾಮ ಬೀರಿರಬಹುದು. ಆದರೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪ್ರಸಕ್ತ ವರ್ಷ ಉತ್ತಮ ಮುಂಗಾರು (Heavy monsoon) ಆಗಿದ್ದರಿಂದ ಬಿತ್ತಣಿಕೆಯೂ ಸಹ ಜುಲೈ ತಿಂಗಳಕ್ಕೆ ಹೋಲಿಸಿದರೆ ಕಳೆದ ವರ್ಷಕ್ಕಿಂತ ಹೆಚ್ಚು ಬಿತ್ತಣಿಕೆಯಾಗಿದೆ.
ಪ್ರಸಕ್ತ ವರ್ಷ ಜುಲೈ 17ರವರಗೆ 6.92 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 21.2 ರಷ್ಟು ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 5.71 ಕೋಟಿ ಹೆಕ್ಟೇರ್ ಗಳಲ್ಲಿ ಬಿತ್ತನೆ ಆಗಿತ್ತು. ಸಾಮಾನ್ಯವಾಗಿ ಮುಂಗಾರು ದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ರೈತರು ಜೂನ್ ತಿಂಗಳಿಂದ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಅದು ಜುಲೈ ಅಂತ್ಯದವರೆಗೆ ಅಥವಾ ಆಗಸ್ಟ್ ಮೊದಲ ವಾರದವರೆಗೆ ಮುಂದುವರೆಯುತ್ತದೆ.
ಸೋಯಾಬಿನ್ ಬಿತ್ತನೆಯು (Soyabeen) ಈ ಬಾರಿ ಶೇ. 15 ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ. ಕಬ್ಬು ಬಿತ್ತನೆ ಪ್ರದೇಶವು 50 ಲಕ್ಷ ಹೆಕ್ಟೇರನಿಂದ 51 ಲಕ್ಷ ಹೆಕ್ಟೆರಗೆ ಏರಿಕೆಯಾಗಿದೆ. ಏಕದಳ ಧಾನ್ಯಗಳ ಬಿತ್ತನೆ 1.03 ಕೋಟಿ ಹೆಕ್ಟೆರಗಳಿಂದ 1.15 ಕೋಟಿ ಹೆಕ್ಟೇರಗಳಿಗೆ (hectares) ಶೇ. 12 ರಷ್ಟು ಹೆಚ್ಚಾಗಿದೆ. ಸರಾಸರಿಗಿಂತಲೂ ಅಧಿಕ ಮಳೆಯಾಗುತ್ತಿರುವುದರಿಂದ ದೇಶದ ಪ್ರಮುಖ ಜಲಾಶಯಗಳು ನೀರಿನ ಮಟ್ಟ ಉತ್ತಮ ಸ್ಥಿತಿಯಲ್ಲಿದೆ ಎಂದು ಸಚಿವಾಲಯ ಹೇಳಿದೆ.