ದೇಶದಲ್ಲಿನ ಕೊರೊನಾ ಸೋಂಕಿನ ನಂತರದಲ್ಲಿ ಹೃದಯಾಘಾತ, ಹೃದಯಸ್ತಂಭನ ಹಾಗೂ ಹಠಾತ್ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ.
ಈಚೆಗೆ ಗುಜರಾತ್‌ನಲ್ಲಿ ದಸರಾ ಸಂಭ್ರಮಾಚರಣೆಯ ಗಾರ್ಬಾ ನೃತ್ಯ ಸಂದರ್ಭದಲ್ಲಿ 10 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಕೊರೊನಾ ಸೋಂಕು ಹೆಚ್ಚಾದ ನಂತರದಲ್ಲಿ ಹಠಾತ್ ಸಾವು, ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಲ್ಲೇ ಇವೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ
ಕೊರೊನಾದಿಂದ ತೀವ್ರ ಹಾಗೂ ಆರೋಗ್ಯ ಏರುಪೇರು ಎದುರಿಸಿದವರು ಕನಿಷ್ಟ ಎರಡು ವರ್ಷಗಳ ಪರಿಶ್ರಮದ ಕೆಲಸಗಳನ್ನು ಮಾಡದಂತೆ ಸಲಹೆ ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಈಚೆಗೆ ಅಧ್ಯಯ ನಡೆಸಿದೆ. ಅಧ್ಯಯನ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ
ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಂಡಾವೀಯ ಅವರು, ಕೊರೊನಾ ಸಾಂಕ್ರಾಮಿಕ ರೋಗದಿಂದ ಐಸಿಯುನಲ್ಲಿ
ಚಿಕಿತ್ಸೆ ಪಡೆದಿದ್ದವರೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವವರು ಪರಿಶ್ರಮದ ಹಾಗೂ ಭಾರವನ್ನು ಹೊರುವ ಕೆಲಸವನ್ನು ಮಾಡಬಾರದು.
ಅಷ್ಟೇ ಅಲ್ಲ ದೈಹಿಕ ವ್ಯಾಯಾಮ, ಕಠಿಣ ಕಸರತ್ತುಗಳನ್ನು ನಡೆಸುವುದನ್ನು ಮುಂದಿನ ಎರಡು ವರ್ಷ ಕಾಲ ಮಾಡಬಾರದು ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿನ ನಂತರದಲ್ಲಿ ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಆದರೆ, ಆದರೆ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಸಂಶೋಧನೆ ನಡೆದಿದೆ.
ಸದ್ಯಕ್ಕೆ ಲಸಿಕೆಯಿಂದಲೇ ಸಾವು ಸಂಭವಿಸುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದಿದ್ದಾರೆ.
ಸಂಪೂರ್ಣ ತನಿಖೆಗೆ: ರಾಜಾರಾಂ ತಲ್ಲೂರು ಆಗ್ರಹ
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಕೊರೊನಾ ಸೋಂಕು ಹಾಗೂ ಜನ ಕೊರೊನಾ ಲಸಿಕೆನ ತೆಗೆದುಕೊಂಡ ನಂತರದಲ್ಲಿ
ಅವರ ಆರೋಗ್ಯದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರ ಸಂಶೋಧನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಹಠಾತ್ ಹೃದಯಾಘಾತದ ಸಾವುಗಳಿಗೆ “ಕೋವಿಡ್” ಕಾರಣ ಖಂಡಿತಕ್ಕೂ ಅಲ್ಲ
ಎಂದು ಕ್ಷಣಕ್ಷಣಕ್ಕೂ ವೀಟೋ (ಪ್ರಸ್ತಾಪವನ್ನು ತಿರಸ್ಕರಿಸುವ ಸಾಂವಿಧಾನಿಕ ಹಕ್ಕು) ಹೇಳುತ್ತಾ ಬಂದಿದ್ದ ಭಾರತ ಸರ್ಕಾರದ ಕಡೆಯಿಂದ
ಈಗ ಮೊದಲ ಬಾರಿಗೆ, “ಕೋವಿಡ್ ಕಾರಣ ಇರಬಹುದು” ಎಂಬ ಮಾತು ಬಂದಿದೆ.
ಜೊತೆಗೇ “ಕೋವಿಡ್ ಲಸಿಕೆ ಖಂಡಿತಕ್ಕೂ ಕಾರಣ ಅಲ್ಲ” ಎಂಬ ಉಪವೀಟೊ! ಕೂಡ ಹೊರಬಂದಿದೆ. ಸಂತೋಷ ಎಂದಿದ್ದಾರೆ.
ಈಗ ಸರ್ಕಾರಗಳು ಹಾಗೂ ICMR ಕೋವಿಡ್ ಹಠಾತ್ ಸಾವಿಗೆ ಹೇಗೆ ಕಾರಣ ಆಗುತ್ತಿದೆ? ಯಾವುದೋ ಒಂದು ನಿರ್ದಿಷ್ಟ ರಕ್ತದಗುಂಪು/ಜೀನು
ಇತ್ಯಾದಿ ಯಾವುದಾದರೂ ಹಿನ್ನೆಲೆ ಇರುವವರಿಗೆ ಆಗುತ್ತಿದೆಯೇ ಅಥವಾ ಯಾವುದಾದರೂ ಜೀವನಶೈಲಿ, ಆಹಾರ, ಪ್ರಾಯವರ್ಗದ ಕಾರಣಕ್ಕೆ ಜನ ಸಾಯತ್ತಿದ್ದಾರೆಯೆ,
ಬೇರೇನಾದರೂ ಇಲ್ಲಿಯ ತನಕ ಗೊತ್ತಾಗಿರದ ಕಾರಣಗಳಿವೆಯೆ ಎಂಬುದನ್ನು ವಿವರವಾಗಿ ಅಧ್ಯಯನಕ್ಕೆ ಒಳಪಡಿಸಿ
ಮುಂದಿನ ದಿನಗಳಲ್ಲಿ ಸಾಯಬಹುದಾದ ಜೀವಗಳ ರಕ್ಷಣೆಗೆ ವೈದ್ಯಕೀಯವಾಗಿ ಏನು ಮಾಡಬೇಕೆಂಬ ಕಡೆಗೆ ತ್ವರಿತವಾಗಿ ಅಧ್ಯಯನ
ನಡೆಸಬೇಕು ಮತ್ತು ಸಾಯಬಹುದಾದ ಎಳೆಯ ಜೀವಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.