News

ಸುಡು ಬಿಸಿಲಿಗೊಂದು ತಂಪು ಪಾನೀಯ – ರಾಗಿಹಾಲು

31 May, 2021 10:36 AM IST By:

ಬೇಸಿಗೆಯ ಬಿಸಿಲು ತಾಳಲಾರದೆ ನಾವು ತಣ್ಣಗಿರುವ ತಂಪು ಪಾನಕಗಳ ಮೊರೆ ಹೋಗುತ್ತೇವೆ. ಆದರೆ ಅದು ದೇಹಕ್ಕೆ ಅಷ್ಟು ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಬೇರೆ ದಾರಿಯಿಲ್ಲದೆ ಉಪಯೋಗಿಸುವುದು ಸಾಮಾನ್ಯ ಆದರೆ ಈ ತರಹದ ತಂಪು ಪಾನಕಗಳ ಬದಲಿಗೆ ರಾಗಿ ಹಾಲು, ರಾಗಿ ಗಂಜಿ, ರಾಗಿ ಅಂಬಲಿಯಂತಹ ಪಾನಕಗಳನ್ನು ಸೇವಿಸುವುದರಿಂದ ದೇಹಕ್ಕೆ ತಂಪು ಸಿಗುವುದರ ಜೊತೆಗೆ ನಮ್ಮ ಅರೋಗ್ಯ ವೃದ್ಧಿಗೆ ಕೂಡ ರಾಮಬಾಣ ಇದ್ದಂತೆ.

ರಾಗಿ ಬೆಳೆ, ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ಇದನ್ನು ’ಫಿಂಗರ್ ಮಿಲೆಟ್’ ಎಂದೂ ಕರೆಯುತ್ತಾರೆ. ಪುಷ್ಕಳ ಪೋಶಕಾಂಷವಿರುವ ಈ ಧಾನ್ಯ , ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ, ಸಜ್ಜೆ, ನವಣೆ, ಬರಗು ಬೆಳೆಗಳನಂತರದ ಸ್ಥಾನರಾಗಿಯದು. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ರಾಗಿ ಒಂದು ವಾಷಿ೯ಕ ಬೆಳೆಯಾಗಿದ್ದು, ಒಂದು ಬೆಳೆಯಾಗಿ ಅಥವಾ ಮಿಶ್ರಬೆಳೆಯಾಗಿಯೂ (ಶೇಂಗಾ, ಅಲಸಂದಿ ಜೊತೆಯಾಗಿ) ಬೆಳೆಯಬಹುದು. ಕಟಾವಾದ ನಂತರ ಬಹಳ ದಿನಗಳವರೆಗೆ ಸಂರಕ್ಷಿಸಬಹುದು.

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ. ಈ ಸಣ್ಣ ಕೆಂಪು ಧಾನ್ಯಗಳು ಕ್ಯಾಲ್ಸಿಯಂ, ಫೈಬರ್, ಕಬ್ಬಿಣ ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು, ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ರಾಗಿ ಸೇವನೆಯಲ್ಲಿ ಮಲೆನಾಡು ಮತ್ತು ಕರಾವಳಿಗೆ ಹೋಲಿಸಿದರೆ ಮಲೆನಾಡಿನ ಜನರು ರಾಗಿ ಬಳುಸುತ್ತರೆ ಆದರೆ ರಾಗಿ ತುಂಬಾ ಕಡಿಮೆಯಾಗಿ ಬಳಸುತ್ತಾರೆ ಏಕೆಂದರೆ ಅಲ್ಲಿ ರಾಗಿ ಬೆಳೆಯುವುದು ಬಹಳ ಅಪರೂಪ.ಹವಾಮಾನ ಪರಿಸ್ಥಿತಿಗಳಿಂದಾಗಿ ಅವರು ಭತ್ತ, ತೆಂಗುಮತ್ತುಅಡಕೆ ಹೆಚ್ಚು ಬೆಳೆಯುತ್ತಾರೆಹಾಗಾಗಿ ರಾಗಿ ಸೇವನೆಯು ತುಂಬ ವಿರಳ ಎಂದು ಹೇಳಬಹದು.

ಕರಾವಳಿ ಕರ್ನಾಟಕಭಾಗದ ಜನರು  ಇದನ್ನು ವಿವಿಧ  ಬಗೆಯ  ಅಡುಗೆ ತಯಾರಿಯಲ್ಲಿ ಮತ್ತೆ  ತಂಪು  ಪಾನಕಗಳನ್ನು  ಮಾಡಲು ಹೆಚ್ಚಾಗಿ ಬಳಸುತ್ತಾರೆ. ಹಾಗೆಯೆ ನನಗೆ  ಗೊತ್ತಿರೋ  ಪ್ರಕಾರ  ರಾಗಿ  ಗಂಜಿ , ರಾಗಿ ಹಾಲು(ರಾಗಿ ಬಾಯಾರು- ಕುಂದ ಕನ್ನಡದಲ್ಲಿ) ಹೀಗೆ  ಮುಂತಾದ  ಪಾನಕಗಳನ್ನು   ಮಾಡಲು  ಈ  ಭಾಗದ ಜನರು ಇದನ್ನು  ಬಳಸುತ್ತಾರೆ. ಹಾಗೆ  ಇದನ್ನು  ಚಿಕ್ಕವರು,  ದೊಡ್ಡವರು  ಅನ್ನದೆ  ಎಲ್ಲಾ ತರಹದ   ಜನರನ್ನುಉಪಯೋಗಿಸುತ್ತರೆ.ಬೇಸಿಗೆ ಬಂತೆಂದರೆ ಸಾಕು ರಾಗಿ ಹಾಲು ಅನ್ನೋದು ಈ ಭಾಗದ ಜನರ ಪ್ರಮುಖ ತಂಪು ಪಾನಕಗಳಲ್ಲಿ ಒಂದಾಗಿರುತ್ತದೆ.

ರಾಗಿ ಗಂಜಿ ಸೇವನೆಯಿಂದ ದೇಹಕ್ಕೆ ಆಹಾರ ಪೂರೈಕೆ ಮಾತ್ರವಲ್ಲದೆ ದೇಹದಲ್ಲಿನ ಕೊಬ್ಬು ಕೂಡ ಇದು ಕರಗಿಸುತ್ತದೆ ಅಲ್ಲದೆ ಇದು ಮೂಳೆಗಳನ್ನು ಕೂಡ ಗಟ್ಟಿಯಾಗಿಸುತ್ತದೆ ಎಂದು ಹೇಳಲಾಗಿದೆ.ಈ ರಾಗಿಹಾಲು ಅಥವಾ ಅಂಬಲಿಯನ್ನು ಪ್ರತಿದಿನ ಸೇವಿಸುತ್ತಾ ಬರುವುದರಿಂದ ನಿಶ್ಶಕ್ತಿ ಆಗುವುದು ಅಥವಾ ದೇಹದ ಉಷ್ಣಾಂಶ ಹೆಚ್ಚಾಗುವುದು ಮಲಬದ್ಧತೆ ಮೂಲವ್ಯಾಧಿ ಅಥವಾ ಉರಿ ಮೂತ್ರ ಸಮಸ್ಯೆ ಇಂತಹ ಯಾವ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ.

ನಮ್ಮ ಪೂರ್ವಜರು ಹೇಳಿದ ಹಾಗೆ ರಾಗಿ ತಿನ್ನುವನಿಗೆ ರೋಗವಿಲ್ಲ ಎಂಬ ಮಾತು ಇನ್ನು ರೂಡಿಯಲ್ಲಿದೆ.ಅದಕ್ಕೆ ತಕ್ಕಂತೆ ರಾಗಿಯಿಂದ ತಯಾರಿಸ್ಪಲುಡುವ ಆಹಾರ ತಿನ್ನುತ್ತಿದ ನಮ್ಮ ಹಿರಿಯರು ಗಟ್ಟಿ ಮುಟ್ಟಾಗಿರುವುದನ್ನು ನೋಡಿದಾಗ ಇದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಆದರೆ ಆಧುನಿಕತೆಯ ಸೋಗಿನಲ್ಲಿ ಬಿದ್ದವರು ರಾಗಿಯನ್ನು ತಿರಸ್ಕಾರ ಮನೋಭಾವನೆಯಿಂದ ನೋಡಿದ್ದು ಜಾಸ್ತಿ. ಆದರೆ ಇಂದು ಅದೇ ಜನರು ರಾಗಿಯ ವಿಶೇಷ ಗುಣಗಳನ್ನು ತಿಳಿದು ಇಂದು ಅದನ್ನು ಬಳಸಲು ಮುಗಿ ಬಿದ್ದಿದ್ದಾರೆ. ಈಗ ಬೇಸಿಗೆ ಕಾಲ ಬಂದಿದ್ದು ಈ ಕಡು ಬಿಸಿಸಲಲ್ಲಿ ರಾಗಿಯು ನಮಗೆ ಬಹುಮುಖ್ಯ ಮತ್ತು ನಮ್ಮ ದೇಹಾರೋಗ್ಯಕ್ಕೆ ಬಹಳ ಸೂಕ್ತ ಔಷಧಿ.

ರಾಗಿ ಹಾಲು ತಯಾರಿಸುವ ವಿಧಾನ:

1 ಬಟ್ಟಲು ರಾಗಿ ,1 ಏಲಕ್ಕಿ, 1/2ಬಟ್ಟಲು ತುರಿದ ತೆಂಗಿನಕಾಯಿಸುಮಾರು 2 ಕಪ್ ನೀರು ಮತ್ತು1/2 ಬಟ್ಟಲು ಬೆಲ್ಲ

ವಿಧಾನ: ರಾಗಿಯನ್ನು ಚೆನ್ನಾಗಿ ತೊಳೆದು 1/2 ಕಪ್ ನೀರಿನಿಂದ ರಾತ್ರಿಯಿಡೀ ಅಥವಾ 6 ರಿಂದ 8 ಗಂಟೆಗಳ ಕಾಲ ನೆನೆಸಿಡಿನೆನೆಸಿದ ರಾಗಿಯನ್ನು ಏಲಕ್ಕಿನೀರುತೆಂಗಿನಕಾಯಿಯೊಂದಿಗೆ ಪುಡಿ ಮಾಡಿರುಬ್ಬಿದ ಮಿಶ್ರಣದಿಂದ ರಾಗಿ ಹಾಲನ್ನು ಬಟ್ಟೆಯ ಸಹಾಯದಿಂದ ಬೇರ್ಪಡಿಸಿಉಳಿದ ತಿರುಳಿಗೆ ನೀರು ಸೇರಿಸಿ ಮತ್ತೆ ರುಬ್ಬಬೇಕುಒಂದೆರಡು ಬಾರಿ ಹಾಲನ್ನು ಹೊರತೆಗೆದ ನಂತರ 3 ರಿಂದ 4 ಬಾರಿ ಕಾರ್ಯವಿಧಾನವನ್ನು ಪುನರಾವರ್ತಿಸಿಈಗ ಬೆಲ್ಲ ಅಥವಾ ನಿಮ್ಮ ಆಯ್ಕೆಯ ಯಾವುದೇ ಸಿಹಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣಮಾಡಿರಾಗಿ ಹಾಲು ಕುಡಿಯಲು ಸಿದ್ಧವಾಗುತ್ತದೆ.

ಲೇಖನ: ರಾಜೇಶ ಕುಲಾಲ್, ಕುಂದಾಪುರ, ಉಡುಪಿ (ಜಿಲ್ಲೆ )