News

ತ್ಯಾಜ್ಯ ಆಯುವ ಮಹಿಳೆಯರ ಘನತೆಯ ಬದುಕಿಗೆ ಶ್ರಮಿಸುತ್ತಿದೆ ಹಸಿರುದಳ!

27 March, 2023 11:42 AM IST By: Hitesh
HasiruDal is working hard for the dignified life of waste women!

ತ್ಯಾಜ್ಯ ಆಯುವವರಿಗೆ ಘನತೆಯ ಬದುಕು ರೂಪಿಸಲು ಹಸಿರುದಳ ಎಂಬ ಸಂಸ್ಥೆ ಶ್ರಮಿಸುತ್ತಿದೆ.

ಈ ಸಂಸ್ಥೆಯಿಂದ ಸಾವಿರಾರು ಜನ ತ್ಯಾಜ್ಯಆಯುವ ಮಹಿಳೆಯರು ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಅವರದೇ ಆದ ಐಡೆಂಟಿಟಿ ಪಡೆದುಕೊಂಡಿದ್ದಾರೆ.

2013ರಲ್ಲಿ ಹಸಿರುದಳ ಸ್ಥಾಪನೆಯಾಗಿದ್ದು, ಈ ಸಂಸ್ಥೆ ಇಲ್ಲಿಯವರೆಗೆ ಸಾವಿರಾರು ಜನತ್ಯಾಜ್ಯ ಆಯುವ ಮಹಿಳೆಯರು,

ತ್ಯಾಜ್ಯ ಕಾರ್ಯಕರ್ತೆಯರು ಹಾಗೂ ತ್ಯಾಜ್ಯ ಆಯುವವರ ಶ್ರೇಯೋಭಿವೃದ್ಧಿಗೆ ನೆರವು ನೀಡಿದೆ. 

ಬೆಂಗಳೂರಿನಲ್ಲಿ 2010ರಲ್ಲಿ ಕಸ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿತ್ತು.

ಕಸ ನಿರ್ವಹಣೆ ಹಾಗೂ ವಿಂಗಡಣೆಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿತ್ತು.

ಆದರೆ, ಈ ಸಂದರ್ಭದಲ್ಲಿ ತ್ಯಾಜ್ಯ ಆಯುವವರು ಹಾಗೂ ಸಂಗ್ರಹಕರ ಬಗ್ಗೆ ಯಾರೂ ಮಾತನಾಡಿರಲಿಲ್ಲ.

ಕಸದ ಬಗ್ಗೆ ಮಾತ್ರ ಮಾತನಾಡಿ ಕಸ ಆಯುವವರ ಬಗ್ಗೆ ಮಾತನಾಡದೆ ಇರಲು ಸಾಧ್ಯವಿರಲಿಲ್ಲ.

ಯಾವುದೇ ಪ್ರದೇಶ ಸ್ವಚ್ಛವಾಗಿರಬೇಕಾದರೆ ಅಲ್ಲಿ ತ್ಯಾಜ್ಯ ಆಯುವವರು ಹಾಗೂ ತ್ಯಾಜ್ಯ ಸಂಗ್ರಹಕಾರರು ಪ್ರಮುಖ ಪಾತ್ರ ವಹಿಸುತ್ತಾರೆ.

ಆಗಲೇ ಮೂಡಿದ್ದು, ಈ ಸಂಸ್ಥೆಯ ಪರಿಕಲ್ಪನೆ. 

ರಾಜ್ಯದ ವಿವಿಧೆಡೆ ಮುಂದುವರಿದ ಧಾರಾಕಾರ ಮಳೆ!

ತ್ಯಾಜ್ಯ ಆಯುವವರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಹಸಿರು ದಳ ಹಲವು ಯೋಜನೆಗಳನ್ನು ರೂಪಿಸಿದೆ.  

ಒಣಕಸ (Donate Dry Waste)ದೇಣಿಗೆ ನೀಡಿ ಎಂಬ ಪ್ರಯೋಗವನ್ನು ಮೊದಲು ಬೆಂಗಳೂರಿನಲ್ಲಿ ಮಾಡಿ, ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಯಿತು.

ನಂತರ ಕಸ ಬೇರ್ಪಡಿಸುವುದರಿಂದ ಕಸ ನಿರ್ವಹಣೆ ಹಾಗೂ ಪುನರ್‌ಬಳಕೆ ಪ್ರಮಾಣ ಹೆಚ್ಚಳವಾಗಿದ್ದನ್ನು ಹಸಿರುದಳವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ತೋರಿಸಿತ್ತು.

ಕೇಂದ್ರದಿಂದ ಎಲ್‌ಪಿಜಿ ಗ್ಯಾಸ್‌ ಹೊಂದಿರುವವರಿಗೆ ಸಿಹಿಸುದ್ದಿ: ಬರೋಬ್ಬರಿ 200 ಸಬ್ಸಿಡಿ ನೀಡಲು ಅನುಮೋದನೆ 

ಈ ಕ್ರಮದಿಂದ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ (ಎಲ್ಲೆಂದರಲ್ಲಿ ಕಸ ಎಸೆಯುವ ಪ್ರಮಾಣ)ದಲ್ಲಿ ಇಳಿಕೆ ಕಂಡುಬಂತು.

ಮುಂದೆ ಇದನ್ನು ಉಳಿದ ನಗರಗಳಲ್ಲೂ ಪ್ರಯೋಗಿಸಲಾಯಿತು.

ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ 

ಬೆಂಗಳೂರಿನಲ್ಲಿ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ಕಳೆದ ಒಂದು ದಶಕದಿಂದಷ್ಟೇ ಅಭಿವೃದ್ಧಿ ಆಗಿದ್ದು, ಇದರ ನಿರ್ವಹಣೆಯಲ್ಲಿ ತ್ಯಾಜ್ಯ ಆಯುವವರ ಪಾತ್ರ ಪ್ರಮುಖವಾಗಿದೆ.

ಬೆಂಗಳೂರಿನಲ್ಲಷ್ಟೇ ಅಂದಾಜು 35 ಸಾವಿರ ಜನ ತ್ಯಾಜ್ಯ ಆಯುವವರು ಇದ್ದಾರೆ.

ಸಂಸ್ಥೆಯು ಬುಗುರಿ ಎನ್ನುವ ಕಾರ್ಯಕ್ರಮದ ಮೂಲಕ ತ್ಯಾಜ್ಯ ಆಯುವವರ ಮಕ್ಕಳ ಕೌಶಲ್ಯ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂಧ್ರಪ್ರದೇಶದಲ್ಲೂ ಸಂಸ್ಥೆ ಸಕ್ರಿಯವಾಗಿದೆ.

ರಾಜ್ಯದಲ್ಲಿ 11,300 ಸಾವಿರ ಜನ ತ್ಯಾಜ್ಯ ಆಯುವವರಿಗೆ ಉದ್ಯೋಗ ಕಾರ್ಡ್‌ ನೀಡಿದೆ.

3,700ಕ್ಕೂ ಹೆಚ್ಚು ತ್ಯಾಜ್ಯ ಆಯುವ ಮಕ್ಕಳಿಗೆ ಬುಗುರಿ ಕಾರ್ಯಕ್ರಮ ರೂಪಿಸಲಾಗಿದೆ.

ಹಸಿರುದಳದ ಕಾರ್ಯಕಾರಿ ನಿರ್ದೇಶಕಿ ಮತ್ತು ಹಸಿರು ದಳದ ಸಹಸಂಸ್ಥಾಪಕಿಯೂ ಆಗಿರುವ ನಳಿನಿ ಶೇಖರ್ ಅವರು ಸಂಸ್ಥೆಯ ಪಯಣದ ಕುರಿತು ಹೇಳುವುದು ಹೀಗೆ,

ತ್ಯಾಜ್ಯ ಆಯುವವರಿಗೆ ಉತ್ತಮ ಜೀವನ ರೂಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ

ಹಸಿರುದಳದ ಕಾರ್ಯಕಾರಿ ನಿರ್ದೇಶಕಿ, ಹಸಿರು ದಳದ ಸಹಸಂಸ್ಥಾಪಕಿ ನಳಿನಿ ಶೇಖರ್

ಸ್ಥಳೀಯ ಸಂಸ್ಥೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ತ್ಯಾಜ್ಯ ಆಯುವವರ ನಡುವೆ ಹಸಿರುದಳ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

ತ್ಯಾಜ್ಯ ಆಯುವವರಿಗೆ ಜಾಗೃತಿ ಹಾಗೂ ತಿಳಿವಳಿಕೆ ನೀಡಲಾಗುತ್ತಿದೆ. 

ತ್ಯಾಜ್ಯ ಆಯುವವರು ಬೆಂಗಳೂರಿನಲ್ಲಿ 39 ಹಾಗೂ ರಾಜ್ಯದಲ್ಲಿ ಒಟ್ಟಾರೆ 84 ಒಣತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ಹಸಿರುದಳ ನೆರವಾಗಿದೆ.

ತ್ಯಾಜ್ಯ ಆಯುವ ಮಹಿಳೆಯರಿಗೆ ತಾಯಿ ಕಾರ್ಡ್‌ ಸೇರಿದಂತೆ 44 ಸೇವೆಗಳನ್ನು ನೀಡಲು (ಸರ್ಕಾರ ಪರಿಚಯಿಸಿರುವ ಯೋಜನೆ) ಶ್ರಮಿಸುತ್ತಿದೆ.

18 ನಗರಗಳು ಹಾಗೂ 64 ಹಳ್ಳಿಗಳಲ್ಲಿ ಹಸಿರುದಳ ಸಕ್ರಿಯವಾಗಿದೆ.

ಇನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ನೆರವಾಗಿದೆ.

ಮತ್ತಷ್ಟು ತ್ಯಾಜ್ಯ ಆಯುವವರಿಗೆ ನೆರವಾಗುವ ಉದ್ದೇಶ ಹಸಿರುದಳದ್ದು ಎನ್ನುತ್ತಾರೆ ನಳಿನಿ. 

PM Kisan 14th Installment release: ಪಿಎಂ ಕಿಸಾನ್‌ 14ನೇ ಕಂತಿನ ಕುರಿತು ಮಹತ್ವದ ಮಾಹಿತಿ!