ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಐದು ದಿನ ಮಾತ್ರ ಬಾಕಿ ಉಳಿದಿದ್ದು, ಚುನಾವಣೆಯಲ್ಲಿ ಶತಾಯಗತ ಗೆಲುವು ಸಾಧಿಸಬೇಕು ಎಂದು ಎಲ್ಲ ಪಕ್ಷಗಳೂ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.
ಇದೀಗ ಕಾಂಗ್ರೆಸ್ ಪಕ್ಷವು ಅದರ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು..
ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿಜೆಪಿಯ ವಿವಿಧ ಹಗರಣಗಳ ಪಟ್ಟಿ ಇದು ಎಂದು ಪ್ರಕಟಿಸಿದೆ.
“ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಇದು..
ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮಧೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ
ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ.
ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸಿ.” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ಟರ್ ಅಕೌಂಟ್‌ನಿಂದ ಟ್ವೀಟ್ ಮಾಡಲಾಗಿದೆ.
ಕಾರ್ಡ್‌ನ ಮೇಲೆ ಈ ಟ್ರಬಲ್ ಎಂಜಿನ್ ಸರ್ಕಾರ ಎಂದು ಬರೆಯಲಾಗಿದೆ. ಭ್ರಷ್ಟಾಚಾರ ರೇಟ್ ಕಾರ್ಡ್ ಎಂದು ನೀಡಲಾಗಿದ್ದು,
2019-2023ರಲ್ಲಿ ನಡೆದಿತ್ತು ಎನ್ನಲಾದ ಹಗರಣಗಳ ಬಗ್ಗೆ ಈ ರೀತಿ ಪ್ರಕಟಿಸಲಾಗಿದೆ.
ಸಿ.ಎಂ ಹುದ್ದೆಗೆ: 2,500 ಕೋಟಿ ರೂಪಾಯಿ
ಮಂತ್ರಿಗಳ ಹುದ್ದೆ 500 ಕೋಟಿ
ನೇಮಕಾತಿ ಮತ್ತು ವರ್ಗಾವಣೆ ದರ
ಕೆಎಸ್‌ಡಿಎಲ್ 5 ಕೋಟಿ- 15 ಕೋಟಿ
ಎಂಜಿನಿಯರ್ 1 ಕೋಟಿಯಿಂದ 5 ಕೋಟಿ
ಸಬ್ ರಿಜಿಸ್ಟರ್ ಲಕ್ಷದಿಂದ 5 ಕೋಟಿ
ಬೆಸ್ಕಾಂ 1 ಕೋಟಿ
ಪಿಎಸ್‌ಐ 80 ಲಕ್ಷ ರೂಪಾಯಿ
ಸಹಾಯಕ ಪ್ರಾಧ್ಯಾಪಕ 50ರಿಂದ 70 ಲಕ್ಷ ರೂಪಾಯಿ
ಉಪನ್ಯಾಸಕ 30ರಿಂದ 50 ಲಕ್ಷ
ಎಫ್‌ಡಿಎ 30 ಲಕ್ಷ
ಸಹಾಯಕ ಎಂಜಿನಿಯರ್ 30 ಲಕ್ಷ
ಬಮುಲ್ 25 ಲಕ್ಷ
ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ 10 ಲಕ್ಷ
ಪೊಲೀಸ್ 10 ಲಕ್ಷ
ಹುದ್ದೆಗಳ ದರ
ಬಿಡಿಎ ಆಯುಕ್ತ 10ರಿಂದ 15 ಕೋಟಿ
ಕೆಪಿಎಸ್‌ಸಿ ಅಧ್ಯಕ್ಷ 5 ಕೋಟಿಯಿಂದ 15 ಕೋಟಿ
ಡಿಸಿ ಮತ್ತು ಎಸ್‌ಸಿ 5 ಕೋಟಿಯಿಂದ 15 ಕೋಟಿ
ಉಪಕುಲಪತಿ 5ರಿಂದ 10 ಕೋಟಿ
ಎಸಿ- ತಹಶೀಲ್ದಾರ್ 50ರಿಂದ 3 ಕೋಟಿ