News

ರೈತರಿಗೆ ಸಂತಸದ ಸುದ್ದಿ-ಕರ್ನಾಟಕ ಕಿಸಾನ್ ಬಂಡಿ ಆ್ಯಪ್ ಬಳಸಿ ಮನೆಯಲ್ಲಿಯೇ ಕುಳಿತು ಬೆಳೆ ಮಾರಾಟ ಮಾಡಿ

26 January, 2021 9:49 AM IST By: KJ Staff
Kisan Bandi app

ರೈತ ಬಾಂಧವರಿಗೆ ಸಂತಸದ ಸುದ್ದಿ ಇಲ್ಲಿದೆ, ಮದ್ಯವರ್ತಿಗಳಿಲ್ಲದೆ ಮನೆಯಲ್ಲಿಯೇ ಕುಳಿತು ರೈತರು ತಮ್ಮ ಉತ್ಪನ್ನಗಳನ್ನು ತಾವೇ ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಬಹುದು. ಹೌದು ಇಂತಹದೊಂದು ಕರ್ನಾಟಕ ಕಿಸಾನ್ ಬಂಡಿ ಆ್ಯಪ್ ಕೃಷಿ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿದೆ.

ರೈತರ ಕೃಷಿ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ರೂಪುಗೊಂಡಿದ್ದ  ಈ ಆ್ಯಪ್ ನ್ನು ನನ್ನ ಬೆಳೆಗೆ ನನ್ನದೇ ಬೆಲೆ ಅಭಿಯಾನದಡಿಯಲ್ಲಿ ತಯಾರಿಸಲಾಗಿದೆ. ಈ ಆ್ಯಪ್ ಸಹಾಯದಿಂದ ರೈತಬಾಂಧವರು ಕೃಷಿ ಉತ್ಪನ್ನಗಳನ್ನು ತಮ್ಮ ಹೊಲದಿಂದಲೇ ಮರಾಟ ಮಾಡಬಹುದು.

ಕಿಸಾನ್ ಬಂಡಿ ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

ರೈತರು ತಮ್ಮ ಹೊಲದಲ್ಲಿ ಯಾವುದೇ ಬೆಳೆ ಬೆಳೆಯಲಿ. ಈ ಆ್ಯಪ್ ಸಹಾಯದಿಂದ ಮಾರಾಟ ಮಾಡಲು ಬಯಸಿದರೆ ತಮ್ಮ ಬೆಳೆಗಳ ವಿವರ ಅಪಲೋಡ್ ಮಾಡಿದ ನಂತರ ನಿಮ್ಮ ಮನೆ ಬಾಗಿಲಿಗೆ ಆಟೋ, ಟೆಂಪೋ ಅಥವಾ ಲಾರಿ ಹೊಂದಿರು ಕಿಸಾನ್ ಬಂಡಿ ಕನೆಕ್ಟರ್ ತಂಡ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಬರಲಿದೆ. ರೈತರು ತಾವು ನಿರ್ಧರಿಸಿದ ದರವೇ ಅಂತಿಮವಾಗಿರುತ್ತದೆ. ಪ್ಯಾಕಿಂಗ್, ಸಾಗಾಟ ವೆಚ್ಚದೊಂದಿಗೆ ಶೇ. 10 ಸೇವಾ ಶುಲ್ಕ ಖರೀದಿದಾರರು ಭರಿಸಬೇಕಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಮುಂಗಡವಾಗಿ ಅವರ ಖಾತೆಗೆ ಹಣ ಜಮೆಯಾದ ನಂತರವೇ ಉತ್ಪನ್ನಗಳನ್ನು ಖರೀದಿದಾರರಿಗೆ ತಲುಪಿಸುವುದು.

ಕಿಸಾನ್ ಬಂಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://play.google.com/store/apps/details?id=com.agri.kisanbandi&hl=en_IN&gl=US

ಕಿಸಾನ್ ಬಂಡಿ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?

ಕಿಸಾನ್ ಬಂಡಿ ಆ್ಯಪ್ ರೈತರು ತಮ್ಮ ಮೊಬೈಲಿನಲ್ಲಿ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಹೆಸರು, ಈ ಮೇಲ್ ಐಡಿ, ಮೊಬೈಲ್ ನಂಬರ್ ನಮೂದಿಸಿದ ನಂತರ ಯೂಸರ್ ಐಡಿ ಮತ್ತು ಪಾಸ್ವರ್ಡನ್ನು  ಈಮೇಲಿಗೆ ಕಳಿಸಲಾಗುವುದು.

ಮೇಲ್ ಗ ಬಂದ ಯೂಸರ್ ಐಡಿ ಮತ್ತು ಪಾಸ್ವರ್ಡನ್ನು ಬಳಸಿ ಲಾಗಿನ್ ಆಗಿ ಬ್ಯಾಂಕ್ ಅಕೌಂಟ್ ನಂಬರಿ ನಮೂದಿಸಬೇಕು. ನಂತರ ಬೆಳೆ ವಿವರ ಫೋಟೊ ಅಪಲೋಡ್ ಮಾಡಿ  ದರ ನಮೂದಿಸಬೇಕು. ಕಿಸಾನ್ ಬಂಡಿ ಕನೆಕ್ಟರ್ ತಂಡ ನಿಮ್ಮ ಉತ್ಪನ್ನಗಳ ಸಾಗಾಣೆ ಜವಾಬ್ದಾರಿವಹಿಸುವುದು.