News

ತಾಡಪತ್ರಿ ನೀಡಲು ರೈತರಿಂದ ಅರ್ಜಿ ಆಹ್ವಾನ

31 January, 2021 7:51 PM IST By: KJ Staff
tarpaulin

ಕೃಷಿ ಕಾರ್ಯಕ್ಕೆ ರೈತರಿಗೆ ಸಹಾಯವಾಗುವ ತಾಡಪತ್ರಿಗಳನ್ನು ರೈತರಿಗೆ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆದುಕೊಳ್ಳಬಹುದು ಎಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯು ಕೃಷಿ ಉತ್ಪನಗಳ ಸಂಸ್ಕರಣೆ ಯೋಜನೆಯಡಿ ರೈತರಿಗೆ ತಾಡಪತ್ರಿಗಳ ವಿತರಿಸಲು ಯೋಜನೆ ರೂಪಿಸಿದ್ದು, ರೈತರಿಂದ ಅರ್ಜಿ ಆಹ್ವಾನಿಸಿದೆ.

ಫೆ.1ರಿಂದ 15 ರವರೆಗೆ ಅರ್ಜಿ ಸಲ್ಲಿಸಬಹುದು. ಕಳೆದ ಮೂರು ವರ್ಷಗಳಲ್ಲಿ ತಾಡಪತ್ರಿ ಪಡೆದಿರುವ ರೈತರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಪರಿಶಿಷ್ಟಿ ಜಾತಿ, ಪಂಗಡದ ರೈತರು ಹೊಸದಾಗಿ ಪಡೆದ ಜಾತಿ ಪ್ರಮಾಣಪತ್ರದಲ್ಲಿ ಆರ್.ಡಿ ಸಂಖ್ಯೆ ಹೊಂದಿರಬೇಕು. ಕೃಷಿ ಇಲಾಖೆಯ ಎಫ್.ಐ.ಡಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು. ಗ್ರಾಮ ಪಂಚಾಯತಿವಾರು ಅರ್ಜಿ ವಿಂಗಡಿಸಿ ವಿತರಣೆ ಮಾಡಲಾಗುವುದು.

ಇಂಡಿ, ಬಳ್ಳೊಳ್ಳಿ ಮತ್ತು ಚಡಚಣ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಅರ್ಜಿಗಳು ಬಂದರೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಲಾವುದು ಎಂದು ತಿಳಿಸಿದ್ದಾರೆ.

ಅರ್ಜಿಸಲ್ಲಿಸಬಯಸುವ ರೈತರು ಕೊನೆಯದ ದಿನದವರೆಗೆ ಕಾಯದೆ ಬೇಗನೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಹೆಚ್ಚುಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.