News

ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸಿದ ಇಲಾಖೆ

21 January, 2021 9:40 AM IST By:

ಕೊರೋನಾ ಮಹಾಮಾರಿ ಇಂದ ಕಾಲೇಜು ಗಳೆಲ್ಲಾ ಬಂದಾಗ 8-10 ತಿಂಗಳಾಗಿವೆ, ಆದರೆ ಜನವರಿ 15ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ, ಆದರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಕರು ಇಲ್ಲ, ಹಾಗಾಗಿ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವುದನ್ನು ಮರೆತಿತ್ತು, ಆಗ ವರದಿ ಮಾಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶವನ್ನು ಹೊರಡಿಸಿದೆ.

ಕಾಯಂ ಇರುವ ಉಪನ್ಯಾಸಕರಿಗೆ ಕಾರ್ಯಭಾರವನ್ನು ಹಂಚಿದ ನಂತರ, ಉಳಿಯುವ ಕಾರ್ಯಾ ಭಾರವನ್ನು ನಡೆಸಲು ಅತಿಥಿ ಉಪನ್ಯಾಸಕರ ಅತ್ಯವಶ್ಯಕ ವಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಒಟ್ಟು 14,183 ಅತಿಥಿ ಶಿಕ್ಷಕರ ಅವಶ್ಯಕತೆ ಇದೆ.

ಆದರೆ ಸರ್ಕಾರದ ಆದೇಶದ ಪ್ರಕಾರ ಅದರಲ್ಲಿ ಶೇಕಡ 50ರಷ್ಟು ಅಂದರೆ 7,091 ಅತಿಥಿ ಶಿಕ್ಷಕರನ್ನು ಷರತ್ತಿನ ಆಧಾರದ ಮೇಲೆ ನೇಮಿಸಿಕೊಳ್ಳಲು ಆದೇಶವನ್ನು ಹೊರಡಿಸಿದೆ.