ಜಿಎಸ್ಟಿ ತೆರಿಗೆ ಸಂಗ್ರಹ ಆರಂಭಗೊಂಡಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆಯ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನ ಜಿಎಸ್‌ಟಿ ಆದಾಯವು ಶೇ. 15ರಷ್ಟು ಹೆಚ್ಚಾಗಿದೆ. ವಸ್ತುಗಳ ಆಮದಿನಿಂದ ಪಡೆಯುವ ಆದಾಯ ಶೇ.27 ರಷ್ಟು ಹೆಚ್ಚಾಗಿದ್ದರೆ, ದೇಶೀಯ ಸರಕು ಮತ್ತು ಸೇವೆಗಳ ವರ್ಗಾವಣೆಯಿಂದ ಶೇ. 8ರಷ್ಟು ಹೆಚ್ಚಿನ ಆದಾಯ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಜಿಎಸ್‍ಟಿ ತೆರಿಗೆ ಸಂಗ್ರಹ 1,15 ಲಕ್ಷ ಕೋಟಿ ರೂಪಾಯಿ ಮೀರಿ ಹೊಸ ದಾಖಲೆ ಬರೆಯಲಾಗಿದೆ.
ಇಲ್ಲಿಯವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ಡಿಸೆಂಬರ್‌ನಲ್ಲಿ ಸಂಗ್ರಹವಾದ ಮೊತ್ತ ಈವರೆಗಿನ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2019ರ ಏಪ್ರಿಲ್‌ನಲ್ಲಿ 1.13 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದೇ ದಾಖಲೆಯಾಗಿತ್ತು.
ಡಿಸೆಂಬರ್ 31ರ ವರೆಗಿನ ಜಿಎಸ್ ಟಿ ಆರ್-3ಬಿ ರಿಟರ್ನ್ಸ್ ಸಲ್ಲಿಕೆಯಾದ ಒಟ್ಟು ಸಂಖ್ಯೆ 87 ಲಕ್ಷ ರೂಪಾಯಿ ಆಗಿದೆ. ಈ ಮೂಲಕ ದೇಶದಲ್ಲೇ ಡಿಸೆಂಬರ್ ನಲ್ಲಿ ಹೆಚ್ಚು ಮೊತ್ತದ ಜಿಎಸ್ಟಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆಯ ಹೇಳಿದೆ.
ಕೇಂದ್ರದ ಜಿಎಸ್‌ಟಿ 21,365 ಕೋಟಿ ರೂ., ರಾಜ್ಯ ಜಿಎಸ್‌ಟಿ 27,804 ಕೋಟಿ ರೂ. ಹಾಗೂ ಸಂಯೋಜಿತ ಜಿಎಸ್‌ಟಿ 57,426 ಕೋಟಿ ರೂ. ಹಾಗೂ ಸೆಸ್ 8,579 ಕೋಟಿ ರೂ. ಸೇರಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಸರಕಾರವು 23,276 ಕೇಂದ್ರ ಜಿಎಸ್‌ಟಿ ಹಾಗೂ 17,681 ರಾಜ್ಯ ಜಿಎಸ್‌ಟಿಗಳನ್ನು ಪಾವತಿ ಮಾಡಿದೆ. ಈ ಪಾವತಿಗಳ ನಂತರ ಕೇಂದ್ರ ಸರಕಾರದ ಡಿಸೆಂಬರ್‌ನ ಆದಾಯ 44,641 ಕೋಟಿ ರೂ. ಹಾಗೂ ರಾಜ್ಯ ಸರಕಾರದ ಆದಾಯ 45,485 ಕೋಟಿ ರೂ.ಗಳಾಗಿವೆ.
ಜಿಎಸ್ ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020ರ ಡಿಸೆಂಬರ್ ತಿಂಗಳ ಆದಾಯ ಕಳೆದ ವರ್ಷದ ಇದೇ ತಿಂಗಳ ಜಿಎಸ್ ಟಿ ಆದಾಯಕ್ಕಿಂತ ಶೇ.12ರಷ್ಟು ಹೆಚ್ಚಾಗಿದೆ ಎಂದೂ ಹೇಳಲಾಗಿದೆ.