News

Gruha lakshmi Scheme Update : ಈ ದಿನ ಮಹಿಳೆಯರ ಖಾತೆಗೆ ಬರಲಿದೆ ₹2000 ರೂಪಾಯಿ! ಯಾರು ಅರ್ಹರು?

15 July, 2023 5:11 PM IST By: Kalmesh T
Gruha lakshmi Scheme application submission starts from 19th July

Gruha lakshmi Scheme update : ಕಾಂಗ್ರೆಸ್‌ ಭರವಸೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದು.  ಯೋಜನೆಯಡಿ ಮನೆಯ ಯಜಮಾನಿಗೆ ₹2,000 ರೂಪಾಯಿ ಸಹಾಯಧನ ನೀಡುವ ಕುರಿತು ತಿಳಿಸಲಾಗಿತ್ತು. ಇದೀಗ ಈ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ (laxmi hebbalkar) ಇಂದು ತಿಳಿಸಿದ್ದಾರೆ.

Gruha lakshmi Scheme application submission : ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2,000 ರೂಪಾಯಿ ಸಹಾಯಧನವನ್ನ ಭತ್ಯೆ ರೂಪದಲಿ ನೀಡಲಾಗುವ ಗೃಹಲಕ್ಷ್ಮೀ (Gruhalaxmi) ಯೋಜನೆಯನ್ನ ಜಾರಿಗೆ ತರುವ ಎಂದು ಭರವಸೆ ನೀಡಿದ್ದರು.

ಇದೀಗ ಆ ಪ್ರಕಾರವಾಗಿ 5 ಗ್ಯಾರಂಟಿಗಳ ಅನುಷ್ಠಾನವನ್ನು ಆರಂಭಿಸಿದ್ದಾರೆ. ಇದೀಗ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕ ಫಿಕ್ಸ್‌ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪತ್ರಿಕಾಗೋಷ್ಠಿ ನಡೆಸಿ, ಈ ವಿಚಾರವನ್ನ ಹಂಚಿಕೊಂಡಿದ್ದಾರೆ.

ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭ | Application submission starts from 19th July

ಮನೆ ಯಜಮಾನಿಗೆ 2000 ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ಜುಲೈ 19ರಿಂದ ಆರಂಭಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್‌ ಅವರು ತಿಳಿಸಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ರಾಷ್ಟ್ರೀಯ ನಾಯಕರನ್ನು ಕರೆಸಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದರು.

ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಕರ್ನಾಟಕ ಒನ್, ಗ್ರಾಮ್ ಒನ್, ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ತುಂಬಲು ಸಹಾಯವಾಗುವಂತೆ ಪ್ರಜಾ ಪ್ರತಿನಿಧಿಗಳ ನೇಮಕ!

ಅರ್ಜಿ ಸಲ್ಲಿಸುವುದಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ.

ಅರ್ಜಿ ತುಂಬಲು ನೆರವಾಗಲು ಪ್ರಜಾ ಪ್ರತಿನಿಧಿಗಳನ್ನು (Appointment of public representatives) ನೇಮಕ ಮಾಡಲಾಗುವುದು. ಅವರಿಗೆ ಯಾವುದೇ ರೀತಿಯ ಹಣ ನೀಡಬಾರದು. ಸರಕಾರವೇ ಅವರಿಗೆ ಹಣ ನೀಡಲಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಜಿ.ಎಸ್.ಟಿ ಮತ್ತು ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಏನಾದರೂ ಗೊಂದಲವಿದ್ದರೆ 81475 00500 ಮೊಬೈಲ್ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಯಾರೆಲ್ಲ ಅರ್ಹರು? ನೋಂದಣಿ ಹೇಗೆ? | Who is eligible for Gruhalakshmi Yojana? How to register?

  1. ಜುಲೈ 19ರಿಂದ ಈ ಯೋಜನೆಗೆ ನೋಂದಣಿ ಆರಂಭ
  2. ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿದವರು ಯೋಜನೆಯ ಲಾಭ ಪಡೆಯಲು ಅರ್ಹರು
  3. ಯಜಮಾನಿ ಅಥವಾ ಮಹಿಳೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್‌.ಟಿ ಪಾವತಿದಾರರು ಆಗಿರಬಾರದು
  4. ಯಜಮಾನಿಗೆ ಎಸ್‌ಎಂಎಸ್‌ ಮೂಲಕ ನೋಂದಣಿ ದಿನ, ಸಮಯ, ಮತ್ತು ಸ್ಥಳದ ವಿವರ ತಿಳಿಸಲಾಗುತ್ತದೆ
  5. ಗ್ರಾಮ್‌ ಒನ್‌ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು
  6. ಆಗಸ್ಟ್‌ 16 ಅಥವಾ 17 ರಂದು ಯಜಮಾನಿ ಖಾತೆಗೆ ಹಣ ಜಮಮೆಯಾಗುವ ಸಾಧ್ಯತೆ
  7. ಮಾಹಿತಿಗೆ 1902ಕ್ಕೆ ಅಥವಾ 81475 00500 ಗೆ ಮೆಸೆಜ್‌ ಮೂಲಕ ಅಥವಾ ವಾಟ್ಸಪ್‌ ಮೂಲಕ ಸಂದೇಶ ಕಳಿಸಬಹುದು