News

Gruha Jyothi ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಇನ್ನೊಂದು ಸುದ್ದಿ: ಇಷ್ಟು ಮಾಡಿ ಉಚಿತ ವಿದ್ಯುತ್‌ ಪಡೆಯಿರಿ

12 July, 2023 2:02 PM IST By: Kalmesh T
Gruha Jyoti scheme Update : Do this and get free electricity

Gruha Jyoti scheme Update : ಚುಣಾವನಾ ಪೂರ್ವದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾಗಿದ್ದ ಗೃಹಜ್ಯೋತಿ ಯೋಜನೆ ಇದೀಗ ಜಾರಿಯಾಗಿ ಎಲ್ಲೆಡೆ ಅರ್ಜಿ ಕೂಡ ಸಲ್ಲಿಸಲಾಗುತ್ತಿದೆ. ಹಾಗಿದ್ರೆ ಇಷ್ಟು ಮಾಡಿ ಉಚಿತ ವಿದ್ಯುತ್‌ ಪಡೆಯಬಹುದು ನೋಡಿ.

ಧಾರವಾಡ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯ ನೊಂದಣಿಗಾಗಿ ಅರ್ಜಿಗಳನ್ನು ಗ್ರಾಮೀಣ ಪ್ರದೇಶದ ಫಲಾನುಭವಿಗಳು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್‌ಗಳ ಮೂಲಕವು ಸಲ್ಲಿಸಬಹುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದ್ದಾರೆ.

Gruha Jyoti scheme latest update : ಉಚಿತ ವಿದ್ಯುತ್‌ ಪಡೆಯುವ ಸಲುವಾಗಿ ಈಗಾಗಲೇ ಎಲ್ಲರೂ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದೀರಿ. ಆದರೆ, ಕೆಲವೊಂದಿಷ್ಟು ಜನರಿಗೆ ಇನ್ನೂ ಅರ್ಜಿ ಸಲ್ಲಿಸಲು ಆಗಿರಲಿಕ್ಕಿಲ್ಲ.

ಇಂತವರಿಗಾಗಿಯೇ ಇದೀಗ ಹೊಸ ಅನುಕೂಲವೊಂದನ್ನು ಮಾಡಿಕೊಲಾಗಿದೆ. ಅದು ಏನೆಂದರೆ ಗೃಹಜ್ಯೋತಿ ಅರ್ಜಿ ಸಲ್ಲಿಸಲು ಇನ್ಮುಂದೆ ಗ್ರಾಮಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಕೂಡ ಅವಕಾಶ ಕಲ್ಪಿಸಿಕೊಡಲಾಗಿದೆ.

gruha jyothi scheme guidelines : ಈ ಕುರಿತು ಪ್ರಕಟಣೆ ನೀಡಿರುವ ಅವರು ಅರ್ಜಿಗಳನ್ನು ಸಲ್ಲಿಸಲು ಪ್ರತಿ ಅರ್ಜಿಗೆ ₹20 ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದರ ಹೊರತಾಗಿ ಇನ್ಯಾವುದೇ ಹೆಚ್ಚುವರಿ ಶುಲ್ಕ ಸಂದಾಯ ಮಾಡದೇ ಫಲಾನುಭವಿಗಳು ತಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಗ್ರಾಮ ಪಂಚಾಯತಿಗಳಿಗೆ ಸೇವಾಸಿಂಧು ಪೋರ್ಟಲ್‌ನ ಲಾಗಿನ್‍ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

1 ಕೋಟಿಗೂ ಹೆಚ್ಚು ನೋಂದಣಿ

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಗೆ 1 ಕೋಟಿಗೂ ಹೆಚ್ಚು ಕುಟುಂಬಗಳು ರಿಜಿಸ್ಟರ್ ಮಾಡಿಕೊಂಡಿದ್ದು ಯೋಜನೆಯು ಹೊಸ ಮೈಲಿಗಲ್ಲನ್ನು ಮುಟ್ಟಿದೆ. ಇದು ಕಾಂಗ್ರೆಸ್ ಪಕ್ಷದ ಮೇಲೆ ಜನ ಇಟ್ಟಿರುವ ಭರವಸೆಯ ಪ್ರತೀಕ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಟ್ವೀಟ್‌ ಮಾಡಿದ್ದಾರೆ.

PM Suraksha Bima Yojana : ಕೇವಲ ₹20 ಹೂಡಿಕೆ, 2 ಲಕ್ಷದ ಲಾಭ! ಪಡೆಯುವುದು ಹೇಗೆ ಗೊತ್ತೆ?