News

ರೈತರ ಆದಾಯ ದ್ವಿಗುಣಗೊಳಿಸಲು ಬಿದಿರು ಪ್ರಮುಖ ಬೆಳೆ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

27 February, 2021 8:16 AM IST By:

ಕೇಂದ್ರ ಸರ್ಕಾರವು ಬಿದಿರು ವಲಯದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ, ಏಕೆಂದರೆ ಈ ಬೆಳೆಯು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಅವರು ರಾಷ್ಟ್ರೀಯ ಬಿದಿರು ಮಿಷನ್, ನೀತಿ ಆಯೋಗ ಮತ್ತು ಇನ್ವೆಸ್ಟ್ ಇಂಡಿಯಾ ಜಂಟಿಯಾಗಿ ಎರಡು ದಿನಗಳ ಕಾಲ  ಹಮ್ಮಿಕೊಂಡ 'ಭಾರತದಲ್ಲಿ ಬಿದಿರುಗಳಿಗೆ ಅವಕಾಶಗಳು ಮತ್ತು ಸವಾಲುಗಳ ಕುರಿತ ರಾಷ್ಟ್ರೀಯ ಸಮಾಲೋಚನೆ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಿದಿರು ಬೆಳೆಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯಾಗುವುದಲ್ಲದೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು ಮತ್ತು ವಿಶೇಷವಾಗಿ ಈಶಾನ್ಯ ಭಾಗದಲ್ಲಿ ಜನರ ಜೀವನಾಧಾರವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

.ಸಣ್ಣ ಮತ್ತು ಅತಿ ಸಣ್ಣ ರೈತರು ಬಿದಿರು ಕೃಷಿಯನ್ನು ಅಳವಡಿಸಿಕೊಳ್ಳಬಹುದು., ಬಿದಿರು ವಲಯಕ್ಕೆ ಎಫ್ ಪಿಓಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಪ್ರಸ್ತಾವನೆಗಳನ್ನು ಕಳುಹಿಸುವಂತೆ ಒತ್ತಾಯಿಸಬೇಕೆಂದರು.

ಮೊಳಕೆಯೊಡೆಯುವ ಹಂತದಲ್ಲಿ ಬಿದಿರು ಪ್ರಭೇದಗಳನ್ನು ಗುರುತಿಸಲು ಮತ್ತು ಗುಣಮಟ್ಟವನ್ನು ಗುರುತಿಸಲು ತೊಂದರೆಯ ಯಾಗುವುದರಿಂದ  ನರ್ಸರಿಗಳನ್ನು ನೀಡಲು ಮುಂದಾಗಿದ್ದ ರಾಷ್ಟ್ರೀಯ ಬಿದಿರು ಮಿಷನ್ ಅನ್ನು ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ. ನರ್ಸರಿಗಳನ್ನು ಗುರುತಿಸುವ ಕಾರ್ಯ ಸದ್ಯ ನಡೆಯುತ್ತಿದ್ದು, ರೈತರು ಹಾಗೂ ಉದ್ಯಮಗಳಿಗೆ ಮಾರ್ಗದರ್ಶನ ನೀಡಲು ಈ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯವಾಗಿ ಪ್ರಮುಖ ಬಿದಿರು ಸಸಿಗಳನ್ನು ನೆಡಲಾಗಿದೆ. ರೈತರಿಗೆ ಗುಣಮಟ್ಟದ ತೋಟಗಾರಿಕೆ ಸಾಮಗ್ರಿಗಳನ್ನು ಪೂರೈಸುವ ಉದ್ದೇಶದಿಂದ ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ 329 ನರ್ಸರಿಗಳನ್ನು ಸ್ಥಾಪಿಸಲಾಯಿತು. ಇದರ ಜೊತೆಗೆ ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ 79 ಬಿದಿರಿನ ಮಾರುಕಟ್ಟೆಗಳನ್ನು ರಚಿಸಲಾಗಿದೆ.

ರಾಷ್ಟ್ರೀಯ ಬಿದಿರು ಮಿಷನ್ ಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಾರ್ವಜನಿಕ ಮತ್ತು ಖಾಸಗಿ ಉದ್ಯಮಿಗಳ ಒಗ್ಗೂಡುವಿಕೆ ಹಾಗೂ  ರೈತರ ಮತ್ತು ಸ್ಥಳೀಯ ಆರ್ಥಿಕತೆಯ ಸ್ಥಿತಿಯನ್ನು ಸುಧಾರಿಸಲು ಸರ್ಕಾರದ ಪ್ರಯತ್ನ ನಡೆದಿದೆ ಎಂದು ಹೇಳಿದರು.