News

ಡಿಸೆಂಬರ್ 21ರವರೆಗೆ ಬೆಂಬಲ ಬೆಲೆಯಡಿ ಶೇಂಗಾ ಖರೀದಿ

13 December, 2020 6:01 PM IST By:

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಡಿ.21ರವರೆಗೆ ತುಮಕೂರು ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಶೇಂಗಾ ಖರೀದಿ ನಡೆಯಲಿದೆ. ಪ್ರತಿ ಕ್ವಿಂಟಲ್ ಗುಣಮಟ್ಟದ ಶೇಂಗಾವನ್ನು  5,275ಕ್ಕೆ ಖರೀದಿಸಲಾಗುತ್ತದೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ (6360169578), ಕೋಟಗುಡ್ಡ (6360468516), ಪಾವಗಡ ಎಪಿಎಂಸಿ (9902374118, 9740347138), ಮಧುಗಿರಿ ತಾಲ್ಲೂಕಿನ ಹೊಸಕೆರೆ (8970740935), ಕೋಟಿಗಾರ‍್ಗಹಳ್ಳಿ (9972603500), ಮಧುಗಿರಿ ಎಪಿಎಂಸಿ (9880624619), ಶಿರಾ ಎಪಿಎಂಸಿ (9844514038) ಮತ್ತು ಹುಲಿಕುಂಟೆ (9742645488)ಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.

ಖರೀದಿ ಕೇಂದ್ರಗಳಿಗೆ ಶೇಂಗಾ ಮಾದರಿಯನ್ನು ತಂದು ಗುಣಮಟ್ಟ ಪರೀಕ್ಷಿಸಿಕೊಳ್ಳಬೇಕು. ನಂತರ ನೋಂದಣಿ ಮಾಡಿಸಿಕೊಳ್ಳಬೇಕು.

ಶೇಂಗಾ ಗುಣಮಟ್ಟದಲ್ಲಿ ಇದ್ದರೆ ಅದನ್ನು ತರುವ ದಿನಾಂಕದ ಬಗ್ಗೆ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನೇರವಾಗಿ ಖರೀದಿ ಕೇಂದ್ರಗಳು ಅಥವಾ ಮೊಬೈಲ್ ಸಂಪರ್ಕಿಸಬಹುದು.