Dearness allowance : ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ತುಟ್ಟಿಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿದೆ ವಿವರ
state hike dearness allowence : ಇತ್ತೀಚಿಗೆ ಕರ್ನಾಟಕದ ಚುಣಾವಣೆ ಮುಗಿದು ಹೊಸ ಸರ್ಕಾರ ರಚನೆ ಆಗಿದೆ. ಆದರೆ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ನೀಡಲಾಗಿದೆ.
ತುಟ್ಟಿ ಭತ್ಯೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ಮಾಡಿದ್ದಾರೆ. ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶೇ 4ರಷ್ಟು ಹೆಚ್ಚಳ ಮಾಡಲಾಗಿದೆ.
7th Pay Commission : ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಮಾಣವು 31ರಷ್ಟಿದ್ದು, ಅದನ್ನು 35ಕ್ಕೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.
ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಮಾಣವು 31ರಿಂದ 35ಕ್ಕೆ ಹೆಚ್ಚಳವಾದಂತಾಗಿದೆ.
ಇನ್ನು 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಸರ್ಕಾರ ನೌಕರರಿಗೆ ಜನವರಿಯಿಂದ ಅಂದರೆ 2023ರ ಜನವರಿ ಒಂದರಿಂದ ಅನ್ವಯವಾಗುಂತೆ ಈ ಆದೇಶ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್
ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಮಾಣವು 31ರಷ್ಟಿದ್ದು, ಅದನ್ನು 35ಕ್ಕೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.
ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಮಾಣವು 31ರಿಂದ 35ಕ್ಕೆ ಹೆಚ್ಚಳವಾಗಿರುವುದನ್ನು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಖಚಿತ ಪಡಿಸಿದ್ದು, ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್‌ನಲ್ಲಿ ಆದೇಶದ ಪ್ರತಿಯನ್ನು ಲಗತಿಸಿದ್ದಾರೆ.
ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಸಂಬಂಧ ಸರ್ಕಾರಿ ನೌಕರರಿಂದ ಬೇಡಿಕೆ ಇತ್ತು. ಅಲ್ಲದೇ ಈ ಸಂಬಂಧ ಹಲವು ಚರ್ಚೆಗಳು ಸಹ ನಡೆದಿದ್ದವು.