News

ದ್ರಾಕ್ಷಿ, ದಾಳಿಂಬೆ, ಮಾವು ವಿಮೆ ಕಟ್ಟಲು ನ. 15 ಕೊನೆಯ ದಿನ

08 November, 2020 1:43 PM IST By:

ವಾಣಿಜ್ಯ ಹಣ್ಣಿನ ಬೆಳೆಗಳಾದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳಿಗೆ 2020-21ನೇ ಸಾಲಿನ ಪರಿಷ್ಕೃತ ಹವಾಮಾನಾಧಾರಿತ ವಿಮಾ ಯೋಜನೆ ಈಗಾಗಲೇ ಪ್ರಕಟವಾಗಿದ್ದು, ವಿಮಾ ಕಂತು ಕಟ್ಟಲು ನ.15 ಕೊನೆಯ ದಿನವಾಗಿದೆ.

ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಪರಿಷ್ಕೃತ ಹವಾಮಾನಾಧಾರಿತ ವಿಮೆ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರವನ್ನು ನ.10 ರಂದು ಜಿಲ್ಲೆಯ ಕಲ್ಲಬಾವಿ ಮತ್ತು ಕನಕಗಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಜರಾಗಿ ಪರಿಷ್ಕೃತ ಹವಾಮಾನಾಧಾರಿತ ವಿಮಾ ಯೋಜನೆ ಬಗ್ಗೆ ಇರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು ದೂ- 08539-231530, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಕ ಮೊ-. 8861697989, ಗಂಗಾವತಿ ಮೊ- 7760967550, ಕುಷ್ಟಗಿ ಮೊ- 8861697989, ಯಲಬುರ್ಗಾ ಮೊ- 9945644338 ಹಾಗೂ ಕೊಪ್ಪಳ ಹಾರ್ಟಿಕ್ಲಿನಿಕ್ ವಿಷಯ ತಜ್ಞರು ಮೊ- 9482672039 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಮಾವು ಬೆಳೆ ವಿಮೆಗೆ ನ. 15 ರವರೆಗೆ ಅವಕಾಶ

ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಬೆಳೆ ವಿಮೆ ಮಾಡಿಸಲು ಅವಕಾಶ ನೀಡಲಾಗಿದೆ.

ಪ್ರತಿ ಹೆಕ್ಟೇರ್ ವಿಮೆ ಮೊತ್ತ. 80 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ  4 ಸಾವಿರ ಆಗಿದೆ. ವಿಮಾ ಮೊತ್ತವನ್ನು ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಪ್‌ ಇಂಡಿಯಾ ವಿಮಾ ಸಂಸ್ಥೆಯಲ್ಲಿ ನ.15ರ ಒಳಗಾಗಿ ಪಾವತಿಸಬಹುದು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೊಜನೆಯಡಿಯಲ್ಲಿ ಹಿಂಗಾರು 2020-21ರ ಹಂಗಾಮಿಗೆ ಟೊಮೆಟೊ ಬೆಳೆಗೂ ಅವಕಾಶವಿದ್ದು, ಪ್ರತಿ ಹೆಕ್ಟೇರ್‌ ವಿಮಾ ಮೊತ್ತ 1.18 ಲಕ್ಷ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತು  5,900 ಆಗಿದೆ.

ವಿಮೆಯನ್ನು ಹತ್ತಿರದ ಆರ್ಥಿಕ ಸಂಸ್ಥೆಗಳಲ್ಲಿ ಪಾವತಿಸಬಹುದು ಅಥವಾ ರೈತರು ಬೆಳೆವಾರು ವಿಮೆಗಾಗಿ samrakshane.nic.in ಮೂಲಕ ನೊಂದಾಯಿಸಿಕೊಳ್ಳಬಹುದು. ಮಾಹಿತಿಗೆ ದೂ: 0821-4261600 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.