News

ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆ

30 November, 2020 5:20 PM IST By:

ಕರ್ನಾಟಕದಲ್ಲಿ ಕೊನೆಗೂ ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಡಿಸೆಂಬರ್ 22 ಹಾಗೂ 27ರಂದು ಕರ್ನಾಟಕದ 30 ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಕರ್ನಾಟಕದ 30 ಜಿಲ್ಲೆಗಳಲ್ಲಿ 5,762ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದದಲ್ಲಿ ಚುನಾವಣೆಯನ್ನು  ರಾಜ್ಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಡಿಸೆಂಬರ್ 22 ಮತ್ತು 27 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30 ರಂದು ಫಲಿತಾಂಶ ಪ್ರಕಟವಾಗಲಿದೆ.

ಒಟ್ಟು 6004 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 162 ಪಂಚಾಯಿತಿಗಳ ಅವಧಿ ಇನ್ನು ಮುಗಿದಿಲ್ಲ, ಹಾಗೂ ಇನ್ನಿತರ ಕಾರಣಗಳಿಂದ ಒಟ್ಟು 242 ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ ಒಟ್ಟಾರೆ 5762 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯಲಿದೆ.

ನಾಮಪತ್ರಗಳನ್ನು ಸಲ್ಲಿಸಲು 11/12/2020 ಕೊನೆಯ ದಿನಾಂಕ, ಹಾಗೂ 22 ಹಾಗೂ 27 ಎರಡು ಹಂತವಾಗಿ ಚುನಾವಣೆ ನಡೆಯಲಿದೆ, ಹಾಗೂ 30 ನೆ ತಾರೀಕಿನಂದು ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಒಂದೇ ಜಿಲ್ಲೆಯ ಹಲವು ತಾಲೂಕುಗಳನ್ನು ಮೊದಲ ಹಂತ ಅಂದರೆ ಡಿಸೆಂಬರ್ 22 ಹಾಗೂ ಉಳಿದ ತಾಲೂಕ ಗಳನ್ನು ಎರಡನೇ ಹಂತ ಡಿಸೆಂಬರ್ 27 ರಂದು ನಡೆಸಲು ತೀರ್ಮಾನಿಸಲಾಗಿದೆ.

 ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿಯಿಂದ ಹೋರಾಟ ನಡೆಯಲಿದೆ, ಹೀಗಾಗಿ ಹಲವಾರು ಗಲಭೆಗಳಾಗುವ ಕಾರಣದಿಂದ ಚುನಾವಣೆಯನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ, ಅದಲ್ಲದೆ ಈ ಕೊರೋನಾ  ಸಮಯದಲ್ಲಿ ನಾವೆಲ್ಲರೂ ಹೆಚ್ಚಿನ ಕಾಳಜಿಯಿಂದ ಚುನಾವಣೆಯನ್ನು ನಡೆಸಬೇಕಾಗಿ ಕೇಳಿಕೊಂಡಿದ್ದಾರೆ.

 ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ರಾಜ್ಯದಲ್ಲಿ ಈ ಕ್ಷಣದಿಂದಲೇ ನನೀತಿ ಸಂಹಿತೆ ಜಾರಿಯಾಗಿದೆ. ಇದು 30/11/2020 ರಿಂದ 31/12/2020 ಸಂಜೆ 5 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ. ಚುನಾವಣೆಯ ಸಮಯದಲ್ಲಿ  ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ