ಶಾಸಕರು ಹಾಗೂ ಸಚಿವರು ರೆಸಾರ್ಟ್ ರಾಜಕೀಯ ಮಾಡುವುದು ನೋಡಿರುತ್ತೀರಿ. ಶಾಸಕರು ವಾರಗಟ್ಟಲೆ ರೆಸಾರ್ಟ್, ಹೋಟೆಲ್‌ಗಳಲ್ಲಿ ರಾಜಕೀಯ ಹೈಡ್ರಾಮ
ಮಾಡುವುದು ರಾಜ್ಯದ ಮಟ್ಟಿಗಂತೂ ಹೊಸದಲ್ಲ. ಆದರೆ, ಗ್ರಾಮ ಪಂಚಾಯ್ತಿ ಸದಸ್ಯರೂ ಈ ರೀತಿ ರೆಸಾರ್ಟ್ ರಾಜಕೀಯ ಪ್ರಾರಂಭಿಸಿರುವುದು ಅಚ್ಚರಿಯೇ.
ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಹೈಅಲರ್ಟ್ ಘೋಷಣೆ!
ಹೌದು, ಗ್ರಾಮ ಪಂಚಾಯ್ತಿ ಸದಸ್ಯರ ರೆಸಾರ್ಟ್ ರಾಜಕೀಯಕ್ಕೂ ಹಾವೇರಿ ಜಿಲ್ಲೆ ಸಾಕ್ಷಿಯಾಗಿದೆ.
ಅದೂ ಸಹ ಒಂದಲ್ಲ ಎರಡಲ್ಲ ಬರೋಬ್ಬರಿ 42 ದಿನಗಳ ಕಾಲ ಗ್ರಾಮ ಪಂಚಾಯ್ತಿ ಸದಸ್ಯರು ರೆಸಾರ್ಟ್‌ನಲ್ಲಿ ಇದ್ದು ಬಂದಿದ್ದಾರೆ.
ಹಾವೇರಿಯ ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರಿನ ರೆಸಾರ್ಟ್‌ನಲ್ಲಿ 40 ದಿನ ಇದ್ದು,
ವಿಮಾನದಲ್ಲಿ ಬಂದು ಅಧ್ಯಕ್ಷನನ್ನು ಪದಚ್ಯುತಿ ಮಾಡಿದ್ದಾರೆ!
ಇಲ್ಲಿನ ದೇವರಗುಡ್ಡದ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಲತೇಶ ದುರಗಪ್ಪ ನಾಯರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಗ್ರಾಮ
ಪಂಚಾಯತಿ ಸದಸ್ಯರು ನಿರ್ಧರಿಸಿದ್ದರು. ಒಟ್ಟು 9 ಸದಸ್ಯರು ಬೆಂಗಳೂರಿನ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು.
ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಸದಸ್ಯರಿದ್ದಾರೆ.
ಅದರಲ್ಲಿ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಬಣದ 9 ಸದಸ್ಯರಿದ್ದಾರೆ.
Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ!
ಉಳಿದ ನಾಲ್ವರು ಬಿಜೆಪಿ ಸದಸ್ಯರಿದ್ದಾರೆ. ಗ್ರಾಮ ಪಂಚಾಯಿತಿಗೆ ಮಾಲತೇಶ ದುರಗಪ್ಪ ನಾಯರ್ ಅಧ್ಯಕ್ಷರಾಗಿದ್ದರು.
ಅಧ್ಯಕ್ಷರ ಆಡಳಿತಾವಧಿ ವಿಚಾರದಲ್ಲಿ ನಡೆದ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸುವುದಾಗಿ ಮಾಲತೇಶ್ ಒಪ್ಪಿಕೊಂಡಿದ್ದರು.
ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ 15 ತಿಂಗಳಾದ ಬಳಿಕ ಸುರೇಶ್ ತಳಗೇರಿ ಎಂಬುವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಪ್ರಮಾಣವನ್ನೂ ಮಾಡಿದ್ದರು.
ಆದರೆ, 15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತೇಶ್ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು ಮುಂದಾಗಿದ್ದಾರೆ.
ಆದರೆ, ಮಾಲತೇಶ್ ಗ್ರಾಮ ಪಂಚಾಯತಿ ಸದಸ್ಯರನ್ನು ಸೆಳೆಯಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಸಂತೋಷ ಭಟ್
ಗುರೂಜಿ ತಮ್ಮ ಬಣದ 9 ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ಗೆ ಸ್ಥಳಾಂತರಿಸಿದ್ದರು. ಅಧ್ಯಕ್ಷರ ವಿರುದ್ಧ ಅವಿಶ್ವಾಸ
ನಿರ್ಣಯ ಮಂಡನೆ ಇದ್ದ ಕಾರಣ 9 ಸದಸ್ಯರು ರೆಸಾರ್ಟ್‌ನಿಂದ ವಿಮಾನದಲ್ಲಿ ಆಗಮಿಸಿದರು.
ಹಾವೇರಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜು ಕಲ್ಕೋಟಿ ಅವರನ್ನು ಸಂಪರ್ಕಿಸಿ ವರದಿಯ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ಮುಂದಿನ ಅಧ್ಯಕ್ಷರಾಗಿ ಸುರೇಶ ತಲಗೇರಿ ಬರುವ ಸಾಧ್ಯತೆ ಇದೆ. ಎಲ್ಲ 13 ಸದಸ್ಯರ ಜಿಲ್ಲಾ ಪಂಚಾಯ್ತಿ ಸಭೆ ಕರೆದರೆ,
ನೂತನ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತರು ಇರಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.